ಮಂಗಳೂರು: ಮಂಗಳೂರಿನ ಏರ್ ಪೋರ್ಟ್ ನಲ್ಲಿ ಪತ್ತೆಯಾದ ಸಜೀವ ಬಾಂಬ್ ಅನ್ನು ವಿಮಾನನಿಲ್ದಾಣದ ಕೆಳಭಾಗದಲ್ಲಿರುವ ಕೆಂಜಾರು ಮೈದಾನದ ನಿರ್ಜನ ಪ್ರದೇಶದಲ್ಲಿ ಸ್ಪೋಟಿಸಲಾಯಿತು.
ಕ್ರೇನ್ ಮೂಲಕ ಸಜೀವ ಬಾಂಬ್ ಇದ್ದ ಬ್ಯಾಗ್ ನ್ನು ಸ್ಥಳಾಂತರಿಸಿ ಸ್ಪೋಟಿಸಲಾಯಿತು.
ಮಂಗಳೂರಿನ ಏರ್ ಪೋರ್ಟ್ ನಲ್ಲಿ ಸೋಮವಾರ ಬೆಳಗ್ಗೆ 7 ರಿಂದ 8 ಗಂಟೆ ಸಂದರ್ಭದಲ್ಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಓರ್ವ ಆಟೋ ಚಾಲಕ ಒಂದು ಸಜೀವ ಬಾಂಬ್ ಇದ್ದ ಲ್ಯಾಪ್ಟಾಪ್ ಬ್ಯಾಗ್ ಅನ್ನು ವಿಮಾನ ನಿಲ್ದಾಣದಲ್ಲೇ ಬಿಟ್ಟುಹೋಗಿದ್ದ. ಆದರೆ, ಈ ಬ್ಯಾಗ್ನಲ್ಲಿ ಸಜೀವ ಬಾಂಬ್ ಇರುವುದು ಪತ್ತೆಯಾಯಿತು. ಹೀಗಾಗಿ ಕೆಲ ಕಾಲ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ನಗರ ಪೊಲೀಸ್ ಆಯುಕ್ತ ಡಾ.ಹರ್ಷ ಸ್ಥಳಕ್ಕೆ ಆಗಮಿಸಿ ಈ ಕುರಿತು ಪರಿಶೀಲನೆ ಕೈಗೊಂಡಿದ್ದಾರೆ. ವಿಮಾನ ನಿಲ್ದಾಣದ ಬಹುತೇಕ ಸಿಸಿಟಿವಿ ಕ್ಯಾಮೆರಾಗಳು ಕೆಟ್ಟುಹೋಗಿದ್ದು, ಭದ್ರತಾ ವೈಫಲ್ಯವನ್ನೇ ದುಷ್ಕರ್ಮಿಗಳು ದುಷ್ಕೃತ್ಯಕ್ಕೆ ಬಳಸಿಕೊಂಡಿದ್ದಾರೆ.
ಈ ಮಧ್ಯೆ, ಮಂಗಳೂರು ಪೊಲೀಸರು ಆಟೋ ರಿಕ್ಷಾ ಹಾಗೂ ಶಂಕಿತ ವ್ಯಕ್ತಿಯ ಚಿತ್ರವನ್ನು ಬಿಡುಗಡೆಗೊಳಿಸಿದ್ದಾರೆ.
ಮಂಗಳೂರು: ಬಾಂಬ್ ಸ್ಫೋಟಿಸಿದ ಪೊಲೀಸರು
Follow Us