♦ ಕೊರೋನಾ ನಷ್ಟ ಭರ್ತಿಗೆ ಮಾರುತಿ ಸುಜುಕಿ ಹೊಸ ಯೋಜನೆ
ಮುಂಬೈ: ಕೊರೋನಾ ಎಲ್ಲ ವ್ಯಾಪಾರ ಉದ್ದಿಮೆಗಳ ಜತೆ ಕಾರು ಮಾರಾಟದ ಮೇಲೂ ತನ್ನ ಕರಿನೆರಳು ಬೀರಿದೆ. ಅಪಾರ ನಷ್ಟದಲ್ಲಿರುವ ಕಾರು ಉತ್ಪಾದನಾ ಕಂಪನಿಗಳು ನಷ್ಟ ತುಂಬಿಕೊಳ್ಳಲು ವಿವಿಧ ಯೋಜನೆಯ ಮೊರೆ ಹೋಗುತ್ತಿದ್ದು, ಮಾರುತಿ ತನ್ನ ಆಯ್ದ ಮಾದರಿಯ ಕಾರುಗಳನ್ನು ನಿರ್ದಿಷ್ಟ ಅವಧಿಗೆ ಲೀಸ್’ಗೆ ನೀಡಲು ನಿರ್ಧರಿಸಿದೆ.ಹೊಸ ಲೀಸ್ ಯೋಜನೆಯಂತೆ ಮಾರುತಿ ಸುಜುಕಿ, ನಿಗದಿತ ಅವಧಿ ಹಾಗೂ ಕಾರು ಮಾದರಿ ಆಧರಿಸಿ ಬೆಲೆ ನಿಗದಿಪಡಿಸಿದ್ದು ಸದ್ಯದ ನಷ್ಟ ತುಂಬಿಕೊಳ್ಳಲು ಈ ಯೋಜನೆ ನೆರವಾಗಲಿದೆ.
ಮಾರುತಿ ಸುಜುಕಿ ಸಬ್ಸ್ಕ್ರೈಬ್ ಹೆಸರಿನಲ್ಲಿ ಲೀಸ್ ಕಾರುಗಳ ಆಯ್ಕೆಗೆ ಅವಕಾಶ ನೀಡಲಾಗಿದ್ದು, ಅರೆನಾ ಮತ್ತು ನೆಕ್ಸಾ ಎರಡು ಮಾದರಿಯ ಕಾರುಗಳು ಮಾರಾಟ ಮಳಿಗೆಯಲ್ಲಿ ಲೀಸ್’ಗೆ ಲಭ್ಯವಿದೆ.
ಅರೆನಾ ಶೋ ರೂಂನಲ್ಲಿ ಸ್ವಿಫ್ಟ್ ಡಿಸೈರ್, ವಿಟಾರಾಬ್ರೆಝಾ, ಎರ್ಟಿಗಾ ಕಾರುಗಳ ಮೇಲೆ ಲೀಸ್ ಲಭ್ಯವಿದ್ದರೆ, ನೆಕ್ಸಾ ಕಾರು ಶೋರೂಂನಲ್ಲಿ ಸಿಯಾಜ್, ಬಲೆನೋ ಹಾಗೂ ಎಕ್ಸ್ ಎಲ್ 6 ಕಾರುಗಳನ್ನು ಲೀಸ್’ಗೆ ಪಡೆಯಬಹುದಾಗಿದೆ.
ಕಾರಿನ ಮಾದರಿ ಆಧರಿಸಿ ದಿನಕ್ಕೆ 700 ರಿಂದ 1200 ದರ ನಿಗದಿಪಡಿಸಿದ್ದು, ಕಾರಿಗಾಗಿ ನೀವು ರಜಿಸ್ಟರ್ ಮಾಡಿದ 15 ದಿನದಲ್ಲಿ ಕಾರು ನಿಮಗೆ ಸಿಗಲಿದೆ.
ಮಹಾರಾಷ್ಟ್ರದಲ್ಲಿ ಕೊರೋನಾಕ್ಕೆ 94 ಪೊಲೀಸರ ಬಲಿ
ಕಾರಿನ ದರವನ್ನು ಪ್ರತಿ ತಿಂಗಳು ಕಟ್ಟಬೇಕಿದ್ದು, ಕನಿಷ್ಟ 24 ತಿಂಗಳು ಲೀಸ್ ಪಡೆಯುವುದು ಕಡ್ಡಾಯ. ಇದನ್ನು ಹೊರತುಪಡಿಸಿ 36, 48 ತಿಂಗಳ ಲೀಸ್’ಗೂ ಅವಕಾಶವಿದೆ.
ಲೀಸ್ ಮೊತ್ತ ಕಾರಿನ ಮೆಂಟೆನೆನ್ಸ್ ಹಾಗೂ ಪಾಲಿಸಿ ಹಣ ಒಳಗೊಂಡಿರುತ್ತದೆ. ಲೀಸ್’ಗೆ ನೀಡುವ ಕಾರುಗಳು ಹೊಸದಾಗಿದ್ದು, ಲೀಸ್ ಅವಧಿಯಲ್ಲಿ ತಾಂತ್ರಿಕ ತೊಂದರೆ ಹೊರತುಪಡಿಸಿ ಟ್ರಾಫಿಕ್ ರೂಲ್ಸ್ ಬ್ರೇಕ್, ಆಕ್ಸಿಡೆಂಟ್ ಸೇರಿದಂತೆ ಇತರ ಕೃತ್ಯಗಳಿಗೆ ಲೀಸ್’ದಾರರೇ ಹೊಣೆ ಹೊರಬೇಕಿದೆ. ಲೀಸ್ ಕಾರುಗಳಿಗೆ ಇನ್ಯೂರೆನ್ಸ್ ಇರಲಿದ್ದು, ಬ್ರೇಕ್ ಡೌನ್’ನಂತಹ ಸಮಸ್ಯೆಗೆ ಕಂಪನಿ ಹೊಣೆ ಹೊರಲಿದೆ. ಒಟ್ಟಿನಲ್ಲಿ ನಷ್ಟ ತುಂಬಿಕೊಳ್ಳಲು ಕಾರು ಕಂಪನಿ ಹೊಸ ಪ್ರಯತ್ನಕ್ಕೆ ಮುಂದಾಗಿದೆ.