ಮಂಗಳೂರು: ಬಿಜೆಪಿ ನಾಯಕ ಹಾಗೂ ದೇಶದ ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬವನ್ನು ಶಾಸಕ ಡಾ.ವೈ. ಭರತ್ ಶೆಟ್ಟಿ ವಿಭಿನ್ನವಾಗಿ ಆಚರಿಸಿದ್ದಾರೆ. ಇತ್ತೀಚಿಗಷ್ಟೇ ಕೊರೋನಾ ಸೋಂಕಿನಿಂದ ಚೇತರಿಸಿಕೊಂಡಿರುವ ಡಾ.ಭರತ್ ಶೆಟ್ಟಿ ಮೋದಿ ಜನ್ಮದಿನದ ಅಂಗವಾಗಿ ಫ್ಲಾಸ್ಮಾ ದಾನ ಮಾಡಿದ್ದಾರೆ.
ಮಂಗಳೂರಿನ ದೇರಳಕಟ್ಟೆಯಲ್ಲಿರುವ ಡಾ.ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ಫ್ಲಾಸ್ಮಾ ದಾನ ಮಾಡಿದರು. ಬುಧವಾರ ವೈದ್ಯಕೀಯ ತಪಾಸಣೆಗೆ ಒಳಗಾಗಿದ್ದ ಅವರು ಸ್ವಯಂ ಪ್ರೇರಣೆಯಿಂದ ಫ್ಲಾಸ್ಮಾ ದಾನಕ್ಕೆ ಒಪ್ಪಿಕೊಂಡು ಇಂದು ದಾನ ಮಾಡಿದ್ದಾರೆ.
ಪಕ್ಷ ಮೋದಿಯವರ ಹುಟ್ಟುಹಬ್ಬವನ್ನು ಸೇವಾ ಸಪ್ತಾಹವಾಗಿ ಆಚರಿಸುತ್ತಿದೆ. ಕೊವೀಡ್-19 ನಿಂದ ಚೇತರಿಸಿಕೊಂಡವರು ಫ್ಲಾಸ್ಮಾದಾನ ಮಾಡಿದರೇ ಉಳಿದ ರೋಗಿಗಳು ಬೇಗ ಚೇತರಿಸಿಕೊಳ್ಳಲು ನೆರವಾಗುತ್ತದೆ ಎಂಬುದು ನನಗೆ ಅರಿವಿದೆ. ಹೀಗಾಗಿ ದಾನ ಮಾಡಿದ್ದೇನೆ ಎಂದಿದ್ದಾರೆ.
ಪ್ಲಾಸ್ಮಾದಾನ ಮಾಡಿ ಮೋದಿ ಬರ್ತಡೇ ಆಚರಿಸಿದ ಶಾಸಕ
Follow Us