Tuesday, March 28, 2023

ಮೂಗಿನ ಮೂಲಕ ಹಾಕುವ ಕೋವಿಡ್ ಲಸಿಕೆ ಇನ್ಕೋವ್ಯಾಕ್ ಬಿಡುಗಡೆ

Follow Us

newsics.com

ನವದೆಹಲಿ: ಮೂಗಿನ ಮೂಲಕ ಹಾಕುವ ಕೋವಿಡ್ ಲಸಿಕೆ ಇನ್ಕೋವ್ಯಾಕ್ ಅನ್ನು ಗುರುವಾರ ಭಾರತ್ ಬಯೋಟೆಕ್‌ ಸಂಸ್ಥೆ ಬಿಡುಗಡೆ ಮಾಡಿದೆ.

ಕೇಂದ್ರ ಆರೋಗ್ಯ ಸಚಿವ ಡಾ ಮನ್ಸುಖ್ ಮಾಂಡವಿಯಾ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್ ಇಂದು (ಗುರುವಾರ) ಮೊದಲ ಕೋವಿಡ್ ಇಂಟ್ರಾನಾಸಲ್ ಲಸಿಕೆ (ಮೂಗಿನ ಮೂಲಕ ಹಾಕುವ ಲಸಿಕೆ) ಇನ್ಕೋವ್ಯಾಕ್ ( iNCOVACC ) ಬಿಡುಗಡೆ ಮಾಡಿದರು.

ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿರುವ ಈ ಲಸಿಕೆ ಪ್ರತಿ ಡೋಸ್‌ಗೆ 325 ರೂಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ ಇದರ ದರ 800 ರೂ ಆಗಿದೆ.

ಲಸಿಕೆಯ ಎರಡು ಡೋಸ್‌ಗಳನ್ನು 28 ದಿನಗಳ ಅಂತರದಲ್ಲಿ ನೀಡಬೇಕು. ಬೂಸ್ಟರ್ ಡೋಸ್ ತೆಗೆದುಕೊಂಡವರಿಗೆ ಮೂಗಿನ ಲಸಿಕೆಯನ್ನು ನೀಡಲಾಗುವುದಿಲ್ಲ ಎಂದು ದೇಶದ ಲಸಿಕೆ ಕಾರ್ಯಪಡೆಯ ಮುಖ್ಯಸ್ಥರು ಕಳೆದ ತಿಂಗಳು ತಿಳಿಸಿದ್ದರು.

ಲಸಿಕೆ ತಯಾರಕ ಕಂಪನಿ ಭಾರತ್ ಬಯೋಟೆಕ್ ಪ್ರಕಾರ, CoWin ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಇಂಟ್ರಾನಾಸಲ್ ಲಸಿಕೆ ಡೋಸ್‌ಗೆ ಅಪಾಯಿಂಟ್‌ಮೆಂಟ್ ಕಾಯ್ದಿರಿಸಬಹುದು.

iNCOVACC ಅನ್ನು ವಾಷಿಂಗ್ಟನ್ ಯೂನಿವರ್ಸಿಟಿ, ಸೇಂಟ್ ಲೂಯಿಸ್ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗಿದೆ.

ಬಾಲಕನ ಬಲಿ ಪಡೆದ ಚಿರತೆ ಸೆರೆ: ಕೊಲ್ಲಲು ಗ್ರಾಮಸ್ಥರ ಪಟ್ಟು

ಮತ್ತಷ್ಟು ಸುದ್ದಿಗಳು

vertical

Latest News

ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್‌) ಬಡ್ಡಿ ದರ ಶೇ.8.15 ಕ್ಕೆ ಏರಿಕೆ

newscics.com ನವದೆಹಲಿ: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಭವಿಷ್ಯ ನಿಧಿಯ ಮೇಲಿನ ಬಡ್ಡಿ ದರವನ್ನುಬ ಹೆಚ್ಚಿಸಲು ತೀರ್ಮಾನಿಸಿದೆ....

ವಾಯುಮಾಲಿನ್ಯದಿಂದ 1,220 ಜನರು ಸಾವು

newscics.com ಮುಂಬೈ: ಮುಂಬೈನಲ್ಲಿ 2016-2021 ರ ನಡುವೆ 1,220 ಜನರು ವಾಯುಮಾಲಿನ್ಯದಿಂದ ಸಾವನ್ನಪ್ಪಿದ್ದಾರೆ. ಅಂಕಿಅಂಶಗಳ ಪ್ರಕಾರ, ಮುಂಬೈನಲ್ಲಿ 2016 ಮತ್ತು 2021 ರ ನಡುವೆ 1,220...

ಭಾರತದ ಮೊದಲ ಗೀರ್ ತದ್ರೂಪಿ ತಳಿ ಆಕಳ ಕರು ಜನನ

newsics.com ನವದೆಹಲಿ: ಭಾರತದ ಮೊದಲ ತದ್ರೂಪಿ ಗಿರ್ ತಳಿಯ ಆಕಳ ಕರು ಹರಿಯಾಣದ ಕರ್ನಾಲ್‌ನಲ್ಲಿರುವ ರಾಷ್ಟ್ರೀಯ ಡೈರಿ ಸಂಶೋಧನಾ ಸಂಸ್ಥೆ (NDRI) ಯಲ್ಲಿ ಜನ್ಮ ಪಡೆದಿದೆ.ಈ...
- Advertisement -
error: Content is protected !!