Thursday, January 21, 2021

ಈ ಮರಿಯಾನೆಗೆ ಮಾವುತನೇ ತಾಯ್ತಂದೆ!

ಮೈಸೂರು: ತಾಯಿ ಇಲ್ಲದೆ ತಬ್ಬಲಿ ಮಕ್ಕಳನ್ನು ಸಲಹುವುದು ದೊಡ್ಡ ಸಾಹಸ. ಅಂತಹುದರಲ್ಲಿ ತಾಯಿ ಇಲ್ಲದ ಪ್ರಾಣಿಗಳ ಕತೆ ಏನು ಹೇಳಿ? ಆದರೆ ಇಂಥ ತಾಯಿ ಇಲ್ಲದ ಮರಿಯಾನೆಗಳ ಪಾಲಿಗೆ ಮೈಸೂರು ಪ್ರಾಣಿ ಸಂಗ್ರಹಾಲಯದ ಮಾವುತ ಸೋಮು ಬೆಸ್ಟ್ ಕೇರ್ ಟೇಕರ್.
ಈಗಾಗಲೇ ಮೂರು ಆನೆ ಮರಿಗಳನ್ನು ಸಾಕಿ ಸಲಹಿದ ಅನುಭವ ಹೊಂದಿರುವ ಸೋಮು, ಈಗ ವೇದಾವತಿ ಎಂಬ ಮರಿ ಆನೆಯ ನಿರ್ವಹಣೆಯಲ್ಲಿ ತೊಡಗಿದ್ದಾರೆ.

ಕಾಜಿರಂಗ ರಾಷ್ಟ್ರೀಯ ಉದ್ಯಾನದಲ್ಲಿ ಪ್ರಾಣಿಗಳಿಗೆ ಜಲದಿಗ್ಬಂಧನ

ತಾಯಿ ಹಾಲು ಇಲ್ಲದ ಆನೆಮರಿಗೆ ಮೂರು ಹೊತ್ತು ಹಾಲು ನೀಡಲಾಗುತ್ತದೆ. ಜತೆಗೆ ಅದಕ್ಕೆ ಅಕ್ಕಿ-ರಾಗಿ ಹಾಗೂ ಆ್ಯಪಲ್ ಸೇರಿಸಿದ ಗಂಜಿ ನೀಡಲಾಗುತ್ತದೆ. ಈ ಮರಿಯಾನೆಯನ್ನು ಚಾಮರಾಜನಗರದ ಕಾಡಿನಿಂದ ತರಲಾಗಿದ್ದು, ತಂದಾಗ ಈ ಆನೆಮರಿ 89 ಕೆಜಿ ಇತ್ತು. ಈಗ ಸೋಮು ಆರೈಕೆಯಲ್ಲಿ ಈ ಆನೆ ಮರಿ ವೇದಾವತಿ 110 ಕೆಜಿಯಾಗಿದ್ದು ಚಿಕ್ಕಮಕ್ಕಳಂತೆ ತುಂಟಾಟವಾಡಿಕೊಂಡು ಓಡಾಡಿಕೊಂಡಿದೆ.
ಈ ಆನೆಮರಿಯ ಆರೈಕೆಗಾಗಿ ಅದನ್ನು ಪ್ರತಿನಿತ್ಯ ಸೋಮು ಝೂನ ಸುತ್ತ ಓಡಾಡಿಸುತ್ತಾರೆ. ಕನಿಷ್ಟ ಮೂರು ಸುತ್ತು ವಾಕ್ ಮಾಡಿಸುತ್ತಾರೆ. ಸೋಮು ವೇದಾವತಿಗೂ ಮೊದಲು ಚಾಮುಂಡಿ, ಐಶ್ವರ್ಯ, ಕೊಳ್ಳೆಗಾಲ, ಮಾದೇಶ್ ಎಂಬ ನಾಲ್ಕೈದು ಆನೆಮರಿಗಳನ್ನು ಸಾಕಿ ಸಲಹಿದ್ದಾರೆ.

ಮತ್ತಷ್ಟು ಸುದ್ದಿಗಳು

Latest News

ಹೊಸ ದಾಖಲೆ ಬರೆದ ಷೇರುಪೇಟೆ; 50 ಸಾವಿರ ಗಡಿ ದಾಟಿದ ಸೂಚ್ಯಂಕ

newsics.com ಮುಂಬೈ: ಷೇರುಪೇಟೆ ಸೂಚ್ಯಂಕ 50 ಸಾವಿರ ಗಡಿ ದಾಟುವ ಮೂಲಕ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಹೊಸ ದಾಖಲೆ ಸೃಷ್ಠಿಯಾಗಿದೆ.ಕೊರೋನಾ ಸಂಕಷ್ಟದ ನಡುವೆಯೂ...

ಒಂದೇ ದಿನ 15,223 ಜನರಿಗೆ ಕೊರೋನಾ ಸೋಂಕು 151 ಮಂದಿ ಸಾವು

Newsics.com ನವದೆಹಲಿ: ದೇಶದಲ್ಲಿ ಕೊರೋನಾದ  ಅಬ್ಬರ ಮುಂದುವರಿದಿದೆ.ಕಳೆದ  24 ಗಂಟೆಯಲ್ಲಿ  15, 223 ಮಂದಿಯಲ್ಲಿ  ಕೊರೋನಾ ಸೋಂಕು ದೃಢಪಟ್ಟಿದೆ.  ಇದರೊಂದಿಗೆ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ1,06.10,883 ಕ್ಕೆ ತಲುಪಿದೆ.    ಕಳೆದ 24 ಗಂಟೆಯಲ್ಲಿ ಕೊರೋನಾ...

ಮುಂಬೈನ ಹಲವೆಡೆ ಎನ್ ಸಿ ಬಿ ದಾಳಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹಚರ ಸೆರೆ

Newsics.com ಮುಂಬೈ: ಮಾದಕ ದ್ರವ್ಯ ನಿಯಂತ್ರಣ  ದಳ ಬ್ಯೂರೋದ ಅಧಿಕಾರಿಗಳು ಮುಂಬೈ ಮಹಾನಗರದ ಹಲವೆಡೆ ದಾಳಿ  ನಡೆಸಿದ್ದಾರೆ. ಅಪಾರ ಪ್ರಮಾಣದ ಮಾದಕ ದ್ರವ್ಯ ವಶಪಡಿಸಿಕೊಂಡಿದ್ದಾರೆ. ಭೂಗತ ಪಾತಕಿ ದಾವೂದ್  ಇಬ್ರಾಹಿಂ ಸಹಚರ ಟಿಂಕೋ ಪಥಾನ್ ನನ್ನು...
- Advertisement -
error: Content is protected !!