newsics.com
ಹೊಸಪೇಟೆ (ವಿಜಯನಗರ): ಇಲ್ಲಿನ ರಾಣಿಪೇಟೆಯಲ್ಲಿನ ಸಚಿವ ಆನಂದ್ ಸಿಂಗ್ ಅವರ ಕಚೇರಿಯನ್ನು ಮಂಗಳವಾರ ರಾತ್ರಿ ದಿಢೀರ್ ಬಂದ್ ಮಾಡಿ, ಅದರ ನಾಮಫಲಕ ತೆರವುಗೊಳಿಸಲಾಗಿದೆ.
ನಾಳೆಯಿಂದ(ಆ.11) ಕಚೇರಿಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸದಿರಲು ನಿರ್ಧರಿಸಲಾಗಿದೆ ಎಂದು ಗೊತ್ತಾಗಿದೆ.
ಕಚೇರಿ ಬಂದ್ ಮಾಡಿರುವ ಕುರಿತು ಪ್ರತಿಕ್ರಿಯಿಸಿದ ಸಚಿವ ಆನಂದ್ ಸಿಂಗ್, ಈ ಬಗ್ಗೆ ನಾನೇನೂ ಪ್ರತಿಕ್ರಿಯಿಸಲಾರೆ. ಏನು ಹೇಳಬೇಕಿತ್ತೋ ಅದನ್ನು ಮುಖ್ಯಮಂತ್ರಿಯವರಿಗೆ ಹೇಳಿರುವೆ ಎಂದಿದ್ದಾರೆ.
ಯಾವುದೇ ಕಾರಣಕ್ಕೂ ನನ್ನ ನಿಲುವಿನಿಂದ ಹಿಂದೆ ಸರಿಯಲಾರೆ. ಅಗತ್ಯಬಿದ್ದರೆ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುವೆ. ಮುಂದೇನಾಗುತ್ತೋ ನೋಡುತ್ತೇನೆ ಎಂದು ಆನಂದ್ ಸಿಂಗ್ ಹೇಳಿದ್ದಾರೆನ್ನಲಾಗಿದೆ. ಬೇಡಿಕೆ ಈಡೇರದಿದ್ದರೆ ಆ. 15ರಂದು ಧ್ವಜಾರೋಹಣವನ್ನೂ ಮಾಡದಿರಲು ತೀರ್ಮಾನಿಸಿದ್ದಾರೆ ಎಂದು ತಿಳಿದುಬಂದಿದೆ.
ಆನಂದ್ ಸಿಂಗ್ ಅವರಿಗೆ ಪ್ರವಾಸೋದ್ಯಮ ಮತ್ತು ಪರಿಸರ, ಜೀವಿಶಾಸ್ತ್ರ ಖಾತೆ ನೀಡಲಾಗಿದೆ. ಆದರೆ ಈ ಖಾತೆ ಬೇಡ ಎನ್ನುತ್ತಿರುವ ಆನಂದ್ ಸಿಂಗ್, ಬೇಡಿಕೆ ಈಡೇರುವವರೆಗೆ ಯಾವುದೇ ಕಾರಣಕ್ಕೂ ಖಾತೆಗಳ ಜವಾಬ್ದಾರಿ ವಹಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ.
ರಾಜ್ಯಗಳಿಗೆ ಓಬಿಸಿ ಪಟ್ಟಿ ಸೇರ್ಪಡೆ ಹೊಣೆ: ಲೋಕಸಭೆಯಲ್ಲಿ ಮಸೂದೆ ಅಂಗೀಕಾರ
https://newsics.com/entertainment/kareena-kapoor-khan-reveals-that-she-lost-her-sex-drive-during-her-pregnancy/80505/