Wednesday, October 28, 2020

ಇದು ಅಪರೂಪದ ಧಾಮ; ಶೋಷಿತ ಪತಿಯರಿಗಾಗಿ ಈ ಆಶ್ರಮ!

newsics.com
ಔರಂಗಾಬಾದ್(ಮಹಾರಾಷ್ಟ್ರ): ಇಲ್ಲೊಂದು ಅಪರೂಪದ ಆಶ್ರಮವಿದೆ. ಕಾಗೆ ಈ ಆಶ್ರಮದ ಲಾಂಛನ. ಆದರೆ ಈ ಆಶ್ರಮದಲ್ಲಿ ಅನಾಥರಾಗಲೀ, ವೃದ್ಧರಾಗಲೀ, ಮಕ್ಕಳಾಗಲೀ ಇಲ್ಲ. ಬದಲಿಗೆ ಪತ್ನಿಯರಿಂದ ಶೋಷಣೆಗೊಳಗಾಗಿ ಯಾತನೆ ಅನುಭವಿಸಿದ ಪತಿಯಂದಿರಿದ್ದಾರೆ!
ಪತ್ನಿಯಿಂದ ಹಿಂಸೆಗೊಳಗಾದ ಪತಿಯರು ಈ ಆಶ್ರಮದಲ್ಲಿ ಆಶ್ರಯ ಪಡೆಯಬಹುದು. ಈ ಆಶ್ರಮಕ್ಕೆ ಪ್ರವೇಶ ಪಡೆಯಲು ಕೆಲ ಪರೀಕ್ಷೆ ಪಾಸ್ ಆಗಬೇಕು. ಪರೀಕ್ಷೆಯಲ್ಲಿ ಪಾಸ್ ಆದರೆ ಆಶ್ರಮದಲ್ಲಿರಲು ಸಾಧ್ಯ. ಅಂದಹಾಗೆ ಈ ಆಶ್ರಮವಿರುವುದು ಮಹಾರಾಷ್ಟ್ರದ ಔರಂಗಾಬಾದ್’ನಲ್ಲಿ.
ಭರತ್ ಎಂಬುವರು ಈ ಈ ಆಶ್ರಮದ ಸಂಸ್ಥಾಪಕರು. ಪತ್ನಿ ಇವರ ವಿರುದ್ಧ ನಾಲ್ಕು ದೂರು ದಾಖಲಿಸಿದ್ದರಂತೆ. ಇದಾದ ನಂತರ ಭರತ್ ಮೇಲೆ ಯಾರೂ ಮಾತನಾಡುತ್ತಿರಲಿಲ್ಲವಂತೆ. ಭರತ್ ಪತ್ನಿಪೀಡಿತ ಇನ್ನೂ ಕೆಲವರ ಜತೆ ಮಾತುಕತೆ ನಡೆಸಿ, ಆಶ್ರಮ ತೆರೆದರು. 40ಕ್ಕಿಂತಲೂ ಹೆಚ್ಚು ಕೇಸ್ ಇರುವ ಅಥವಾ ಪತ್ನಿ ಕಾರಣಕ್ಕೆ ಜೈಲಿಗೆ ಹೋಗಿ ಬಂದಿರುವ ವ್ಯಕ್ತಿಗಳು ಇಲ್ಲಿ ಜಾಗ ಪಡೆಯಬಹುದು. ಕೈಲಾದ ಕೆಲಸ ಮಾಡಿ ಹಣ ಸಂಪಾದಿಸಿ ಆಶ್ರಮಕ್ಕೆ ನೀಡುತ್ತಾರೆ. ಒಂದು ವರ್ಷಕ್ಕಿಂತಲೂ ಹೆಚ್ಚು ಸಮಯದಿಂದ ಇಲ್ಲಿ ಕೆಲವರು ಆಶ್ರಯ ಪಡೆದಿದ್ದಾರೆ.

ಮೋಹೆಯಲ್ಲಿ ಮೂರು ಸೂರ್ಯ; ಜನರಿಗೆ ಆಶ್ಚರ್ಯ

ಕರಾವಳಿಯಲ್ಲಿ ನಾಳೆ ಮಳೆ; ಅ.25ರಂದು 8 ಜಿಲ್ಲೆಗಳಲ್ಲಿ ಭಾರೀ ವರ್ಷಧಾರೆ

ಕೊರೋನಾ ಸೋಂಕಿತರು, ಗುಣಮುಖರಾದವರಲ್ಲಿ ಪಾರ್ಶ್ವವಾಯು ಸಮಸ್ಯೆ

ಮತ್ತಷ್ಟು ಸುದ್ದಿಗಳು

Latest News

ಪ್ರೊಫೆಸರ್ ಹತ್ಯೆ ಪ್ರಕರಣ: ಖ್ಯಾತ ಗಾಯಕಿ ಅನನ್ಯ ಭಟ್ ತಂದೆ ಬಂಧನ

newsics.com ಮೈಸೂರು: ಸಾಂಸ್ಕೃತಿಕ ನಗರ ಮೈಸೂರನ್ನು ಬೆಚ್ಚಿ ಬೀಳಿಸಿದ್ದ ಪ್ರೊಫೆಸರ್ ಪರಶಿವಮೂರ್ತಿ ಹತ್ಯೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಹತ್ಯೆಗೆ ಸುಫಾರಿ ನೀಡಿದ್ದ ಆರೋಪದ ಹಿನ್ನೆಲೆಯಲ್ಲಿ ಖ್ಯಾತ ಗಾಯಕಿ ಅನನ್ಯ...

ರಾಜ್ಯೋತ್ಸವ ಪ್ರಶಸ್ತಿ ಪ್ರಕಟ: 65 ಸಾಧಕರಿಗೆ ಪ್ರಶಸ್ತಿ ಗೌರವ

Newsics.com ಬೆಂಗಳೂರು: ರಾಜ್ಯದ ಪ್ರತಿಷ್ಠಿತ  2020ರ ರಾಜ್ಯೋತ್ಸವ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಸಂಘ ಸಂಸ್ಥೆಗಳು, ಸಾಧಕರು ಸೇರಿದಂತೆ 65 ಮಂದಿಗೆ ಪ್ರಶಸ್ತಿ ನೀಡಲು ತೀರ್ಮಾನಿಸಲಾಗಿದೆ.  ಬೆಂಗಳೂರಿನಲ್ಲಿ  ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ ಟಿ ರವಿ ...

ಎನ್‌ಐಎನಿಂದ ಬೆಂಗಳೂರಲ್ಲಿ ಇನ್ನಿಬ್ಬರು ಶಂಕಿತ ಉಗ್ರರ ಬಂಧನ

newsics.comಬೆಂಗಳೂರು: ನಗರದಲ್ಲಿ ಶಂಕಿತ ಐಸಿಸ್ ಉಗ್ರರ ಭೇಟೆ ಮುಂದುವರಿಸಿರುವ ಎನ್‌ಐಎ ಅಧಿಕಾರಿಗಳ ತಂಡ, ಇದೀಗ ಇನ್ನಿಬ್ಬರು ಶಂಕಿತರನ್ನು ಬಂಧಿಸಿದೆ.ಬೆಂಗಳೂರಿನ ಥಣಿಸಂದ್ರದಲ್ಲಿರುವ ನಿವಾಸವೊಂದರ ಮೇಲೆ ದಾಳಿ ನಡೆಸಿರುವ ದೆಹಲಿ ಎನ್‌ಐಎ ಟೀಮ್,...
- Advertisement -
- Advertisement -
error: Content is protected !!