Friday, March 5, 2021

ಆಹಾರ ಕೊಡಲಾರದ ದುಸ್ಥಿತಿ; 8 ವರ್ಷದ ಮಗಳಿಗೆ ವಿಷವುಣಿಸಿದ ವೈದ್ಯೆ!

newsics.com
ಚೆನ್ನೈ: ತನ್ನ ಎಂಟು ವರ್ಷದ ಮಗಳಿಗೆ ಆಹಾರ ಕೊಡಲಾಗದ್ದರಿಂದ ಬೇಸರಗೊಂಡ ಬೆಂಗಳೂರು ಮೂಲದ ವೈದ್ಯೆಯೊಬ್ಬರು ಮಗಳಿಗೇ ವಿಷವುಣಿಸಿದ ಆಘಾತಕಾರಿ ಘಟನೆ ತಮಿಳುನಾಡಿನ ಅವಿನಾಶಿಯಲ್ಲಿ ಶುಕ್ರವಾರ ನಡೆದಿದೆ.
ಮಗು ಈಗ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ಸ್ಥಳೀಯರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಗಳಿಗೆ ವಿಷವುಣಿಸಿದ ಬಳಿಕ ಬಸ್ ನಿಲ್ದಾಣದ ಬಳಿ ಅಲೆದಾಡುತ್ತಿದ್ದ ಆರೋಪಿ ತಾಯಿ ಡಾ.ಶೈಲಜಾ ಅವರನ್ನು ಪೊಲೀಸರು ಅವಿನಾಶಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆರೋಪಿ ಡಾ.ಶೈಲಜಾ (39) ನಡೆಸುತ್ತಿದ್ದ ಕ್ಲಿನಿಕ್ ಕೊರೋನಾ ಹಾಗೂ ಇನ್ನಿತರ ಕೆಲ ಕಾರಣಗಳಿಂದಾಗಿ ತಿಂಗಳ ಹಿಂದೆ ಮುಚ್ಚಲ್ಪಟ್ಟಿತು. ಬಳಿಕ ಆಕೆ ತನ್ನ ತಂದೆಯ ಮೇಲೆ ಅವಲಂಬಿತರಾಗಿ, ತಂದೆಯ ಪಿಂಚಣಿ ಹಣದಿಂದ ಬದುಕುತ್ತಿದ್ದರು. ನಿರುದ್ಯೋಗದಿಂದಾಗಿ ಅವರು ತೀವ್ರ ಖಿನ್ನತೆಗೆ ಒಳಗಾಗಿದ್ದರು. ಹಾಗಾಗಿ ತನ್ನ ಮಗಳನ್ನು ಕೊಲ್ಲಲು ನಿರ್ಧರಿಸಿದರು ಎಂದು ಹೇಳಲಾಗಿದೆ.
ಶೈಲಜಾ ಶುಕ್ರವಾರ ತಿರುಪ್ಪೂರ್‌ಗೆ ಪ್ರಯಾಣಿಸುತ್ತಿದ್ದರು. ಆದರೆ ಸೆವೂರ್ ಬಳಿ ಇಳಿದು ಮಗಳಿಗೆ ಇಲಿ ಪಾಷಾಣ ಕೊಟ್ಟಿದ್ದರು. ಸ್ವಲ್ಪ ಹೊತ್ತಿನಲ್ಲೇ ಬಾಲಕಿ ಪ್ರಜ್ಞೆ ತಪ್ಪಿದಳು. ನಂತರ ಶೈಲಜಾ ಪ್ರಜ್ಞೆತಪ್ಪಿದ ಮಗಳನ್ನು ಹೊತ್ತೊಯ್ಯುವಾಗ ಸ್ಥಳೀಯರು ನೋಡಿದರೆಂಬ ಕಾರಣಕ್ಕೆ ಮಗುವನ್ನು ನೆಲಕ್ಕೆ ಎಸೆದು ಓಡಿಹೋಗಿದ್ದರು. ಆಘಾತಕ್ಕೊಳಗಾದ ನಿವಾಸಿಗಳು ಮಗುವನ್ನು ತಕ್ಷಣ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಮಗುವಿನ ಸ್ಥಿತಿ ಗಂಭೀರವಾಗಿದ್ದು, ಶುಕ್ರವಾರ ಸಂಜೆ ಕೊಯಮತ್ತೂರು ಆಸ್ಪತ್ರೆಗೆ ಸೇರಿಸಲಾಗಿದೆ. ಶೈಲಜಾ ಸೆವೂರ್ ಬಸ್ ನಿಲ್ದಾಣದ ಬಳಿ ಅಲೆದಾಡುವುದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು. ವಿಚಾರಣೆ ವೇಳೆ ಮಾತನಾಡಿದ ಶೈಲಜಾ, ತಂಜಾವೂರು ಮೂಲದ ಮುತ್ತುಸಾಮಿ (40) ಎಂಬಾತನನ್ನು ಮದುವೆಯಾಗಿದ್ದು, ತನ್ನ ಗಂಡ ಪ್ರಸ್ತುತ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. 5 ವರ್ಷಗಳ ಹಿಂದೆ ನಮಗೆ ವಿಚ್ಚೇದನವಾಗಿತ್ತು ಎಂದು ಹೇಳಿದ್ದಾರೆ.
ಬಾಲಕಿಗೆ ಆಹಾರ ನೀಡಲು ಸಾಧ್ಯವಾಗದ ಕಾರಣ ಮಗುವನ್ನು ಕೊಲ್ಲಲು ಶೈಲಜಾ ನಿರ್ಧರಿಸಿದ್ದಳು. ಆಕೆಯ ಮಾನಸಿಕ ಸ್ಥಿತಿ ಅಸ್ಥಿರವಾಗಿದೆ. ಹಾಗಾಗಿ ಆಕೆಯನ್ನು ಅವಿನಾಶಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರವಾಸಿಗರ ಕಿರುಚಾಟ: ಅಟ್ಟಿಸಿಕೊಂಡು ಬಂದ ಕಾಡಾನೆಗಳ ಹಿಂಡು

ನೆಟ್ಟಿಗರ ಗಮನ ಸೆಳೆದ ಧರ್ಮಸ್ಥಳದ ಎತ್ತಿನಗಾಡಿ ಕಾರು!

ಮಧ್ಯಪ್ರದೇಶದಲ್ಲಿ ಲವ್ ಜಿಹಾದ್ ನಿಷೇಧ ಕಾನೂನಿಗೆ ಅನುಮೋದನೆ

ಮತ್ತಷ್ಟು ಸುದ್ದಿಗಳು

Latest News

ಬೆಂಕಿಗೆ ಹಾರಿ ರಮೇಶ್ ಜಾರಕಿಹೊಳಿ ಬೆಂಬಲಿಗನಿಂದ ಆತ್ಮಹತ್ಯೆಗೆ ಯತ್ನ

newsics.com ಬೆಳಗಾವಿ: ಬೆಳಗಾವಿಯ ಗೋಕಾಕ್ ನಗರದಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಬೆಂಬಲಿಗರ ಪ್ರತಿಭಟನೆ ತೀವ್ರಗೊಂಡಿದೆ. ಮಾರುಕಟ್ಟೆ ಮುಚ್ಚಲಾಗಿದೆ. ಪ್ರಮುಖ ರಸ್ತೆಗಳಲ್ಲಿ ಟೈರ್ ಗಳಿಗೆ ಬೆಂಕಿ ಹಚ್ಚಲಾಗಿದೆ ಇದೇ...

ಕೊಡಗಿನ ನರಹಂತಕ ಹುಲಿಯ ಗುರುತು ಪತ್ತೆ

newsics.com ಮಡಿಕೇರಿ:  ಕೊಡಗಿನಲ್ಲಿ ಭೀತಿ ಸೃಷ್ಟಿಸಿರುವ ನರ ಹಂತಕ ಹುಲಿಯ ಗುರುತು ಪತ್ತೆ ಹಚ್ಚಲಾಗಿದೆ. ಇದು ನಾಗರಹೊಳೆ ಸಮೀಪದ ಕಲ್ಲಳ ಅರಣ್ಯ ಪ್ರದೇಶದಿಂದ ತಪ್ಪಿಸಿಕೊಂಡು ಬಂದಿರುವ ಹುಲಿ ಎಂದು ಗುರುತಿಸಲಾಗಿದೆ. 2013ರಲ್ಲಿ ನಡೆದ ಹುಲಿ ಗಣತಿ...

ಬಿಪಿಎಲ್ ಕಾರ್ಡ್ ಹೊಂದಿರುವ ಅನರ್ಹರ ಮಾಹಿತಿ ನೀಡಿದರೆ ಬಹುಮಾನ

newsics.com ಬೆಂಗಳೂರು:  ರಾಜ್ಯದಲ್ಲಿ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದವರ ಕಲ್ಯಾಣದ ದೃಷ್ಟಿಯಿಂದ ಜಾರಿಗೆ ತಂದಿರುವ ಬಿಪಿಎಲ್ ಕಾರ್ಡ್ ಯೋಜನೆಯ ದುರುಪಯೋಗ ತಡೆಗಟ್ಟಲು ಸರ್ಕಾರ ದಿಟ್ಟ ಕ್ರಮ ತೆಗೆದುಕೊಳ್ಳಲು ನಿರ್ಧರಿಸಿದೆ. ಈ ಮೂಲಕ ಸರ್ಕಾರದ ಆದಾಯ...
- Advertisement -
error: Content is protected !!