Saturday, April 17, 2021

ಮೋದಿ ಜೀವನ ಚರಿತ್ರೆ ಲೋಕಾರ್ಪಣೆ; ಕನ್ನಡ ಸೇರಿ 20 ಭಾಷೆಗಳಲ್ಲಿ ಲಭ್ಯ

ನವದೆಹಲಿ: ಪ್ರಧಾನಿ ನರೇಂದ್ರ‌ಮೋದಿ ನೇತೃತ್ವದ ಸರ್ಕಾರದ ವಾರ್ಷೀಕೋತ್ಸವದ ಹೊತ್ತಿನಲ್ಲೇ ಪ್ರಧಾನಿ ನರೇಂದ್ರ ಮೋದಿಯವರ ಜೀವನಚರಿತ್ರೆ ಲೋಕಾರ್ಪಣೆಗೊಂಡಿದೆ.
ಆರು ವರ್ಷಗಳ ಕಾಲ ಪ್ರಧಾನಿಯಾಗಿ ಮೋದಿಯವರ ಆಡಳಿತ ವೈಖರಿ, ಭಾರತಕ್ಕಾಗಿ ಮೋದಿಯವರು ಕೈಗೊಂಡ ನಿರ್ಣಯಗಳು, ಅವರ ಬಾಲ್ಯ, ವಿಧ್ಯಾಭ್ಯಾಸ, ಕುತೂಹಲಕರ ಅಂಕಿ-ಅಂಶ, ಅಪರೂಪದ ಭಾವಚಿತ್ರ ಹೀಗೆ ಮೋದಿಯವರ ಕುರಿತಾಗಿನ ನಾನಾ ವೈವಿಧ್ಯಮಯ ಸಂಗತಿಯನ್ನು ಈ ಪುಸ್ತಕ ದಾಖಲಿಸಿದೆ.
ಲಾಕ್ಡೌನ್ ಹಿನ್ನೆಲೆಯಲ್ಲಿ ಪುಸ್ತಕ ಬಿಡುಗಡೆ ಸಮಾರಂಭವನ್ನು ಅಂತರ್ಜಾಲದಲ್ಲಿ ಪ್ರಸಾರ ಮಾಡಲಾಗಿದ್ದು, ಜೀವನಚರಿತ್ರೆಯನ್ನು ನಿವೃತ್ತ ಮುಖ್ಯ ನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್ ಲೋಕಾರ್ಪಣೆಗೊಳಿಸಿದರು.
ಭಾರತದ ಬಾರ್ ಅಸೋಸಿಯೇಷನ್ಸ್ ಮುಖ್ಯಸ್ಥ ಆದೀಶ್ ಸಿ ಅಗರ್ವಾಲ್, ಅಮೆರಿಕದ ಕವಿ ಸಾಹಿತಿ, ಎಲಿಸಬೇತ ಹೊರನ್ ಈ ಕೃತಿ ರಚಿಸಿದ್ದಾರೆ.
Narendra Modi-Harbinger of Prosperity & Apostle of World Peace ಪುಸ್ತಕ ಹಾರ್ಡ್ ಕವರ್ ಮತ್ತು ಇ ಬುಕ್ ಮಾದರಿಯಲ್ಲಿ ಲಭ್ಯವಿದ್ದು, ಇಂಗ್ಲೀಷ್, ಅರೇಬಿಕ್, ಡಚ್, ರಷ್ಯನ್, ಜಪಾನೀಸ್, ಸ್ಪ್ಯಾನಿಷ್, ಮ್ಯಾಂಡರೀನ್ ನಂತಹ ವಿದೇಶಿ ಭಾಷೆಗಳ ಜತೆ, ಹಿಂದಿ, ಅಸ್ಸಾಮಿ, ಗುಜರಾತಿ, ತಮಿಳು, ತೆಲುಗು, ಉರ್ದು, ಕನ್ನಡ, ಮರಾಠಿಯಂತಹ ಭಾರತೀಯ ಭಾಷೆಗಳಲ್ಲೂ ಪುಸ್ತಕ ಲಭ್ಯವಿದೆ.

ಮತ್ತಷ್ಟು ಸುದ್ದಿಗಳು

Latest News

ಕುಂಭಮೇಳದ ಪ್ರಧಾನ ಸಾಧು ಕೊರೋನಾಗೆ ಬಲಿ

newsics.com ಹರಿದ್ವಾರ: ಕುಂಭಮೇಳದಲ್ಲಿ ಪಾಲ್ಗೊಂಡಿದ್ದ ಪ್ರಧಾನ ಸಾಧು ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. 65 ವರ್ಷದ ಸಾಧು ಈ ವಾರದ ಆರಂಭದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದು, ಕೊರೋನಾ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ. ಕುಂಭಮೇಳಕ್ಕೆ ಮಧ್ಯಪ್ರದೇಶದಿಂದ...

ಬೆಂಗಳೂರು ವಿವಿ ಪರೀಕ್ಷೆಗಳು‌ ಮುಂದೂಡಿಕೆ

newsics.com ಬೆಂಗಳೂರು: ಕೊರೋನಾ ಅಬ್ಬರ ಹಾಗೂ ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಪರೀಕ್ಷೆಗಳನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಶೀಘ್ರದಲ್ಲೇ ಮುಂದಿನ ದಿನಾಂಕಗಳನ್ನು ಪ್ರಕಟಿಸುವುದಾಗಿ ತಿಳಿಸಿದೆ. ಏ.19, 20, 21ರಂದು ನಡೆಯಬೇಕಿದ್ದ ಬೆಂಗಳೂರು ವಿಶ್ವವಿದ್ಯಾಲಯದ ಪರೀಕ್ಷೆಗಳನ್ನು ಮುಂದೂಡಲಾಗಿದೆ...

ಪಂಜಾಬ್ ವಿರುದ್ಧ ಚೆನ್ನೈಗೆ ಸುಲಭದ ಗೆಲುವು

newsics.com ಮುಂಬೈ: ಐಪಿಎಲ್ 2021ರ ಆವೃತ್ತಿಯ 8ನೇ ಪಂದ್ಯದಲ್ಲಿ ಚೆನ್ನೈ ಬೌಲರ್ಗಳ ದಾಳಿಗೆ ನಲುಗಿದ ಪಂಜಾಬ್ ಕಿಂಗ್ಸ್ ಹೀನಾಯ ಸೋಲು ಅನುಭವಿಸಿತು. ಪಂದ್ಯದಲ್ಲಿ ಚೆನ್ನೈ ತಂಡ 6 ವಿಕೆಟ್ ಗೆಲುವು ಗಳಿಸಿದೆ. 106 ರನ್ಗಳ...
- Advertisement -
error: Content is protected !!