Sunday, July 3, 2022

ಇದು ಹಾವುಗಳ ಸರಸವಲ್ಲ, ಕಾದಾಟವಂತೆ!

Follow Us

ನವದೆಹಲಿ: ಭಾರೀ ಗಾತ್ರದ ಎರಡು ಹಾವುಗಳು ಕಾದಾಡುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಅರಣ್ಯಾಧಿಕಾರಿ ಸುಶಾಂತ ನಂದ ಎಂಬುವರು ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದು, ಈ ಹಾವುಗಳನ್ನು rat ಸ್ನೇಕ್ ಎಂದು ಗುರುತಿಸಲಾಗಿದೆ.
ಮೈನವಿರೇಳಿಸುವ ಹಾವುಗಳ ಕಾದಾಟ ಒಂದು ಸಣ್ಣ ಹಳ್ಳದಲ್ಲಿ ಆರಂಭವಾಗಿ ಪರಸ್ಪರ ಸುತ್ತಿಕೊಂಡು ಕಾದಾಡುತ್ತಲೇ ದಂಡೆಯ ಮೇಲ್ಭಾಗಕ್ಕೆ ಬಂದಿವೆ.

ಕೊರೋನಾ ಸೋಂಕಿತ ಕೋತಿಗಳಿಗೆ ಲಸಿಕೆ; ಗುಣಾತ್ಮಕ ಫಲಿತಾಂಶ

ಮೇಲ್ನೋಟಕ್ಕೆ ಈ ಹಾವುಗಳು ಮಿಲನದಲ್ಲಿ ತೊಡಗಿಕೊಂಡಿವೆ ಎಂದು ಅನಿಸಿದರೂ, ಇಂತಹ ಅನಿಸಿಕೆ ತಪ್ಪು ಎಂದಿದ್ದಾರೆ ಅರಣ್ಯಾಧಿಕಾರಿ ಸುಶಾಂತ್ ನಂದ. ಇವು ಗಂಡು ಹಾವುಗಳಾಗಿದ್ದು ತಮ್ಮ ಸಂಗಾತಿಯನ್ನು ರಕ್ಷಿಸಿಕೊಳ್ಳಲು ಮತ್ತು ಪ್ರದೇಶದ ಉಳಿವಿಗಾಗಿ ಹೋರಾಡುತ್ತಿವೆ ಎಂದು ಸುಶಾಂತ್ ನಂದ ತಿಳಿಸಿದ್ದಾರೆ. ನ್ಯಾಷನಲ್ ಜಿಯಾಗ್ರಫಿಕ್ ಪ್ರಕಾರ, ಎರಡು ಹಾವುಗಳು ಈ ರೀತಿ ಪರಸ್ಪರ ಸುತ್ತಿಕೊಂಡು ಕಾಳಗ ನಡೆಸುವುದನ್ನು plaiting combat ಎಂದು ಕರೆಯುತ್ತಾರೆ. ಈ ಹೋರಾಟ ಒಂದು ಹಾವು ಸುಸ್ತಾಗಿ ಕೆಳಗೆ ಬೀಳುವರೆಗೂ ಮುಂದುವರಿದಿರುತ್ತದೆ ಎಂದು ಹೇಳಲಾಗಿದೆ.

 

ಮತ್ತಷ್ಟು ಸುದ್ದಿಗಳು

vertical

Latest News

ಕಲುಷಿತ ನೀರು ಸೇವನೆ; 40 ಕ್ಕೂ ಹೆಚ್ಚು ಜನ ಅಸ್ವಸ್ಥ

newsics.com ರಾಯಚೂರು; ಕಲುಷಿತ ನೀರು ಸೇವನೆ ಮಾಡಿ 40 ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡ ಘಟನೆ ರಾಯಚೂರಿನಲ್ಲಿ ನಡೆದಿದೆ. ಅನೇಕರು ವಾಂತಿ ಭೇದಿಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ವಲ್ಕಂದಿನ್ನಿಯ ಸರ್ಕಾರಿ...

ಅನಾರೋಗ್ಯ ನೆಪವೊಡ್ಡಿ ಏರ್ ಇಂಡಿಯಾ ಸಂದರ್ಶನಕ್ಕೆ ಹಾಜರಾದ ಇಂಡಿಗೋ ಸಿಬ್ಬಂದಿ, ವಿಮಾನ ಸೇವೆ ವ್ಯತ್ಯಯ

newsics.com ನವದೆಹಲಿ: ಏರ್ ಇಂಡಿಗೋ ಸಿಬ್ಬಂದಿ ಅನಾರೋಗ್ಯದ ನೆಪವೊಡ್ಡಿ ಶನಿವಾರ ಏರ್ ಇಂಡಿಯಾ‌ ಸಂದರ್ಶನಕ್ಕೆ ತೆರಳಿದ್ದರಿಂದ ಇಂಡಿಗೋ ಸೇವೆಯಲ್ಲಿ‌ ವ್ಯತ್ಯಯ ಉಂಟಾಗಿತ್ತು. ವಿಮಾನಯಾನ ವ್ಯತ್ಯಯ ಉಂಟಾಗಿದ್ದಕ್ಕೆ ಇಂಡಿಗೋ ಬಳಿ ಕಾರಣ ಕೇಳಲಾಗಿದೆ ಎಂದು ನಾಗರಿಕ ವಿಮಾನಯಾನ...

ಬೆಂಗಳೂರಿನಲ್ಲಿ 746 ಮಂದಿ ಸೇರಿ ರಾಜ್ಯದಲ್ಲಿ 826 ಜನಕ್ಕೆ ಕೊರೋನಾ ಸೋಂಕು

newsics.com ಬೆಂಗಳೂರು ; ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಇಂದು ಒಟ್ಟು 826 ಕೊರೊನಾ ಪ್ರಕರಣ ವರದಿಯಾಗಿದೆ.ಸಕ್ರಿಯ ಪ್ರಕರಣಗಳ ಸಂಖ್ಯೆ 6,666ಕ್ಕೆ ಏರಿಕೆ ಕಂಡಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 39,72,285ಕ್ಕೆ ಏರಿಕೆಯಾಗಿದೆ. ಇಂದು ಯಾವುದೇ ಸಾವು...
- Advertisement -
error: Content is protected !!