ಬೆಂಗಳೂರು: ರಾಮನಗರ ಜಿಲ್ಲೆ ಹೆಸರನ್ನು ಬದಲಾಯಿಸುವ ಪ್ರಸ್ತಾಪ ಕುರಿತಂತೆ ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಸಿಡಿದೆದ್ದಿದ್ದಾರೆ. ಸಾಮಾಜಿಕ ಜಾಲ ತಾಣದಲ್ಲಿ ಸುದೀರ್ಘ ವಾಗಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಹೆಸರು ಬದಲಾವಣೆ ಕೈ ಬಿಟ್ಟು ತನ್ನ ಅವಧಿಯಲ್ಲಿ ಬಿಡುಗ಼ಡೆ ಮಾಡಿದ ಹಣ ಜಿಲ್ಲೆಗೆ ತಲುಪಿಸಿ. ಜಿಲ್ಲೆ ತನ್ನಿಂದ ತಾನಾಗಿ ಅಭಿವೃಧ್ದಿ ಹೊಂದಲಿದೆ ಎಂದು ಕುಮಾರಸ್ವಾಮಿ ಕುಟುಕಿದ್ದಾರೆ. ರಾಮ ನಗರ ಜಿಲ್ಲೆಗೆ ತನ್ನದೇ ಆದ ಸಾಂಸ್ಕೃತಿಕ ಪರಂಪರೆ ಇದೆ. ಭವ್ಯ ಇತಿಹಾಸ ಇದೆ. ಅದಕ್ಕೂ ಮಿಗಿಲಾಗಿ ಬಿಜೆಪಿ ಜಪಿಸುತ್ತಿರುವ ರಾಮನ ಹೆಸರಿನಲ್ಲಿ ಇರುವ ಜಿಲ್ಲೆ ಇದಾಗಿದೆ ಎಂದು ಕುಮಾರ ಸ್ವಾಮಿ ನೆನಪಿಸಿದ್ದಾರೆ. ಕೆಲವೇ ಕೆಲವು ಬಂಡವಾಳಶಾಹಿಗಳಿಗಾಗಿ ಜಿಲ್ಲೆಯ ಅಮಾಯಕ, ಮುಗ್ಧರ ಭೂಮಿ ಕಬಳಿಸಲು ರಾಜ್ಯ ಸರ್ಕಾರ ಹೊರಟಿದೆ ಎಂದು ಕುಮಾರಸ್ವಾಮಿ ಟೀಕಿಸಿದ್ದಾರೆ