ನವದೆಹಲಿ: ಕಲಿಕೆ, ಸಂಶೋಧನೆ ಮತ್ತು ನವೋನ್ವೇಷಣೆಯ ಕಡೆಗೆ ಗಮನಹರಿಸುವುದಕ್ಕೆ ಇದು ಸಕಾಲವಾಗಿದ್ದು, ನಮ್ಮ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಸಾರವೂ ಆಗಿದೆ ಎಂದು ಪ್ರಧಾನಿ ನರೆಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ.
ನಿಮ್ಮ ಸಹಜವಾದ ಅಭಿರುಚಿಯನ್ನು ಉತ್ತೇಜಿಸಿ ನಿಮಗ ಸೂಕ್ತ ಮಾರ್ಗದರ್ಶನ ನೀಡಲು ಬಯಸುತ್ತದೆ. ಇಪ್ಪತ್ತೊಂದನೇ ಶತಮಾನ ತಿಳಿವಳಿಕೆ ಅಥವಾ ಅರಿವಿನ ಯುಗವಾಗಿದೆ. ಶಾಲೆ, ಕಾಲೇಜು ಮತ್ತು ವಿಶ್ವವಿದ್ಯಾಲಯದ ನಿಮ್ಮ ಅನುಭವವನ್ನು ವಿಸ್ತಾರಗೊಳ್ಳುವಂತೆ ಮಾಡಲು ಹೊಸ ಶಿಕ್ಷಣ ನೀತಿ ಬಯಸುತ್ತದೆ ಎಂದರು.
ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ 2020ರ ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮದಲ್ಲಿ ಶನಿವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಅವರು, ಕಲಿಯುವುದು, ಪ್ರಶ್ನಿಸುವುದು ಮತ್ತು ಸಮಸ್ಯೆ ಬಗೆಹರಿಸುವುದನ್ನು ನೀವು ರೂಢಿಸಿಕೊಳ್ಳಬೇಕೆಂದು ಮೋದಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಬದುಕಿಗೆ ಅಗತ್ಯವಾದ ಕಲಿಕೆಯನ್ನು ಉತ್ತೇಜಿಸುವ ಪ್ರಯತ್ನವನ್ನು ಹೊಸ ನೀತಿ ಮಾಡುತ್ತದೆ. ಶಾಲಾ ಬ್ಯಾಗ್ ನ ಭಾರ ಶಾಲೆಯ ಹೊರಗೆ ಇರುವುದಿಲ್ಲ. ಅಂತರ್ಸಂಬಂಧದ ವಿಷಯಗಳ ಅಧ್ಯಯನ ಹೊಸ ನೀತಿಯ ವಿಶೇಷ ಆಸಕ್ತಿದಾಯಕ ಅಂಶವಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿಯು ಎಲ್ಲರಿಗೂ ಶಿಕ್ಷಣ ಎಂಬ ಕನಸನ್ನು ನನಸಾಗಿಸಲಿದೆ. ಇದು ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗೂ ಅನ್ವಯವಾಗಲಿದೆ ಎಂದು ಮೋದಿ ಹೇಳಿದರು.
ಕಲಿಕೆ, ಸಂಶೋಧನೆ, ನವೋನ್ವೇಷಣೆ ಹೊಸ ಶಿಕ್ಷಣ ನೀತಿಯ ಸಾರ
Follow Us