newsics.com
ಮೈಸೂರು; ಯೋಗದಿಂದ ರೋಗಗಳಿಂದ ದೂರವಿರಬಹುದು. ಯೋಗದಿಂದ ವಿಶ್ವ ಶಾಂತಿ ಸಾಧ್ಯ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು.
ಅಂತಾರಾಷ್ಟ್ರೀಯ ಯೋಗ ದಿನವಾದ ಇಂದು ಮೈಸೂರಿನ ಅರಮನೆ ಆವರಣದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ವಿಶ್ವದ ಜನತೆಗೆ 8ನೇ ಅಂತಾರಾಷ್ಟ್ರೀಯ ಯೋಗ ದಿನದ ಶುಭಾಶಯಗಳು. ಸಾಂಸ್ಕೃತಿಕ ನಗರಿ ಮೈಸೂರಿಗೆ ನನ್ನ ಪ್ರಣಾಮಗಳು ಯೋಗ ಇಂದು ಪ್ರಪಂಚದ ಮೂಲೆ ಮೂಲೆಯಲ್ಲೂ ವ್ಯಾಪಿಸಿದೆ. ಈ ವರ್ಷದ ಯೋಗ ದಿನದಂದು ಧ್ಯೇಯವೂ ಮಾನವೀಯತೆಗಾಗಿ ಯೋಗ ಎನ್ನುವುದಿದೆ. ಋಷಿ ಮುನಿಗಳು ಯೋಗದಿಂದ ವಿಶ್ವಕ್ಕೆ ಶಾಂತಿ ಸಾರಿದರು. ಯೋಗದಿಂದ ವಿಶ್ವಕ್ಕೆ ಒಳಿತಾಗಲಿದೆ ಎಂದು ಅವರು ಹೇಳಿದರು.
ಯೋಗ ಮಾಡುವುದರಿಂದ ನೆಮ್ಮದಿ ಇದೆ. ಅದೇ ಮಾರ್ಗದಲ್ಲಿ ಮುಂದುವರೆಯೋಣ. ಯೋಗದ ನೆಮ್ಮದಿಯ ಭಾವವನ್ನು ಸಂಭ್ರಮಿಸೋಣ ಎಂದರು.