Thursday, October 29, 2020

ಬೆಂಗಳೂರಲ್ಲಿ ವರ್ಕ್ ಫ್ರಮ್ ಹೋಮ್’ಗೇ ಐಟಿ ಕಂಪನಿಗಳ ಒಲವು

ಬೆಂಗಳೂರು: ಕೊರೋನಾ ಲಾಕ್’ಡೌನ್ ಹಿನ್ನೆಲೆಯಲ್ಲಿ ವರ್ಕ್ ಫ್ರಮ್ ಹೋಮ್’ಗೆ ಆದ್ಯತೆ ನೀಡಲು ಬೆಂಗಳೂರಿನ ಐಟಿ ಕಂಪನಿಗಳು ಬಯಸಿವೆ.
ತಕ್ಷಣವೇ ಕೆಲಸಕ್ಕೆ ಹಿಂತಿರುಗಬೇಕು ಎನ್ನುವ ತುರ್ತಿನಲ್ಲಿ ನಾವಿಲ್ಲ. ಮೊದಲನೇ ಹಂತದಲ್ಲಿ 5 ಪರ್ಸೆಂಟ್’ಗಿಂತ ಕಡಿಮೆ ಮಂದಿ ಕೆಲಸಕ್ಕಾಗಿ ಕಚೇರಿಗೆ ಹಿಂತಿರುಗಬಹುದು. ಬಳಿಕ ಹಂತ ಹಂತವಾಗಿ ಉದ್ಯೋಗಕ್ಕೆ ಮರಳಲಿದ್ದಾರೆ ಎಂದು ಇನ್ಫೋಸಿಸ್ ಚೀಫ್ ಆಪರೇಟಿಂಗ್ ಆಫೀಸರ್ ಬಿ. ಪ್ರವೀಣ್ ರಾವ್ ಹೇಳಿದ್ದಾರೆ.
ಕೇರಳದಲ್ಲಿ ಸೀಮಿತ ಸಂಖ್ಯೆಯ ಸಿಬ್ಬಂದಿಯೊಂದಿಗೆ ವಿಪ್ರೋ ಕಾರ್ಯನಿರ್ವಹಣೆ ಆರಂಭಿಸಿದೆ. ಆದರೆ ಬೆಂಗಳೂರಿನಲ್ಲಿ ವರ್ಕ್ ಫ್ರಮ್ ಹೋಮ್ ಅನ್ನು ಮುಂದುವರಿಸುವುದಕ್ಕೆ ತೀರ್ಮಾನ ಮಾಡಿದೆ.
ಸಾರ್ವಜನಿಕ ಸ್ವಾಮ್ಯದ ಎಚ್’ಎಎಲ್ ಕಳೆದ ಮಂಗಳವಾರದಿಂದ ಶೇಕಡಾ ನೂರರಷ್ಟು ಕಾರ್ಯನಿರ್ವಹಣೆಯನ್ನು ಎರಡು ಪಾಳಿಯಲ್ಲಿ ಆರಂಭಿಸಿದೆ. ಕರ್ನಾಟಕ ಹೈಕೋರ್ಟ್’ನಲ್ಲಿ ಸೀಮಿತ ಸಂಖ್ಯೆಯ ಪೀಠಗಳು ಕಾರ್ಯನಿರ್ವಹಿಸಲಿವೆ.

ಮತ್ತಷ್ಟು ಸುದ್ದಿಗಳು

Latest News

ವಿಶ್ವದಲ್ಲಿ ಮತ್ತೆ ಕೊರೋನಾ ಪ್ರಮಾಣ ಹೆಚ್ಚಳ- WHO ಕಳವಳ

newsics.comನವದೆಹಲಿ: ಜಗತ್ತಿನ ವಿವಿಧ ದೇಶಗಳಲ್ಲಿ ಕಳೆದೊಂದು ವಾರದಲ್ಲಿ 2 ಮಿಲಿಯನ್ ಹೊಸ ಕೊರೋನಾ ಪ್ರಕರಣಗಳು ದಾಖಲಾಗಿವೆ. ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಪ್ರಕರಣ...

ಎಡನೀರು ಮಠದಲ್ಲಿ ಸಚ್ಚಿದಾನಂದ ಭಾರತಿ ಸ್ವಾಮೀಜಿ ಪೀಠಾರೋಹಣ

newsics.com ಕಾಸರಗೋಡು:  ಕೇರಳದ ಕಾಸರಗೋಡು ಸಮೀಪದ ಎಡನೀರು ಮಠದ ನೂತನ ಮಠಾಧಿಪತಿ ಸಚ್ಚಿದಾನಂದ ಭಾರತಿ ಸ್ವಾಮೀಜಿ  ಅವರ ಪೀಠಾರೋಹಣ ಸಮಾರಂಭ ಇಂದು ನಡೆಯಿತು. ಕರ್ನಾಟಕದ ಹಲವು ಮಠಗಳ ಸ್ವಾಮೀಜಿಗಳು, ರಾಜಕೀಯ ನಾಯಕರು ಮತ್ತು ಗಣ್ಯರು ಈ...

ಇರಾನ್’ನಲ್ಲಿ ಭೂಗರ್ಭ ಅಣ್ವಸ್ತ್ರ ಘಟಕ; ಹೆಚ್ಚಿದ ಆತಂಕ

newsics.comದುಬೈ: ಇರಾನ್ ಭೂಗರ್ಭ ಅಣ್ವಸ್ತ್ರ ತಯಾರಿಕಾ ಘಟಕವನ್ನು ಆರಂಭಿಸಿದ್ದು, ಏಷ್ಯಾ ಮತ್ತು ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಆತಂಕ ಸೃಷ್ಟಿಯಾಗಿದೆ.ನಟಾಂಝ್ ಪ್ರದೇಶದಲ್ಲಿ ಇರಾನ್‍ ತನ್ನ ಅಣ್ವಸ್ತ್ರಗಳ ತಯಾರಿಕಾ ಘಟಕ ಆರಂಭಿಸಿರುವುದನ್ನು ಉಪಗ್ರಹ ಚಿತ್ರಗಳು...
- Advertisement -
- Advertisement -
error: Content is protected !!