Friday, November 27, 2020

ರಾಜ್ಯದಲ್ಲಿ ಒಂದು ವರ್ಷ ಮಾಸ್ಕ್ ಬಳಕೆ ಕಡ್ಡಾಯ

ಬೆಂಗಳೂರು: ರಾಜ್ಯದಲ್ಲಿ ಒಂದು ವರ್ಷ ಮಾಸ್ಕ್ ಬಳಕೆಯನ್ನು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
‘ಕರ್ನಾಟಕ ಸಾಂಕ್ರಾಮಿಕ ರೋಗಗಳ ನಿಯಂತ್ರಣ 2020’ ಹೆಸರಿನಲ್ಲಿ ಸುಗ್ರೀವಾಜ್ಞೆ ಹೊರಡಿಸಲಾಗಿದೆ. ಈ ಆದೇಶ ಪ್ರಕಟವಾದ ದಿನದಿಂದ ಒಂದು ವರ್ಷದವರೆಗೆ ಈ ನಿಯಮ ಜಾರಿಯಲ್ಲಿರುತ್ತದೆ.
ಸಾರ್ವಜನಿಕ ಸ್ಥಳದಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಮಾಸ್ಕ್ ಧರಿಸದೇ ಇದ್ದಲ್ಲಿ ಕರವಸ್ತ್ರ, ಅಥವಾ ಬಾಯಿ ಮತ್ತು ಮೂಗನ್ನು ಬಿಗಿಯಾಗಿಲ್ಲದ ಬಟ್ಟೆಯಿಂದ ಮುಚ್ಚಬೇಕು. ಇಬ್ಬರ ವ್ಯಕ್ತಿಗಳ ನಡುವೆ ಕನಿಷ್ಠ 1 ಮೀಟರ್ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು ಎಂದು ಸೂಚಿಸಲಾಗಿದೆ.
ಮಾಸ್ಕ್ ಧರಿಸದಿದ್ದಲ್ಲಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 200 ರೂ., ಮಹಾನಗರ ವ್ಯಾಪ್ತಿಯಲ್ಲದ ಪ್ರದೇಶಗಳಲ್ಲಿ 100 ರೂ. ದಂಡವನ್ನು ವಿಧಿಸಲಾಗುತ್ತದೆ. ಪೊಲೀಸ್ ಸಬ್ ಇನ್ಸ್ ಪೆಕ್ಟರ್, ಮಹಾನಗರ ಪಾಲಿಕೆಯ ಆರೋಗ್ಯ ಇನ್ಸ್ ಪೆಕ್ಟರ್, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಥವಾ ಸರ್ಕಾರದ ಯಾವುದೇ ಅಧಿಕಾರಿಗೆ ದಂಡ ವಿಧಿಸುವ ಅಧಿಕಾರವನ್ನು ಸುಗ್ರೀವಾಜ್ಞೆಯಲ್ಲಿ ನೀಡಲಾಗಿದೆ.

ಮತ್ತಷ್ಟು ಸುದ್ದಿಗಳು

Latest News

ಸ್ಯಾನ್ ಪಾವೊಲೊ ಸ್ಟೇಡಿಯಂಗೆ ಮರಡೋನಾ ಹೆಸರು

newsics.com ನೇಪಲ್ಸ್(ಇಟಲಿ): ನೇಪಲ್ಸ್‌ನಲ್ಲಿರುವ ಸ್ಯಾನ್ ಪಾವೊಲೊ ಸ್ಟೇಡಿಯಂ ಹೆಸರು ಬದಲಾಗಲಿದೆ. ಅರ್ಜೆಂಟೀನಾ ಫುಟ್ಬಾಲ್ ದಂತಕತೆ ಡಿಯಾಗೋ ಮರಡೋನಾ ಅವರ ಹೆಸರಿನಲ್ಲಿ ಸ್ಟೇಡಿಯಂಗೆ ಮರುನಾಮಕರಣ...

ಕಾಕ್ಸ್ ಅಂಡ್ ಕಿಂಗ್ಸ್ ಪ್ರವರ್ತಕ ಪೀಟರ್ ಬಂಧನ

newsics.com ಮುಂಬೈ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಾಕ್ಸ್ ಅಂಡ್ ಕಿಂಗ್ಸ್ ಪ್ರವರ್ತಕ ಪೀಟರ್ ಕೇರ್ಕರ್'ನನ್ನು ಜಾರಿ ನಿರ್ದೇಶನಾಲಯ (ಇ.ಡಿ.) ಬಂಧಿಸಿದೆ.ಯೆಸ್ ಬ್ಯಾಂಕ್ ಗೆ ಸಾಲ ಪಾವತಿಸಬೇಕಿದ್ದ ಕಂಪನಿಗಳ ಪೈಕಿ...

ಸಪ್ತಪದಿ ತುಳಿದ ಭಜರಂಗ್ ಪೂನಿಯಾ- ಸಂಗೀತಾ ಪೋಗಟ್

newsics.com ಚಂಡೀಗಢ: ದೇಶದ ಕುಸ್ತಿತಾರೆಯರಾದ ಭಜರಂಗ್ ಪೂನಿಯಾ ಹಾಗೂ ಸಂಗೀತಾ ಪೋಗಟ್ ಗುರುವಾರ(ನ.26) ಸಪ್ತಪದಿ ತುಳಿದರು.ಹರಿಯಾಣದ ಬಲಾಲಿಯಲ್ಲಿ ನಡೆದ ಸಮಾರಂಭದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಕಾಮನ್ವೆಲ್ತ್ ಮತ್ತು ಏಷ್ಯನ್ ಗೇಮ್ಸ್...
- Advertisement -
error: Content is protected !!