newsics.com
ಹಾಂಗ್ಕಾಂಗ್: ‘ವಿಶ್ವದ ನಂಬರ್ 1 ಶ್ರೀಮಂತ’ ಪಟ್ಟವನ್ನು ಟೆಸ್ಲಾ ಹಾಗೂ ಟ್ವಿಟರ್ ಮುಖ್ಯಸ್ಥ ಎಲಾನ್ ಮಸ್ಕ್ ಕಳೆದುಕೊಳ್ಳಲಿದ್ದಾರೆಯೇ?
ನಂಬರ್ 1 ಪಟ್ಟ ಕಳೆದುಕೊಳ್ಳುವುದು ಬಹುತೇಕ ಖಚಿತ ಎಂದು ಪೋರ್ಬ್ಸ್ ನಿಯತಕಾಲಿಕದ ಮಾಹಿತಿ ಆಧರಿಸಿ ರಾಯಿಟರ್ಸ್ ವರದಿ ಮಾಡಿದೆ.
ಸೆಪ್ಟೆಂಬರ್ 2021ರಿಂದ ಫೋರ್ಬ್ಸ್ ಪಟ್ಟಿಯಲ್ಲಿ ಅಗ್ರಸ್ಥಾನ ಹೊಂದಿದ್ದ ಮಸ್ಕ್, 185.7 ಬಿಲಿಯನ್ ಡಾಲರ್ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ. ಶ್ರೀಮಂತಿಕೆಯಲ್ಲಿ ಅಮೇಜಾನ್.ಕಾಂ
(Amazon.com (AMZN.O) ಸಂಸ್ಥಾಪಕ ಜೆಫ್ ಬೆಜೋಸ್ ಅವರನ್ನು ಹಿಂದಿಕ್ಕಿ ನಂಬರ್ ಒನ್ ಪಟ್ಟಕ್ಕೇರಿದ್ದರು.
ಆದರೆ, ಈ ವರ್ಷದ ಆರಂಭದಲ್ಲಿ ಮಸ್ಕ್ ಟ್ವಿಟರ್ ಖರೀದಿ ಪ್ರಸ್ತಾಪವನ್ನು ಮಾಡಿದ ಬಳಿಕ ಶೇ.47 ಕ್ಕಿಂತ ಹೆಚ್ಚು ಸಂಪತ್ತನ್ನು ಕಳೆದುಕೊಂಡಿದ್ದು, ಟೆಸ್ಲಾ ಷೇರುಗಳು ಶೇ.2.7ನಷ್ಟು ಕಡಿಮೆಯಾಗಿವೆ.
ಲಾಭ ಗಳಿಕೆಯಲ್ಲಿ ಲೂಯಿಸ್ ವಿಟಾನ್ನ ಪೋಷಕ ಕಂಪನಿ ಎಲ್ವಿಎಂಎಚ್ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಬರ್ನಾರ್ಡ್ ಅರ್ನಾಲ್ಟ್ ಹಾಗೂ ಅವರ ಕುಟುಂಬ 185.8 ಶತಕೋಟಿ ಡಾಲರ್ ಹೊಂದಿದ್ದು, ನಂಬರ್ 1 ಶ್ರೀಮಂತ ಪಟ್ಟ ದಕ್ಕಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ.
ನವೆಂಬರ್ 8 ರಂದು ಮಸ್ಕ್ ಅವರ ನಿವ್ವಳ ಮೌಲ್ಯವು 200 ಶತಕೋಟಿ ಡಾಲರ್ಗಿಂತ ಕಡಿಮೆಯಿತ್ತು, ಅಂದರೆ 185.7 ಶತಕೋಟಿ ಡಾಲರ್ ಹೊಂದಿದ್ದರು. ಹೂಡಿಕೆದಾರರು ಟೆಸ್ಲಾ ಅವರ ಷೇರುಗಳನ್ನು ಹಿಂಪಡೆದ ಹಿನ್ನೆಲೆಯಲ್ಲಿ ಮಸ್ಕ್ ನಷ್ಟ ಅನುಭವಿಸಿದ್ದರು ಎಂದು ಪೋರ್ಬ್ಸ್ ಹೇಳಿದೆ.