Wednesday, July 6, 2022

ಅಜ್ಜಿಯ ಬದುಕನ್ನೇ ಬದಲಿಸಿತು ‘ಮಾತಾಜಿ ಲಾಠಿ ಸ್ಕಿಲ್’!

Follow Us

ಪುಣೆ: 75 ವರ್ಷದ ವೃದ್ಧೆಯೊಬ್ಬರು ಹೊಟ್ಟೆಪಾಡಿಗಾಗಿ ರಸ್ತೆ ಬದಿಯಲ್ಲಿ ನಿಂತು ಕೋಲಿನ ಮೂಲಕ ತಮ್ಮ ಸಾಹಸ ಪ್ರದರ್ಶಿಸುತ್ತಿರುವ ದೃಶ್ಯ ಇದೀಗ ಎಲ್ಲೆಡೆ ವೈರಲ್ ಆಗಿದ್ದು, ಇದರ ಪರಿಣಾಮ ಅಜ್ಜಿಗೆ ಸಹಾಯದ ಮಹಾಪೂರ ಹರಿದು ಬರುವ ನೀರಿಕ್ಷೆ ಇದೆ.
ಪುಣೆಯ ರಸ್ತೆಯಲ್ಲಿ ಈ ಅಜ್ಜಿ ಸ್ವಯಂರಕ್ಷಣೆಯ ಕಲೆ ಎಂಬ ಹೆಸರಿನಲ್ಲಿ ಕೋಲಿನಿಂದ‌ ಮಾಡಬಹುದಾದ ಸಾಹಸವನ್ನು ಪ್ರದರ್ಶಿಸುತ್ತಿದ್ದರು. ಪ್ರತಿ ಪ್ರದರ್ಶನದ ಕೊನೆಯಲ್ಲಿ ಅಜ್ಜಿ ಇದೆಲ್ಲ ಹೊಟ್ಟೆಪಾಡಿಗಾಗಿ ಎಂದು ಹೇಳುತ್ತಿದ್ದು, ಹಾತಿಂದರ್ ಸಿಂಗ್ ಎಂಬುವರು ಈ ವಿಡಿಯೋವನ್ನು ಟ್ವಿಟರ್ ನಲ್ಲಿ ಹರಿಬಿಟ್ಟಿದ್ದು, 75 ವರ್ಷದ ಈ ಮಾತಾಜಿ ಹೊಟ್ಟೆಪಾಡಿಗಾಗಿ ಲಾಠಿ ಸ್ಕಿಲ್‌ ಪ್ರದರ್ಶಿಸುತ್ತಿದ್ದಾರೆ.
ಕೊರೋನಾ ಕಾಲದಲ್ಲೂ ಇವರು ರಸ್ತೆಗಿಳಿದಿದ್ದಾರೆ ಎಂದರೆ ಅವರಿಗೆ ಬೇರೆ ಯಾವುದೇ ಆದಾಯವಿಲ್ಲ ಎಂಬುದು ಸ್ಪಷ್ಟ, ಯಾರಾದ್ರೂ ನೆರವಾಗಿ ಎಂದಿದ್ದರು.
ಆ ಬಳಿಕ ವಿಡಿಯೋ ಸಖತ್ ವೈರಲ್ ಆಗಿದ್ದು ಕೆಲವರು ಅಜ್ಜಿಗಾಗಿ‌ ಫಂಡ್ ಕಲೆಕ್ಷನ್ ಮುಂದಾದರೆ, ಇನ್ನು ಕೆಲವರು ಅಜ್ಜಿ ಇರುವ ಸ್ಥಳ ಪತ್ತೆ ಹಚ್ಚಿ ಅಕೆಯ ವಾಸ್ತವ್ಯಕ್ಕೆ ವ್ಯವಸ್ಥೆ ಕಲ್ಪಿಸಲು ಮುಂದಾಗಿದ್ದಾರೆ‌.
ಸ್ಥಳೀಯ ಶಿವಸೇನೆ ಘಟಕವೂ ಅಜ್ಜಿಗೆ ನೆರವಾಗುವುದಾಗಿ ಹೇಳಿಕೊಂಡಿದೆ. ಇಷ್ಟೇ ಅಲ್ಲ, ಸದಾ ಜನರ ಕಷ್ಟಕ್ಕೆ ಸ್ಪಂದಿಸುವ ನಟ ಸೋನು ಸೂದ್ ಕೂಡ ಅಜ್ಜಿಯ ವಿಳಾಸ ಒದಗಿಸುವಂತೆ ಕೋರಿದ್ದಾರೆ.
ಇನ್ನು ಹಲವರು ಅಜ್ಜಿಯಿಂದ ಈ ಸ್ವಯಂ ರಕ್ಷಣೆಯ ಕಲೆಯ ತರಬೇತಿಯನ್ನು ಹೆಣ್ಣುಮಕ್ಕಳಿಗೆ ಕೊಡಿಸಬೇಕೆಂಬ ನಿರ್ಧಾರಕ್ಕೆ ಬಂದಿದ್ದು, ಅಜ್ಜಿಯನ್ನು ಸಂಪರ್ಕಿಸಲು ಮುಂದಾಗಿದ್ದಾರೆ‌. ಒಟ್ಟಿನಲ್ಲಿ ಒಂದು ವಿಡಿಯೋ ಅಜ್ಜಿಯ ಬದುಕನ್ನೇ ಬದಲಾಯಿಸಿದೆ.

ಮತ್ತಷ್ಟು ಸುದ್ದಿಗಳು

vertical

Latest News

ಮೋದಿ ಸಚಿವ ಸಂಪುಟದಲ್ಲಿದ್ದ ಮುಖ್ತಾರ್ ಅಬ್ಬಾಸ್ ನಖ್ವಿ, ಆರ್​​ಸಿಪಿ ಸಿಂಗ್ ರಾಜೀನಾಮೆ

newsics.com ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟದಲ್ಲಿ ಸಚಿವರಾಗಿದ್ದ ಮುಖ್ತಾರ್​ ಅಬ್ಬಾಸ್ ನಖ್ವಿ ಹಾಗೂ ಆರ್​​ಸಿಪಿ ಸಿಂಗ್ ತಮ್ಮ ಸ್ಥಾನಕ್ಕೆ ಇಂದು ರಾಜೀನಾಮೆ...

ಬೆಂಗಳೂರಿನಲ್ಲಿ 1,053 ಸೇರಿ ರಾಜ್ಯದಲ್ಲಿ 1,127 ಮಂದಿಗೆ ಕೊರೋನಾ ಸೋಂಕು

newsics.com ಬೆಂಗಳೂರು; ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 1,127 ಮಂದಿಗೆ ಕೊರೋನಾ ದೃಢಪಟ್ಟಿದೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 39,75,000ಕ್ಕೆ ಏರಿಕೆಯಾಗಿದೆ. ಇಂದು ಯಾವುದೇ ಸಾವು ಸಂಭವಿಸಿಲ್ಲ, ಹೀಗಾಗಿ ಸಂಖ್ಯೆ 40080 ಇದೆ. ಬೆಂಗಳೂರು...

ವೀರೇಂದ್ರ ಹೆಗ್ಗಡೆ, ಇಳಯರಾಜ ಸೇರಿ ರಾಜ್ಯಸಭೆಗೆ ನಾಲ್ವರ ನಾಮನಿರ್ದೇಶನ; ಅಭಿನಂದಿಸಿದ ಪ್ರಧಾನಿ ಮೋದಿ

newsics.com ನವದೆಹಲಿ; ರಾಜ್ಯಸಭೆಗೆ ಧರ್ಮಸ್ಥಳದ ಕ್ಷೇತ್ರದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ಸಂಗೀತ ಮಾಂತ್ರಿಕ ಇಳಯರಾಜ, ಅಥ್ಲೀಟ್​ ಪಿಟಿ ಉಷಾ ಹಾಗೂ ಚಿತ್ರಕಥೆಗಾರ ವಿಜಯೇಂದ್ರ ಪ್ರಸಾದ್  ನಾಮ ನಿರ್ದೇಶನಗೊಂಡಿದ್ದಾರೆ. https://twitter.com/narendramodi/status/1544693793240322049?t=2u64d_ttEmETQgNsb5Joxg&s=19 ನಾಲ್ವರ ಫೋಟೋ ಹಂಚಿಕೊಳ್ಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ...
- Advertisement -
error: Content is protected !!