newsics.com
ಮೈಸೂರು: ಯೋಗದಿನಾಚರಣೆ ಕಾರ್ಯಕ್ರಮಕ್ಕಾಗಿ ಬೆಳಗ್ಗೆ 6.30ಕ್ಕೆ ಪ್ರಧಾನಿ ಮೋದಿಯವರು ಅರಮನೆ ಅಂಗಳಕ್ಕೆ ಆಗಮಿಸಿದ್ದಾರೆ. ಸುಮಾರು 7ರಿಂದ 7.45ರವರೆಗೆ ಯೋಗ ಪ್ರದರ್ಶನದಲ್ಲಿ ಭಾಗವಹಿಸಲಿದ್ದು, ನಂತರ ದೊಡ್ಡಕೆರೆ ಮೈದಾನದಲ್ಲಿ ನಡೆಯುವ ಯೋಗ ವಸ್ತು ಪ್ರದರ್ಶನಕ್ಕೆ ಅವರು ಭೇಟಿನೀಡಲಿದ್ದಾರೆ.
ಅರಮನೆ ಆವರಣ ತಲುಪಿದ ಮೋದಿಯವರನ್ನು ರಾಜಮಾತೆ ಪ್ರಮೋದಾ ದೇವಿ ಹಾಗೂ ಮಹಾರಾಜ ಯದುವೀರ್ ಒಡೆಯರ್ ಸ್ವಾಗತಿಸಿದರು.
ಮೋದಿ ನೇತೃತ್ವದಲ್ಲಿ ಯೋಗ ಕಾರ್ಯಕ್ರಮ ಆರಂಭವಾಗಿದ್ದು, ಬರೋಬ್ಬರಿ 15 ಸಾವಿರ ಮಂದಿ ಭಾಗಿಯಾಗಿದ್ದಾರೆ.
ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ ಸೇರಿ ಅನೇಕ ಗಣ್ಯರು ಮೋದಿಗೆ ಸಾಥ್ ನೀಡಿದ್ದಾರೆ.
16 ವರ್ಷದ ಮುಸ್ಲಿಂ ಬಾಲಕಿಗೆ ಸಂಗಾತಿ ಆಯ್ಕೆ ಮಾಡುವ ಸ್ವಾತಂತ್ರ್ಯವಿದೆ : ಹೈಕೋರ್ಟ್