Tuesday, July 5, 2022

ಮೈಸೂರಲ್ಲೂ‌ ಕನ್ನಡ ಮಾತಾಡಿದ ಮೋದಿ, ಜನಸೇವೆಗೆ ಅವಕಾಶ ಕೇಳಿದ ಪ್ರಧಾನಿ

Follow Us

newsics.com

ಮೈಸೂರು: ಸಿಲಿಕಾನ್ ಸಿಟಿಯಲ್ಲಿ ಕನ್ನಡದಲ್ಲೇ ಮಾತು ಆರಂಭಿಸಿದ್ದ ಮೋದಿ ಸಾಂಸ್ಕೃತಿಕ ನಗರಿಯಲ್ಲೂ ಕನ್ನಡದಲ್ಲೇ ಮಾತಿಗಿಳಿದರು.

ಪ್ರೋಟೋಕಾಲ್ ಮರೆತು ನಮಸ್ಕರಿಸಲು‌ ಬಂದ ಬಿಜೆಪಿ ನಾಯಕರ ವರ್ತನೆಯಿಂದ‌ ಮೈಸೂರಿಗೆ ಹೊರಡುವ ಮುನ್ನ ಬೆಂಗಳೂರಲ್ಲಿ ಬೇಸರಗೊಂಡಿದ್ದ‌ ಮೋದಿ, ಮೈಸೂರಿನ ಸಂವಾದ ಕಾರ್ಯಕ್ರಮದಲ್ಲಿ ಖುಷಿ ಖುಷಿಯಾಗಿಯೇ ಪಾಲ್ಗೊಂಡರು.

ತಮ್ಮ ಭಾಷಣಕ್ಕೂ ಮುನ್ನ ವೇದಿಕೆಯಲ್ಲಿ ಪ್ರಧಾನಿ ಮೋದಿ ಪ್ರೀತಿಯಿಂದ ಶಾಸಕ ರಾಮದಾಸ್ ಅವರ ಬೆನ್ನಿಗೆ ಗುದ್ದಿ ಮಾತನಾಡಿಸಿದ್ದು ಹಲವರ ಗಮನ ಸೆಳೆಯಿತು. ಈ‌ ವಿಚಾರವಾಗಿ ಶಾದಕ ರಾಮದಾಸ್ ಭಾವುಕರಾಗಿದ್ದು ಕಂಡುಬಂತು.

ನಂತರ ಹದಿನೈದು ನಿಮಿಷಕ್ಕೂ ಹೆಚ್ಚು ಕಾಲ ಮಾತನಾಡಿದ ಮೋದಿ, ಕರ್ನಾಟಕದ ಬಡವರಿಗೆ ಸೂರು ಕಲ್ಪಿಸಿದ್ದೇವೆ, ಕುಡಿಯಲು ಶುದ್ಧ ನೀರು ಕೊಟ್ಟಿದ್ದೇವೆ. ನಿಮ್ಮ ಸೇವೆ ಮಾಡಲು ನನಗೆ ಸದಾ ಆಶೀರ್ವಾದ ಮಾಡಿ ಎಂದು ಮನವಿ‌ ಮಾಡಿದರು.

ಇದಕ್ಕೂ ಮೊದಲು ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಕೇಂದ್ರ ಸರ್ಕಾರಿ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು. ಕನ್ನಡದಲ್ಲೇ ಮಾತು ಪ್ರಾರಂಭಿಸಿದ ಮೋದಿ, ಮೈಸೂರು ಹಾಗೂ ಕರ್ನಾಟಕದ ಜನರಿಗೆ ನನ್ನ ಪ್ರೀತಿಯ ನಮಸ್ಕಾರಗಳು, ಫಲಾನುಭವಿಗಳ ಜೊತೆ ಸಂವಾದಕ್ಕಾಗಿ ನಾನು ಇಲ್ಲಿಗೆ ಬಂದಿದ್ದೇನೆ ಎಂದು ಹೇಳಿದರು.

ಕಳೆದ 75 ವರ್ಷದಲ್ಲಿ ಅನೇಕ ಸರ್ಕಾರಗಳು ದೇಶ, ರಾಜ್ಯದಲ್ಲಿ ಬಂದು ಹೋದವು. ಎಲ್ಲರೂ ಬಡವರು, ದಲಿತರು, ಮಹಿಳೆಯರ ಕಲ್ಯಾಣದ ಬಗ್ಗೆ ಮಾತನಾಡಿದ್ದರು. ಆದರೆ ಯಾರ ಕಲ್ಯಾಣವೂ ಆಗಲಿಲ್ಲ. ನಮ್ಮ ಸರ್ಕಾರ ಜನರ ಕಲ್ಯಾಣಕ್ಕಾಗಿ ಬದ್ಧವಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.

ಆಯುಷ್ಮಾನ್ ಭಾರತದ ಲಾಭ ಇಡೀ ದೇಶಕ್ಕೆ ತಲುಪಿದೆ. ಪಡಿತರ ವಿತರಣೆ, ಆರೋಗ್ಯ ಸಮೃದ್ಧಿ ನಿಟ್ಟಿನಲ್ಲಿ ಬಹುದೊಡ್ಡ ಸಾಧನೆ ಮಾಡಿದ್ದೇವೆ. ಬಡವರಲ್ಲಿ ಆತ್ಮವಿಶ್ವಾಸ ತುಂಬಿದ್ದೇವೆ. ರೈತರ ಕಲ್ಯಾಣಕ್ಕಾಗಿ ಮಹತ್ವಪೂರ್ಣ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. 8 ವರ್ಷದ ಆಡಳಿತದಲ್ಲಿ ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಿದ್ದೇವೆ ಎಂದು ಹೇಳಿದರು.

ಹಿಂದಿನ ಸರ್ಕಾರಗಳು 10 ವರ್ಷಗಳಲ್ಲಿ ಕರ್ನಾಟಕದ ರೈಲ್ವೆಯ 60 ಕಿ.ಮೀ ವಿದ್ಯುದೀಕರಣ ಮಾಡಿಸಿದ್ದವು. ಆದರೆ ನಾವು ಬಂದ 8 ವರ್ಷದಲ್ಲಿ 600 ಕಿ.ಮೀ ರೈಲ್ವೆ ವಿದ್ಯುದೀಕರಣವಾಗಿದೆ ಎಂದು ಸರ್ಕಾರದ ಸಾಧನೆಯನ್ನು ಮೋದಿ ವಿವರಿಸಿದರು.

ಮತ್ತಷ್ಟು ಸುದ್ದಿಗಳು

vertical

Latest News

ಭಾರೀ ಮಳೆಗೆ ಸಾರಡ್ಕದಲ್ಲಿ ಗುಡ್ಡ ಕುಸಿತ: ಕರ್ನಾಟಕ ಕೇರಳ ಸಂಚಾರ ಕ್ಕೆ ಅಡ್ಡಿ

newsics.com ಮಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಮುಂದುವರಿದಿದೆ. ಭಾರೀ ಮಳೆಯಿಂದ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಸಮೀಪದ ಸಾರಡ್ಕದಲ್ಲಿ ಗುಡ್ಡ  ಕುಸಿತ ಸಂಭವಿಸಿದೆ. ರಸ್ತೆಗೆ ಮಣ್ಣಿನ ರಾಶಿ...

ಪರಪ್ಪನ ಅಗ್ರಹಾರ ಜೈಲಿನ ಮುಖ್ಯ ಅಧಿಕಾರಿ ರಂಗನಾಥ್ ವರ್ಗಾ

newsics.com ಬೆಂಗಳೂರು: ಅಕ್ರಮಗಳ ಅಡ್ಡೆ ಎಂಬ ಕುಖ್ಯಾತಿಗೆ ಒಳಗಾಗಿರುವ ಪರಪ್ಪನ ಅಗ್ರಹಾರ ಜೈಲಿನ ಮುಖ್ಯ ಅಧಿಕಾರಿ ರಂಗನಾಥ್ ಅವರನ್ನು ವರ್ಗಾ ಮಾಡಲಾಗಿದೆ. ರಂಗನಾಥ್ ವಿರುದ್ಧ ಹಲವು ಆರೋಪಗಳು ಕೇಳಿ ಬಂದಿದ್ದವು. ಇದೀಗ ಕಲಬುರ್ಗಿ ಜೈಲಿಗೆ  ವರ್ಗಾಯಿಸಲಾಗಿದೆ. ಶಿವಮೊಗ್ಗದ...

ಸಿಎಂ ಕೇಜ್ರಿವಾಲ್ ನಿವಾಸದ ಮೇಲೆ ದಾಳಿ ಪ್ರಕರಣ: ಸಂಸದ ತೇಜಸ್ವಿ ಸೂರ್ಯ ವಿಚಾರಣೆ

newsics.com ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನಿವಾಸದ ಮೇಲೆ ದಾಳಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸತ್ ಸದಸ್ಯ ತೇಜಸ್ವಿ ಸೂರ್ಯ ಅವರನ್ನು ದೆಹಲಿ ಪೊಲೀಸರು ವಿಚಾರಣೆಗೆ ಗುರಿಪಡಿಸಿದ್ದಾರೆ. ದೆಹಲಿಯ ಅಶೋಕ್ ರಸ್ತೆಯಲ್ಲಿರುವ ಸಂಸದ ತೇಜಸ್ವಿ...
- Advertisement -
error: Content is protected !!