newsics.com
ನವದೆಹಲಿ: ಕೇಂದ್ರ ವಿಶ್ವವಿದ್ಯಾನಿಲಯಗಳ ಪದವಿ ತರಗತಿಗಳ ಪ್ರವೇಶಾತಿಗೆ ಉನ್ನತ ಗುಣಮಟ್ಟದ ಬೌದ್ಧಿಕ ಸಾಮರ್ಥ್ಯ ಪರೀಕ್ಷೆ (ಹೈ ಕ್ವಾಲಿಟಿ ಆಪ್ಟಿಟ್ಯೂಡ್ ಪರೀಕ್ಷೆ) ನಡೆಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಈ ಸಂಬಂಧ ಪರೀಕ್ಷಾ ವಿಧಾನಗಳ ಕುರಿತು ಶಿಫಾರಸು ಮಾಡಲು ಏಳು ಸದಸ್ಯರ ಸಮಿತಿಯನ್ನು ರಚಿಸಿದೆ. ಕಾಲೇಜು ಪ್ರವೇಶ ಪ್ರಕ್ರಿಯೆ ವೇಳೆ 12ನೇ ತರಗತಿ ಫಲಿತಾಂಶದ ಆಧಾರದ ಕಟ್ಆಫ್ ಮಾರ್ಕ್ನ ಕಿರಿಕಿರಿಯನ್ನು ತಪ್ಪಿಸುವ ಉದ್ದೇಶದಿಂದ ಸರ್ಕಾರ ಈ ಕ್ರಮ ಕೈಗೊಂಡಿದೆ. 2021-22ರ ಶೈಕ್ಷಣಿಕ ವರ್ಷದಲ್ಲೇ ಕೇಂದ್ರ ವಿ.ವಿ.ಗಳ ಪ್ರವೇಶಾತಿಗೆ ಸಾಮಾನ್ಯ ಪ್ರವೇಶ ಪರೀಕ್ಷೆ ನಿಯಮ ಜಾರಿಗೊಳಿಸುವ ಪ್ರಯತ್ನ ನಡೆದಿದೆ.
ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಟಿಎ) ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ ಬರೆದರಷ್ಟೇ ಕೇಂದ್ರ ವಿ.ವಿ.ಗಳಿಗೆ ಪ್ರವೇಶ ಪಡೆಯಲು ಸಾಧ್ಯವಾಗುತ್ತದೆ. ಒಂದು ಸಾಮಾನ್ಯ ಪರೀಕ್ಷೆಯಿರಲಿದ್ದು, ಜತೆಗೆ ಆಯಾ ವಿಷಯಾಧಾರಿತ ಪರೀಕ್ಷೆಗಳನ್ನೂ ನಡೆಸಲಾಗುವುದು ಎಂದು ಉನ್ನತ ಶಿಕ್ಷಣ ಕಾರ್ಯದರ್ಶಿ ಅಮಿತ್ ಖಾರೆ ಹೇಳಿದ್ದಾರೆ.
ಡಿ.31ರಂದು ಸಿಬಿಎಸ್ಇ ಪರೀಕ್ಷಾ ವೇಳಾಪಟ್ಟಿ ಪ್ರಕಟ
ಜ.1ರಿಂದಲೇ ಶಾಲಾ ಕಾಲೇಜು ಆರಂಭ; ಮಾರ್ಗಸೂಚಿ ಬಿಡುಗಡೆ