Wednesday, July 6, 2022

ಕೇರಳದ ಕರಿಪುರಂ ವಿಮಾನ ದುರಂತ: ಪೈಲಟ್ ಸಹ ಪೈಲಟ್ ಸಹಿತ 17 ಮಂದಿ ಬಲಿ

Follow Us

ಕರಿಪುರಂ: ಕೇರಳದ ಕೋಝಿಕೋಡ್ ಸಮೀಪದ  ಕರಿಪುರಂ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 17ಕ್ಕೆ ಏರಿದೆ.  ಈ ದುರಂತದಲ್ಲಿ ಪೈಲಟ್ ಮತ್ತು ಸಹ ಪೈಲಟ್ ಇಬ್ಬರು ಕೂಡ ಮೃತಪಟ್ಟಿದ್ದಾರೆ ಎಂದು ಮಲೆಯಾಳಂ ಸುದ್ದಿ ವಾಹಿನಿಗಳು ವರದಿ ಮಾಡಿವೆ.  ವಿಮಾನ ದುರಂತದಲ್ಲಿ  ಇದುವರೆಗೆ 17 ಮಂದಿ ಮೃತಪಟ್ಟಿದ್ದಾರೆ .  123 ಪ್ರಯಾಣಿಕರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

15 ಪ್ರಯಾಣಿಕರ ಸ್ಥಿತಿ ಗಂಭೀರವಾಗಿದೆ.

ವಿಮಾನ ರನ್ ವೇ ಬಿಟ್ಟು ಮುಂದಕ್ಕೆ ಚಲಿಸಿ ಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ವಿಮಾನ ಎರಡು ತುಂಡಾಗಿದೆ. ಸಂಜೆ 7.45ರ ಹೊತ್ತಿಗೆ ಈ ದುರಂತ ಸಂಭವಿಸಿದೆ.  ವಿಮಾನದಲ್ಲಿ ಆರು ಸಿಬ್ಬಂದಿಯ ಸಹಿತ 190 ಪ್ರಯಾಣಿಕರಿದ್ದರು..

ಮೊದಲ ಬಾರಿ ಲ್ಯಾಡಿಂಗ್ ವಿಫಲವಾದ ಬಳಿಕ ಎರಡನೆ ಬಾರಿ ಲ್ಯಾಂಡ್ ಆದಾಗ ಈ ದುರಂತ ಸಂಭವಿಸಿದೆ. ಕೇರಳದಲ್ಲಿ ಭಾರೀ ಮಳೆಯಾಗುತ್ತಿದ್ದು, ವಿಮಾನ ಕರಿಪುರಂ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಂದರ್ಭದಲ್ಲಿ ಜಡಿಮಳೆ ಸುರಿಯುತ್ತಿತ್ತು.

ವಿಮಾನದ ಪೈಲಟ್ ಸಾಥೆ ಅವರು ಈ ಹಿಂದೆ ವಾಯುಪಡೆಯಲ್ಲಿ ಸೇವೆ ಸಲ್ಲಿಸಿದ್ದರು. ಮೂವತ್ತು ವರ್ಷಗಳ ಅನುಭವ ಹೊಂದಿದ್ದ ಹಿರಿಯ ಪೈಲಟ್ ಆಗಿದ್ದರು. ಮಳೆಯಿಂದಾಗಿ ರನ್ ವೇ ಸರಿಯಾಗಿ ಕಾಣಿಸುತ್ತಿರಲಿಲ್ಲ. ಇದರಿಂದಾಗಿ ಈ ದುರಂತ ಸಂಭವಿಸಿದೆ  ಎಂದು ವರದಿಯಾಗಿದೆ.

ಮತ್ತಷ್ಟು ಸುದ್ದಿಗಳು

vertical

Latest News

ದೇಶದಲ್ಲಿ ಹೊಸದಾಗಿ 16,159 ಮಂದಿಗೆ ಕೊರೋನಾ ಸೋಂಕು, 28 ಜನರ ಸಾವು

newsics.com ನವದೆಹಲಿ:  ದೇಶದಲ್ಲಿ ಕೊರೋನಾದ ಹಾವಳಿ ಮುಂದುವರಿದಿದೆ.  ಕಳೆದ 24 ಗಂಟೆ ಅವಧಿಯಲ್ಲಿ ಹೊಸದಾಗಿ 16,159 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಇದೇ ವೇಳೆ ಕೊರೋನಾ ಸೋಂಕಿತರಾಗಿದ್ದ 15,394...

ಆದಾಯ ತೆರಿಗೆ ವಂಚನೆ : ಡೋಲೋ ಮಾತ್ರೆ ಕಚೇರಿ ಮೇಲೆ ದೇಶವ್ಯಾಪಿ ದಾಳಿ

newsics.com ಬೆಂಗಳೂರು: ಆದಾಯ ತೆರಿಗೆ ವಂಚಿಸಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಖ್ಯಾತ ಮಾತ್ರೆ ತಯಾರಕ ಸಂಸ್ಥೆ ಡೋಲೋ ಮುಖ್ಯ ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದೇಶದ ಹಲವು ರಾಜ್ಯಗಳಲ್ಲಿ ಕಾರ್ಯಾಚರಿಸುತ್ತಿರುವ...

ಗೃಹ ಬಳಕೆ ಸಿಲಿಂಡರ್ ದರ ಮತ್ತೆ 50 ರೂಪಾಯಿ ಹೆಚ್ಚಳ

newsics.com ನವದೆಹಲಿ: ತೈಲ ಸಂಸ್ಥೆಗಳು ಎಲ್ ಪಿ ಜಿ ಬಳಕೆದಾರರಿಗೆ ಶಾಕ್ ನೀಡಿವೆ. ಗೃಹ ಬಳಕೆಯ ಸಿಲಿಂಡರ್ ದರ ಮತ್ತೆ ಹೆಚ್ಚಳ ಮಾಡಲಾಗಿದೆ. ಪ್ರತಿ ಸಿಲಿಂಡರ್ ದರ 50 ರೂಪಾಯಿ ಹೆಚ್ಚಿಸಲಾಗಿದೆ.  ನೂತನ ದರ...
- Advertisement -
error: Content is protected !!