Tuesday, March 2, 2021

ಈ ಬಾರಿ ದೇಶಕ್ಕೂ ಹೊಸ ವರ್ಷದ ಶುಭಾಶಯ ಹೇಳೋಣ- ಮನ್ ಕಿ ಬಾತ್’ನಲ್ಲಿ ಮೋದಿ

newsics.com
ನವದೆಹಲಿ: ಈ ವರ್ಷದ ಕೊನೆಯ ‘ಮನ್ ಕಿ ಬಾತ್’ನಲ್ಲಿ ಪ್ರಧಾನಿ ನರೇಂದ್ರ ಮೋದಿ, 2021ರಲ್ಲಿ ಭಾರತದ ಶಕ್ತಿ ಇನ್ನಷ್ಟು ವೃದ್ಧಿಸಲಿದೆ ಎಂದು ಹೇಳಿದ್ದಾರೆ.
ಕೊರೋನಾದಿಂದಾಗಿ ಹಲವು ಸಮಸ್ಯೆಗಳು ಎದುರಾಗಿವೆ. ಸಂಕಷ್ಟ, ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ಭಾರತ ಮತ್ತಷ್ಟು ಬಲಿಷ್ಠವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
2020ರಲ್ಲಿ ಹೀಗೆಲ್ಲ ಆಗುತ್ತದೆಂದು ಯಾರೂ ಊಹಿಸಿರಲಿಲ್ಲ. ಕೊರೋನಾದಿಂದ ಉತ್ಪಾದನೆ ಸೇರಿ ಹಲವು ಸಮಸ್ಯೆ ಎದುರಾಗಿದೆ. ಪ್ರತಿ ಸಂಕಷ್ಟದಿಂದಲೂ ಹೊಸ ಪಾಠ ಕಲಿಯಲು ಅವಕಾಶ ಸಿಕ್ಕಂತಾಗಿದೆ. ಭಾರತ ಎಲ್ಲ ಸವಾಲುಗಳನ್ನು ಮೆಟ್ಟಿ ನಿಂತು ಮುಂದೆ ಸಾಗುತ್ತಿದೆ ಎಂದು ಹೇಳಿದ್ದಾರೆ.
ಇಂದು ಡಿಸೆಂಬರ್ 27, ನಾಲ್ಕು ದಿನದಲ್ಲಿ 2021 ಆರಂಭವಾಗಲಿದೆ. ಮುಂದಿನ ಮನ್ ಕೀ ಬಾತ್ ಹೊಸ ವರ್ಷದಲ್ಲಿ ನಡೆಯಲಿದೆ. ಇದು ಈ ವರ್ಷದ ಕೊನೆಯ ಮನ್ ಕೀ ಬಾತ್ ಎಂದು ನರೇಂದ್ರ ಮೋದಿ ಹೇಳಿದರು.
ಇಂದು ನನ್ನ ಮುಂದೆ ನಿಮ್ಮ ನೂರಾರು ಪತ್ರಗಳಿವೆ. ಹೊಸ ವರ್ಷದಲ್ಲಿ ನಾವು ಎಲ್ಲರಿಗೂ ಶುಭಾಶಯ ಹೇಳುತ್ತೇವೆ. ನಾವು ದೇಶಕ್ಕೆ ಶುಭಾಶಯ ಹೇಳೋಣ. ದೇಶದಕ್ಕೆ ಒಳ್ಳೆಯದಾಗಲಿ ಎಂದು ಆಶಿಸೋಣ ಎಂದು ಅಂಜಲಿ ಅವರು ಪತ್ರವನ್ನು ಬರೆದಿದ್ದಾರೆ ನರೇಂದ್ರ ಮೋದಿ ತಿಳಿಸಿದರು.
ಮನ್ ಕೀ ಬಾತ್ ನಲ್ಲಿ ಮೋದಿ ಹೇಳಿದ್ದಿಷ್ಟು…
– ವೆಂಕಟ ಮುರಳಿ ಪ್ರಸಾದ್ ಅವರು ವಿಶಾಖಪಟ್ಟಣಂನಿಂದ ಪತ್ರ ಬರೆದಿದ್ದಾರೆ. 2021ರಲ್ಲಿ ಆತ್ಮ ನಿರ್ಭರ್ ಭಾರತ್ ಮೂಲಕ ಖರೀದಿ ಮಾಡುವ ಚಾರ್ಟ್‌ ಅನ್ನು ಪತ್ರದೊಂದಿಗೆ ಲಗತ್ತಿಸಿದ್ದಾರೆ. ಎಬಿಸಿ ಎಂದರೆ ಅರ್ಥ ಮಾಡಿಕೊಳ್ಳಲು ಕೆಲವು ಸಮಯ ನನಗೆ ಬೇಕಾಯಿತು. ಪ್ರತಿದಿನ ನಾವು ಬಳಕೆ ಮಾಡುವ ಹಲವಾರು ವಸ್ತುಗಳನ್ನು ಅವರು ಪಟ್ಟಿ ಮಾಡಿದ್ದಾರೆ. ನಮ್ಮ ದೇಶದಲ್ಲಿಯೇ ತಯಾರಾಗುವ ಹಲವಾರು ವಸ್ತುಗಳನ್ನು ನಾವು ಪ್ರತಿದಿನ ಬಳಕೆ ಮಾಡಬಹುದು.
– ಸ್ವದೇಶಿ ವಸ್ತುಗಳ ಬಳಕೆ ಬಗ್ಗೆ ಜಾಗೃತಿ ಹೆಚ್ಚಾಗುತ್ತಿದೆ. ಕೋವಿಡ್ ನಡುವೆಯೇ ಸ್ವದೇಶಿ ಉತ್ಪನ್ನಗಳನ್ನು ಬಳಕೆ ಮಾಡಿ ಎಂಬ ಕೂಗು ಹೆಚ್ಚಾಗುತ್ತಿದೆ. ಅತಿ ಕಡಿಮೆ ಅವಧಿಯಲ್ಲಿ ಜನರ ಆಲೋಚನಾ ಶಕ್ತಿ ಎಷ್ಟು ಬದಲಾಗಿದೆ ನೋಡಿ.
– ನೀವು ಒಂದು ಪಟ್ಟಿ ಮಾಡಿ ಎಂದು ಜನರಲ್ಲಿ ನಾನು ಮನವಿ ಮಾಡುವೆ. ಈ ಪಟ್ಟಿಯಲ್ಲಿ ನಾವು ಎಷ್ಟು ವಿದೇಶಿ ವಸ್ತುಗಳನ್ನು ಬಳಕೆ ಮಾಡುತ್ತೇವೆ ಎಂಬುದನ್ನು ತಿಳಿಯಿರಿ. ದೇಶದಕ್ಕಾಗಿ ನಾವು ಹೊಸ ವರ್ಷದಲ್ಲಿ ಹೊಸ ನಿರ್ಣಯ ಕೈಗೊಳ್ಳೋಣ.
– ಸ್ವದೇಶಿ ಉತ್ಪನ್ನಗಳನ್ನು ಬಳಕೆ ಮಾಡುತ್ತೇವೆ ಎಂದು ಹೊಸ ವರ್ಷದಲ್ಲಿ ಸಂಕಲ್ಪ ಮಾಡಿ. ಸ್ವದೇಶಿ ವಸ್ತುಗಳಲ್ಲಿ ನಮ್ಮ ದೇಶದ ಜನರ ಬೆವರಿನ ಶ್ರಮ ಅಡಗಿದೆ. ನಿಮ್ಮ ಸಂಕಲ್ಪ ನಮ್ಮ ದೇಶದ ಜನರಿಗೆ ಸಹಾಯಕವಾಗಲಿದೆ ಎಂಬುದನ್ನು ಮರೆಯುವಂತಿಲ್ಲ.
– ಭಾರತದಲ್ಲಿ ಚಿರತೆಗಳ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗಿದೆ. ಜಿಮ್ ಕಾರ್ಬೆಟ್ ಚಿರತೆಗಳ ಬಗ್ಗೆ ಹೇಳಿದ್ದರು. ಮಧ್ಯಪ್ರದೇಶ ಮತ್ತು ಕರ್ನಾಟಕದಲ್ಲಿ ಚಿರತೆಗಳ ಸಂಖ್ಯೆ ಹೆಚ್ಚಾಗಿದೆ.
– ಕರ್ನಾಟಕದಿಂದ ಬಂದಿರುವ ಪತ್ರವನ್ನು ಓದಿದ ಮೋದಿ, ಶ್ರೀರಂಗಪಟ್ಟಣದ ಸಮೀಪದ ಮಂದಿರವನ್ನು ಯವ ಬ್ರಿಗೇಡ್ ಸ್ವಚ್ಛಗೊಳಿಸಿದ ಕಾರ್ಯವನ್ನು ಶ್ಲಾಘಿಸಿದರು. ವಾರಾಂತ್ಯದ ಬಿಡುವಿನ ಸಮಯದಲ್ಲಿ ಇದನ್ನು ಅವರು ಮಾಡಿದ್ದಾರೆ ಎಂದು ಮೋದಿ ಹೇಳಿದರು.
– ಭಾರತದಲ್ಲಿನ ಯುವಕರನ್ನು ನೋಡಿದಾಗ ನನಗೆ ಆನಂದ ಆಗುತ್ತದೆ. ಕ್ಯಾನ್ ಡು, ವಿಲ್ ಡು ಎಂಬ ಎರಡು ಬಲವಾದ ನಂಬಿಕೆಗಳಿವೆ. ಅವರು ಅಂದುಕೊಂಡಿದ್ದನ್ನು ಸಾಧಿಸಿ ತೋರಿಸುತ್ತಾರೆ.

ಮತ್ತಷ್ಟು ಸುದ್ದಿಗಳು

Latest News

ಯುವತಿಯೊಂದಿಗಿನ ವಿಡಿಯೋ: ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ದೂರು ದಾಖಲು

newsics.com ಬೆಂಗಳೂರು: ನೌಕರಿ ಕೊಡಿಸುವುದಾಗಿ ಹೇಳಿ ಯುವತಿಗೆ ಆಮಿಷವೊಡ್ಡಿ ಸಚಿವ ರಮೇಶ್ ಜಾರಕಿಹೊಳಿ ಆಕೆಯನ್ನು ಲೈಂಗಿಕವಾಗಿ ಬಳಕೆಮಾಡಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಿಹಳ್ಳಿ ಆರೋಪಿಸಿ ದೂರು...

ರಾಜ್ಯಸಭೆ, ಲೋಕಸಭೆ ಟಿವಿ ಇನ್ನು ‘ಸಂಸದ್ ಟಿವಿ’

newsics.com ನವದೆಹಲಿ: ರಾಜ್ಯ ಸಭಾ ಮತ್ತು ಲೋಕ ಸಭಾ ಟಿವಿಯನ್ನು ವಿಲೀನ ಮಾಡಲಾಗಿದ್ದು, ಇನ್ನು 'ಸಂಸದ್ ಟಿವಿ' ಎಂದು ಕರೆಯಲಾಗುತ್ತದೆ. ರಾಜ್ಯ‌ ಸಭೆ ಹಾಗೂ ಲೋಕ ಸಭೆ ಕಲಾಪಗಳನ್ನು ಪ್ರಸಾರ ಮಾಡುತ್ತಿದ್ದ ರಾಜ್ಯ ಸಭಾ ಮತ್ತು...

ಮೈಸೂರಿನ ಸುಧಾ ಹೆಗಡೆಗೆ ಅತ್ಯುತ್ತಮ ಅಭಿನಯ ಪ್ರಶಸ್ತಿ

newsics.com ಮೈಸೂರು: ಮೈಸೂರಿನ ಸುಧಾ ಹೆಗಡೆ ಅವರಿಗೆ ಅತ್ಯುತ್ತಮ ಅಭಿನಯ ಪ್ರಶಸ್ತಿ ದೊರಕಿದೆ. ಬೆಂಗಳೂರಿನಲ್ಲಿ ಆಯೋಜಿಸಿದ್ದ ಬ್ಯುಸಿನೆಸ್ ಬೈ ಬ್ರಾಹ್ಮಿನ್ಸ್ ಪ್ರಾದೇಶಿಕ ಸಮ್ಮೇಳನದಲ್ಲಿ 'ಗೆಲುವಿನೆಡೆಗೆ' ಎಂಬ ನಾಟಕದ ಅಭಿನಯಕ್ಕೆ ಈ ಪ್ರಶಸ್ತಿ ದೊರಕಿದೆ. ನಾಟಕವನ್ನು ಎಂ.ಸಿ ಕೃಷ್ಣಪ್ರಸಾದ್...
- Advertisement -
error: Content is protected !!