Wednesday, July 6, 2022

ಉಗ್ರ ಯಾಸಿನ್ ಮಲ್ಲಿಕ್‌ಗೆ ಜೀವಾವಧಿ ಶಿಕ್ಷೆ, 10 ಲಕ್ಷ ರೂ. ದಂಡ

Follow Us

newsics.com
ನವದೆಹಲಿ: ಉಗ್ರರಿಗೆ ಆರ್ಥಿಕ ಸಹಾಯ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಗ್ರ ಯಾಸಿನ್ ಮಲಿಕ್ಗೆ ದೆಹಲಿಯ ಎನ್ಐಎ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಜೀವಾವಧಿ ಶಿಕ್ಷೆ ಜತೆಗೆ 10 ಲಕ್ಷ ದಂಡ ವಿಧಿಸಿ ವಿಶೇಷ ಜಡ್ಜ್ ಪ್ರವೀಣ್ ಸಿಂಗ್ ಆದೇಶಿಸಿದ್ದಾರೆ.
ಕಾಶ್ಮೀರಿ ಕಣಿವೆಯಲ್ಲಿ 2017ರಲ್ಲಿ ನಡೆದ ಉಗ್ರ ಚಟುವಟಿಕೆಗಳು, ದಾಳಿಗಳಿಗೆ ಆರ್ಥಿಕ ನೆರವು ನೀಡಿರುವ ಪ್ರಕರಣದಲ್ಲಿ ಯಾಸಿನ್ ಮಲಿಕ್ ಕೋರ್ಟ್ ಎದುರು ತಪ್ಪೊಪ್ಪಿಗೆ ನೀಡಿದ್ದ. ಯಾಸಿನ್ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿ ಪ್ರಕರಣ ದಾಖಲಿಸಲಾಗಿತ್ತು.
ಯಾಸಿನ್ ಮಾಲಿಕ್ ವಿರುದ್ಧ ಯುಎಪಿಎ ಕಾಯ್ದೆ ಸೆಕ್ಷನ್ 16 (ಭಯೋತ್ಪಾದನೆ), 17 (ಭಯೋತ್ಪಾದನೆಗೆ ನಿಧಿ ಸಂಗ್ರಹ), 18 (ಭಯೋತ್ಪಾದಕ ಕೃತ್ಯಕ್ಕೆ ಸಂಚು) ಹಾಗೂ 20 (ಭಯೋತ್ಪಾದಕ ಸಂಘಟನೆಯ ಸದಸ್ಯನಾಗಿರುವುದು), ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯ ಸೆಕ್ಷನ್ 120-ಬಿ (ಅಪರಾಧ ಸಂಚು) ಮತ್ತು ಭಾರತೀಯ ದಂಡಸಂಹಿತೆಯ 124-ಎ (ದೇಶದ್ರೋಹ) ಪ್ರಕರಣಗಳನ್ನು ದಾಖಲಿಸಲಾಗಿತ್ತು.

ಮತ್ತಷ್ಟು ಸುದ್ದಿಗಳು

vertical

Latest News

ಅವಧಿಗೂ ಮುನ್ನವೇ ಖೈದಿಗಳ ಬಿಡುಗಡೆ : ಕೇಂದ್ರ

newsics.com ನವದೆಹಲಿ: ಸ್ವಾತಂತ್ರ್ಯ ಅಮೃತಮಹೋತ್ಸವದ ಅಂಗವಾಗಿ 50 ವರ್ಷ ಮೇಲ್ಪಟ್ಟ ಮಹಿಳಾ ಖೈದಿ, ತೃತೀಯ ಲಿಂಗಿ, 60 ವರ್ಷ ಮೇಲ್ಪಟ್ಟ ಪುರುಷ ಮತ್ತು ಅಂಗವಿಕಲ ಖೈದಿಗಳನ್ನೂ ಸೆರೆವಾಸದಿಂದ...

ಸಾವಿರ ಕೋಟಿಯ ಗುರೂಜಿ ದಾರುಣ ಅಂತ್ಯ

newsics.com ಹುಬ್ಬಳ್ಳಿ; ವಾಸ್ತು ಶಾಸ್ತ್ರ  ಹೇಳುವ ಮೂಲಕ ಕರ್ನಾಟಕ ಮಾತ್ರವಲ್ಲದೆ ಇಡೀ ದೇಶಾದ್ಯಂತ ಚಿರಪರಿಚಿತರಾಗಿದ್ದ ಸರಳ ವಾಸ್ತು ಚಂದ್ರಶೇಖರ್ ಗುರೂಜಿ ಅವರನ್ನು ಇಂದು (ಜು.5) ಹುಬ್ಬಳ್ಳಿಯ ಖಾಸಗಿ ಹೋಟೆಲ್ ನಲ್ಲಿ ಬರ್ಬರವಾಗಿ ಕೊಲೆ ಮಾಡಲಾಗಿದೆ. ಆಸ್ತಿ...

ದಿಢೀರ್ ಶಬ್ದದಿಂದ ಭೂಮಿ ಸೀಳು, ಭಯಭೀತರಾದ ಶಿವಮೊಗ್ಗ ಮಂದಿ

newsics.com ಶಿವಮೊಗ್ಗ: ದಿಢೀರ್ ಶಬ್ದದಿಂದ ಭೂಮಿ ಸೀಳಾಗಿರುವ ಘಟನೆ ಸಾಗರದ ನೆಹರು ನಗರದಲ್ಲಿ ನಡೆದಿದೆ. ಒಮ್ಮೆಲೆ ಬಂದ ಶಬ್ದಕ್ಕೆ ನೆಹರು ನಗರದ ನಿವಾಸಿಗಳು ಭಯಭೀತರಾಗಿ ಹೊರಗೆ ಬಂದು ನೋಡಿದರೆ, ಭೂಮಿ ಸೀಳಾಗಿರುವುದು ಕಂಡು ಬಂದಿದೆ. ಭೂಮಿಯಿಂದ...
- Advertisement -
error: Content is protected !!