ಶಿವಮೊಗ್ಗ: ಶರಾವತಿ ನದಿ ಹಿನ್ನೀರಿನಲ್ಲಿ ಸಿಲುಕಿ ಕೊಂಡಿದ್ದ ಹಸಿರು ಮಕ್ಕಿ ಲಾಂಚ್ ಸುರಕ್ಷಿತವಾಗಿದೆ. ನೀರಿನ ಮಧ್ಯೆ ಸಿಲುಕಿ ಕೊಂಡಿದ್ದ ಲಾಂಚನ್ನು ಸತತ ಎರಡು ಗಂಟೆ ನಡೆದ ಕಾರ್ಯಾಚರಣೆ ಬಳಿಕ ದಡ ಸೇರಿಸುವ ಪ್ರಯತ್ನಕ್ಕೆ ಯಶಸ್ಸು ದೊರೆತಿದೆ. ಲಾಂಚ್ ನಲ್ಲಿ 30 ಮಂದಿ ಪ್ರಯಾಣಿಕರಿದ್ದರು.
. ಇಂದು ಮುಂಜಾನೆ ಪ್ರಯಾಣಿಕರು ಮತ್ತು ವಾಹನಗಳ ಸಮೇತ ಹಸಿರುಮಕ್ಕಿಯಿಂದ ನಿಟ್ಟೂರಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಲಾಂಚ್ ತೀವ್ರ ಗಾಳಿಯಿಂದ ನಿಯಂತ್ರಣಕ್ಕೆ ಬಾರದೆ ಮುಂದಕ್ಕೆ ಚಲಿಸಿತು.
ಹೊಸ ಸೇತುವೆಯ ಕಾಮಗಾರಿ ಇಲ್ಲಿ ನಡೆಯುತ್ತಿದ್ದು ಲಾಂಚ್ ಈ ಸೇತುವೆಯ ಕಂಬಗಳ ಮಧ್ಯೆ ಸಿಲುಕಿತ್ತು.
ಹಸಿರುಮಕ್ಕಿ ಲಾಂಚ್ ಇಲ್ಲಿನ ಜನರ ಬದುಕಿನ ಅವಿಭಾಜ್ಯ ಅಂಗವಾಗಿದೆ. ಹೊರ ಜಗತ್ತಿಗೆ ಸಂಪರ್ಕ ಕಲ್ಪಿಸುವ ಸಾರಿಗೆ ವ್ಯವಸ್ಥೆಯಾಗಿದೆ.