Saturday, June 10, 2023

ಇಂದು 36 ಉಪಗ್ರಹಗಳ ಉಡಾವಣೆ: ಕ್ಷಣಗಣನೆ ಆರಂಭ ಎಂದ ಇಸ್ರೋ

Follow Us

newsics.com

ಶ್ರೀಹರಿಕೋಟಾ: ಇಸ್ರೊ ಸಹೋದ್ಯೋಗಿಗಳ ಜತೆ ನ್ಯೂ ಸ್ಪೇಸ್‌ ಇಂಡಿಯಾ ಲಿಮಿಟೆಡ್‌ ಭಾನುವಾರ ಬೆಳಗ್ಗೆ 36 ಉಪಗ್ರಹಗಳನ್ನು ಉಡಾವಣೆ ಮಾಡಲಿದೆ.

36 ಉಪಗ್ರಹಗಳನ್ನು ಎಲ್‌ವಿಎಂ3–ಎಂ3/ಒನ್‌ವೆಬ್‌ ಇಂಡಿಯಾ–2 ಮಿಷನ್‌ನಲ್ಲಿ ಉಡಾವಣೆ ಮಾಡಲು ಕ್ಷಣಗಣನೆ ಆರಂಭವಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಹೇಳಿದೆ.

616 ಉಪಗ್ರಹಗಳನ್ನು ಕಕ್ಷೆಗೆ ತಲುಪಿಸುವ ಮೂಲಕ ಈ ವರ್ಷದ ಕೊನೆಯಲ್ಲಿ ಜಾಗತಿಕ ಸೇವೆಗಳನ್ನು ಪ್ರಾರಂಭಿಸಬಹುದಾಗಿದೆ ಎಂದು ಒನ್‌ವೆಬ್‌ ತಿಳಿಸಿದೆ.

ಭಾನುವಾರ ನಡೆಯಲಿರುವ ಉಡಾವಣೆ ಈ ವರ್ಷದ ಮೂರನೇ ಮತ್ತು ಒಟ್ಟಾರೆ 18ನೇ ಉಡಾವಣೆಯಾಗಲಿದೆ. 43.5 ಮೀಟರ್ ಎತ್ತರದ ರಾಕೆಟ್ ಅನ್ನು ಮಾರ್ಚ್ 26 ರಂದು ಬೆಳಗ್ಗೆ 9 ಗಂಟೆಗೆ ಚೆನ್ನೈ‌ ಬಳಿಯ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಎರಡನೇ ಉಡಾವಣಾ ಕೇಂದ್ರದಿಂದ ಉಡಾವಣೆಗೊಳ್ಳಲಿದೆ.

ಕಳೆದ ಫೆಬ್ರವರಿಯಲ್ಲಿ ಎಸ್‌ಎಸ್ಎಲ್‌ವಿ–ಡಿ2/ಇಒಎಸ್‌ಒ7 ಮಿಷನ್‌ನ ಯಶಸ್ವಿ ಉಡಾವಣೆ ನಂತರ 2023 ರಲ್ಲಿ ಇಸ್ರೋ ಮಾಡುತ್ತಿರುವ ಎರಡನೇ ಉಡಾವಣೆ ಇದಾಗಿದೆ.

ನೀರಿನಲ್ಲೂ ಶತ್ರುಸೈನ್ಯ ನಾಶಮಾಡುವ ನ್ಯೂಕ್ಲಿಯರ್ ಡ್ರೋನ್ ಪರೀಕ್ಷೆ ಯಶಸ್ವಿ

ಮತ್ತಷ್ಟು ಸುದ್ದಿಗಳು

vertical

Latest News

ಚಾಮರಾಜನಗರ: ಮರಿ ಆನೆ ಅಟ್ಯಾಕ್, ಬೈಕ್ ಸವಾರ ಜಸ್ಟ್ ಮಿಸ್

Newsics.com ಚಾಮರಾಜನಗರ: ಚಾಮರಾಜನಗರ ಜಿಲ್ಲೆ ಗಡಿ ಭಾಗದ ನಾಲ್ ರೋಡ್ ಚೆಕ್ ಪೋಸ್ಟ್ ಬಳಿ ಆನೆ ಮರಿಯೊಂದು ದ್ವಿಚಕ್ರ...

‘ಶಕ್ತಿ’ ಯೋಜನೆಗೆ ನಾಳೆ ಚಾಲನೆ: ನಿರ್ಮಲಾ ಸೀತಾರಾಮನ್‌ಗೆ ಆಹ್ವಾನ

Newsics ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆ ನಾಳೆ ಚಾಲನೆ ದೊರಕಲಿದೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ...

ಬ್ರಿಟನ್: ಸಂಸದ ಸ್ಥಾನಕ್ಕೆ ಬೋರಿಸ್ ಜಾನ್ಸನ್ ರಾಜೀನಾಮೆ!

Newsics.com ಲಂಡನ್: ಬ್ರಿಟನ್ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಇದೀಗ ಸಂಸದ ಸ್ಥಾನಕ್ಕೂ ರಾಜೀನಾಮೆ ನೀಡಿದ್ದಾರೆ. ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ...
- Advertisement -
error: Content is protected !!