ಮಂಗಳೂರು: ಎಲ್ಲ ಭಾಷೆಗೂ ಮೊಬೈಲ್ ಆ್ಯಪ್ ನಲ್ಲಿ ಸ್ಥಾನ ಸಿಗುತ್ತಿರುವ ಹೊತ್ತಿನಲ್ಲಿಯೇ ಬ್ಯಾರಿ ಭಾಷೆಗೆ ಸ್ವತಂತ್ರ ಲಿಪಿ ರೂಪಿಸಿದ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ, ಬ್ಯಾರಿ ಲಿಪಿ ಬಳಕೆ ಉತ್ತೇಜಿಸುವ ನಿಟ್ಟಿನಲ್ಲಿ ಮೊಬೈಲ್ ಆ್ಯಪ್ ಸಿದ್ಧಪಡಿಸಲು ಮುಂದಾಗಿದೆ.
ಜಸ್ಟ್ ಕನ್ನಡ ಮಾದರಿಯಲ್ಲಿ ಈ ಆ್ಯಪ್ ಸಿದ್ಧಪಡಿಸಲಾಗುತ್ತಿದ್ದು, ಈ ಲಿಪಿ ಆ್ಯಪ್ ರೂಪದಲ್ಲಿ ಹೊರಬಂದರೇ ಹೆಚ್ಚು ಬಳಕೆಗೆ ಬರಲಿದೆ. ಆ ಮೂಲಕ ಭಾಷೆಯ ಬೆಳವಣಿಗೆಗೂ ಪೂರಕವಾಗಲಿದೆ ಅನ್ನೋದು ಅಕಾಡೆಮಿಯ ಚಿಂತನೆ .
ಇನ್ನು ಒಂದು ತಿಂಗಳಿನಲ್ಲಿ ಈ ಅ್ಯಪ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಾಗಲಿದ್ದು, ಇನ್ ಸ್ಟಾಲ್ ಮಾಡಿಕೊಳ್ಳುವ ಮೂಲಕ ನೀವು ಮೊಬೈಲ್ ಸಂವಹನಕ್ಕೂ ಬ್ಯಾರಿ ಭಾಷೆ ಬಳಸಬಹುದಾಗಿದೆ.
ಬ್ಯಾರಿ ಲಿಪಿಯ ವರ್ಣಮಾಲೆ,ಪದಗಳ ಜೋಡಣೆ, ಶಬ್ದಗಳ ಭಾಷಾಂತರ ಸೇರಿದಂತೆ ಭಾಷೆ ಕಲಿಕೆಯ ಎಲ್ಲ ಹಂತಗಳನ್ನು ಈ ಆ್ಯಪ್ ಒಳಗೊಂಡಿದೆ.
ಬಳಕೆದಾರರ ಅನುಕೂಲಕ್ಕಾಗಿ ಕನ್ನಡ ಮತ್ತು ಇಂಗ್ಲೀಷ್ ನಲ್ಲಿ ಬರೆದ ವಾಕ್ಯಗಳುಬ್ಯಾರಿ ಲಿಪಿಗೆ ಟ್ರಾನ್ಲೆಟ್ ಆಗುವಂತೆ ಇದನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ.
ಬ್ಯಾರಿ ಅಕಾಡೆಮಿಯು ಭಾಷೆಯ ಅಭಿವೃದ್ಧಿಗಾಗಿ ಈ ಆ್ಯಪ್ ತಯಾರಿಕೆ ಮಾತ್ರವಲ್ಲದೇ ೨೦೨೧ ಕ್ಯಾಲೆಂಡರ್ ಬ್ಯಾರಿ ಭಾಷೆಯಲ್ಲಿ ಸಿದ್ಧಪಡಿಸುವುದು,ಬ್ಯಾರಿ ಭಾಷೆಯಲ್ಲಿ ಪದ,ವಾಕ್ಯಗಳ ರಚನೆಯ ವಿಡಿಯೋ ಸಿದ್ಧಪಡಿಸಿ ಅದನ್ನು ಯೂ ಟ್ಯೂಬ್ ಗೆ ಅಪ್ಲೋಡ್ ಮಾಡೋದು ಹೀಗೆ ಹಲವಾರು ಪ್ರಯತ್ನ ನಡೆದಿದೆ ಎಂದು ಬ್ಯಾರಿ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ್ ಹೇಳಿದ್ದಾರೆ.
ಬ್ಯಾರಿ ಭಾಷೆ ಕಲಿಕೆಗೆ ಬರಲಿದೆ ಮೊಬೈಲ್ ಆ್ಯಪ್
Follow Us