ಫೆ.7ರಂದು ‘ಮಾಲ್ಗುಡಿ ಡೇಸ್’ ಸಿನಿಮಾ ರಿಲೀಸ್

27

ಬೆಂಗಳೂರು: ‘ಮಾಲ್ಗುಡಿ‌ ಡೇಸ್’ ಕನ್ನಡಿಗರು‌ ಎಂದೂ ಮರೆಯದ ಪದ. ಈ ನೆನಪನ್ನು ಇನ್ನಷ್ಟು ಹಸಿರಾಗಿಡಲು ಮಾಲ್ಗುಡಿ ಡೇಸ್ ಸಿನಿಮಾ ರೂಪದಲ್ಲೂ ಕಾಣಿಸಿಕೊಳ್ಳಲಿದೆ.
ಮಾಲ್ಗುಡಿ ಡೇಸ್ ಹೆಸರಿನ ಸಿನಿಮಾದ ಚಿತ್ರೀಕರಣ ಸಾಗಿದೆ. ಇದರ ಅಫೀಷಿಯಲ್ ಟೀಸರ್ ಶುಕ್ರವಾರ ಬಿಡುಗಡೆಯಾಗಿದ್ದು. ಹೆಚ್ಚಿನ ನಿರೀಕ್ಷೆ ಹುಟ್ಟಿಸಿದೆ.
ಈ ಚಿತ್ರ ಫೆಬ್ರವರಿ 7ರಂದು ತೆರೆಕಾಣಲಿದೆ. ಕಿಶೋರ್ ಮೂಡಬಿದ್ರಿ ಅವರ ಕಥೆ ಮತ್ತು ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬರುತ್ತಿದೆ.
ಟೀಸರ್ನಲ್ಲಿ ಮಾಲ್ಗುಡಿ ಡೇಸ್ -ಮಾಲ್ಗುಡಿ ಡೇಸ್ ಎಂಬ ಹಾಡು ಇದ್ದು, ವಿಜಯ ರಾಘವೇಂದ್ರ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ.
ಈ ಸಿನಿಮಾ 65 ವರ್ಷದ ಲೇಖಕ ಲಕ್ಷ್ಮೀನಾರಾಯಣ ಮಾಲ್ಗುಡಿ ಎಂಬುವರ ನಿವೃತ್ತಿ ನಂತರದ ಬದುಕಿನ ಚಿತ್ರಣ ಹೊಂದಿದೆ.

LEAVE A REPLY

Please enter your comment!
Please enter your name here