ಕೊಚ್ಚಿ: ಕೇರಳದ ಕೊಚ್ಚಿ ಸಮೀಪದ ಮರಾಡು ಎಂಬಲ್ಲಿ ಕರಾವಳಿ ತೀರ ನಿಯಂತ್ರಣ ಕಾಯಿದೆ ಉಲ್ಲಂಘಿಸಿ ಕಟ್ಟಲಾಗಿದ್ದ ನಾಲ್ಕು ಬೃಹತ್ ಬಹು ಮಹಡಿ ಕಟ್ಟಡಗಳನ್ನು ಧ್ವಂಸಗೊಳಿಸುವ ಪ್ರಕ್ರಿಯೆಗೆ ಚಾಲನೆ ದೊರೆತಿದೆ. ಬೆಳಿಗ್ಗೆ 11. 17ಕ್ಕೆ ಮೊದಲ ಬೃಹತ್ ಕಟ್ಟಡವನ್ನು ಸ್ಫೋಟಕ ಬಳಸಿ ನಿಮಿಷಾರ್ಧದಲ್ಲಿ ನೆಲಸಮಗೊಳಿಸಲಾಯಿತು. ಮೊದಲು ಕಟ್ಟಡದಲ್ಲಿ ಸ್ಫೋಟಕಗಳನ್ನು ತುಂಬಿಸಿ ಇಡಲಾಗಿತ್ತು. ಎಲ್ಲ ಸಿದ್ದತೆ ಪೂರ್ಣಗೊಂಡ ಬಳಿಕ ಅದನ್ನು ಉಡಾಯಿಸಲಾಯಿತು. 350 ಕುಟುಂಬಗಳು ಈ ನಾಲ್ಕು ಬೃಹತ್ ವಸತಿ ಸಮುಚ್ಚಯದಲ್ಲಿ ವಾಸಿಸುತ್ತಿದ್ದವು. ಕಟ್ಟಡಗಳನ್ನು ಧ್ವಂಸಗೊಳಿಸುವ ಬದಲು ದಂಡ ಪಾವತಿಸಿ ಕಟ್ಟಡಗಳನ್ನು ಸಕ್ರಮಗೊಳಿಸುವಂತೆ ಮನವಿ ಮಾಡಲಾಗಿತ್ತು. ಆದರೆ ಸುಪ್ರೀಂ ಕೋರ್ಟ್ ಈ ಪ್ರಸ್ತಾಪಕ್ಕೆ ಸಮ್ಮತಿ ಸೂಚಿಸಿರಲಿಲ್ಲ.