newsics.com
ಅಹಮದಾಬಾದ್: ದೇಶದೆಲ್ಲೆಡೆ ಈಗ ಕೊರೋನಾ ಬದಲು ಕಂಗನಾ ಹವಾ. ತನ್ನ ಸಿದ್ಧಾಂತಗಳಿಗಾಗಿ ಮಹಾರಾಷ್ಟ್ರ ಸರ್ಕಾರವನ್ನೇ ನಡುಗಿಸಿದ ಕಂಗನಾ ರನಾವುತ್ ಬೆಂಬಲಕ್ಕೆ ದೇಶವೇ ಸಜ್ಜಾಗಿದ್ದು, ಬಟ್ಟೆ ವ್ಯಾಪಾರಿಯೊಬ್ಬರು ಕಂಗನಾ ಸೀರೆ ಸಿದ್ಧಪಡಿಸುವ ಮೂಲಕ ನಾರಿಶಕ್ತಿಯ ಜತೆ ನಿಲ್ಲುವ ಭರವಸೆ ನೀಡಿದ್ದಾರೆ .ಹೌದು, ಗುಜರಾತ್ ಮೂಲದ ಉದ್ಯಮಿಯೊಬ್ಬರು ಕಂಗನಾ ರನಾವುತ್ ಹೆಸರಲ್ಲಿ ವಿಶೇಷ ಸೀರೆಯೊಂದನ್ನು ಸಿದ್ಧಪಡಿಸಿ ಮಾರುಕಟ್ಟೆಗೆ ಬಿಡುಗಡೆಗೊಳಿಸಿದ್ದಾರೆ.
ಝಾನ್ಸಿ ಕೀ ರಾಣಿ, We salute to kangana ಸೇರಿದಂತೆ ವಿವಿಧ ಪ್ರೋತ್ಸಾಹದಾಯಕ ನುಡಿಬರಹ ಹಾಗೂ ಕಂಗನಾ ಅವರು ಝಾನ್ಸಿ ರಾಣಿಯಂತೆ ಸಜ್ಜಾಗಿರುವ ಪೋಟೋ ಛಾಪಿಸುವ ಮೂಲಕ ಸೀರೆಯ ಅಂದ ಹೆಚ್ಚಿಸಿದ್ದಾರೆ.
ಹೆಣ್ಣುಮಕ್ಕಳನ್ನು ಗೌರವಿಸುವ ಹಾಗೂ ಅವರ ಹೋರಾಟಗಳನ್ನು ಬೆಂಬಲಿಸುವ ಉದ್ದೇಶದಿಂದ ಈ ಸೀರೆ ಸಿದ್ಧಪಡಿಸಿರುವುದಾಗಿ ಹೇಳಿರುವ ಅಂಗಡಿ ಮಾಲೀಕ ಅಲಿ, ಆಕೆ ಅನ್ಯಾಯವನ್ನು ವಿರೋಧಿಸಲು ಧ್ವನಿ ಎತ್ತಿದರು. ಆದರೆ ಅವರ ಕಚೇರಿಯನ್ನು ಡೆಮಾಲಿಷನ್ ಮಾಡಲಾಯಿತು. ಹೀಗಾಗಿ ಆಕೆಯನ್ನು ಬೆಂಬಲಿಸುವ ಉದ್ದೇಶದಿಂದ ನಾವು ಈ ಪ್ರಯತ್ನ ಮಾಡಿದ್ದೇವೆ ಎಂದಿದ್ದಾರೆ.
ವಿವಿಧ ವೆರೈಟಿಯಲ್ಲಿ ಈ ಸೀರೆ ಲಭ್ಯವಿದ್ದು, ಸಾಕಷ್ಟು ಜನರು ಪ್ರೀತಿ ಹಾಗೂ ಅಭಿಮಾನದಿಂದ ಈ ಸೀರೆ ಖರೀದಿಸುತ್ತಿದ್ದಾರಂತೆ. ಅಂದಹಾಗೆ, ಈ ಸೀರೆಯ ಬೆಲೆ ಒಂದು ಸಾವಿರದಿಂದ ಶುರು… ಇನ್ನೇಕೆ ತಡ, ನೀವು ಕಂಗನಾ ಸೀರೆ ಕೊಳ್ಳುವ ಮೂಲಕ ಬಾಲಿವುಡ್ ಫೈರ್ ಬ್ರ್ಯಾಂಡ್ ಬೆಂಬಲಿಸಬಹುದು ನೋಡಿ.
ರಾಜ್ಯಪಾಲರನ್ನು ಭೇಟಿಯಾದ ಕಂಗನಾ
ಭಾರತದಲ್ಲಿ ಕೊರೋನಾ ತಡೆಗೆ ಮೋದಿ ಪ್ರೇರಣೆ- ಕೇಂಬ್ರಿಜ್ ವಿವಿ ಅಭಿಪ್ರಾಯ
ಮೈಸೂರು ಮೃಗಾಲಯದಲ್ಲಿ ಚಿರತೆ ದತ್ತು ಸ್ವೀಕರಿಸಿದ ಕ್ರಿಕೆಟ್ ತಾರೆ