newsics.com
ನವದೆಹಲಿ/ಲಂಡನ್: ಭಾರತದಲ್ಲಿ ಕೊರೋನಾ ಪರಿಣಾಮಕಾರಿಯಾಗಿ ಹತೋಟಿಯಲ್ಲಿಡಲು ಪ್ರಧಾನಿ ನರೇಂದ್ರ ಮೋದಿ, ದೇಶದ ಜನತೆಗೆ ನೀಡಿದ ಪ್ರೇರಣೆ ಕಾರಣ ಎಂದು ಕೇಂಬ್ರಿಜ್ ವಿಶ್ವವಿದ್ಯಾನಿಲಯದ ಅಧ್ಯಯನ ವರದಿಯೊಂದು ಅಭಿಪ್ರಾಯ ವ್ಯಕ್ತಪಡಿಸಿದೆ.
ಕೊರೋನಾ ಲಾಕ್‌ಡೌನ್ ಹಾಗೂ ಸುರಕ್ಷಿತ ಅಂತರದ ಕುರಿತು ಸಾಮೂಹಿಕ ಪರಿಣಾಮ ಬೀರುವಲ್ಲಿ ಮೋದಿಯಯವರ ಪ್ರೇರಣೆ ಪ್ರಮುಖ ಪಾತ್ರ ವಹಿಸಿದೆಯೆಂದು ಅಧ್ಯಯನ ಹೇಳಿದೆ. ಕೊರೋನಾ ಸೋಂಕಿನ ಬಗ್ಗೆ ಜಾಗೃತಿ ಮೂಡಿಸಲು ಪ್ರಧಾನಿ ನರೇಂದ್ರ ಮೋದಿಯವರು ಆಗಾಗ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದುದು, ದೇಶದ 130 ಕೋಟಿ ಜನರನ್ನು ಕಟ್ಟುನಿಟ್ಟಿನ ಲಾಕ್‌ಡೌನ್ ಹಾಗೂ ಸುರಕ್ಷಿತ ಅಂತರದ ಕ್ರಮಗಳನ್ನು ಪಾಲಿಸುವಲ್ಲಿ ಜನರಿಗೆ ಪ್ರೇರಕವಾಯಿತು. ಕೊರೋನಾ ಸೋಂಕಿನ ಹಾವಳಿಯನ್ನು ಎದುರಿಸಲು ದೇಶದ ಸನ್ನದ್ಧತೆ, ಕಾರ್ಯಾಚರಣೆ ಹಾಗೂ ಕಾರ್ಯತಂತ್ರಗಳನ್ನು ರೂಪಿಸಲು ಮೋದಿ ಕ್ರಮ ನೆರವಾಯಿತು ಎಂದು ಅಧ್ಯಯನ ವಿವರಿಸಿದೆ.
ಡಿಜಿಟಲೀಕರಣದಿಂದ ಪಾಶ್ಚಾತ್ಯ ಜಗತ್ತಿನಲ್ಲಿ ಕೊರೋನಾ ನಿಯಂತ್ರಣ ಭಾರತಕ್ಕೆ ಹೋಲಿಸಿದರೆ ತುಂಬಾ ಸುಲಭವಾಗಿದೆ. ಆದರೆ ಭಾರತದಲ್ಲಿ ಡಿಜಿಟಲೀಕರಣ ಇನ್ನೂ ಶೈಶವಾಸ್ಥೆಯಲ್ಲಿದ್ದರೂ ಮೋದಿಯವರ ಪ್ರೇರಣೆ, ಅವರು ಕೈಗೊಂಡ ಕ್ರಮ ಕೊರೋನಾವನ್ನು ದಿಟ್ಟವಾಗಿ ಎದುರಿಸುವಲ್ಲಿ, ಕೊರೋನಾ ತೀವ್ರಗತಿಯಲ್ಲಿ ಹರಡದಂತೆ ತಡೆಯುವಲ್ಲಿ ಯಶಸ್ವಿಯಾಯಿತು ಎಂದು ಅಧ್ಯಯನದ ಸಹ ಲೇಖಕರಾದ ಹಾಗೂ ಕೇಂಬ್ರಿಜ್ ವಿವಿಯ ಸಹಾಯಕ ಪ್ರೊಫೆಸರ್ ರೋನಿಟಾ ಭೂಷಣ್ ಹೇಳಿದ್ದಾರೆ.
ಮೋದಿಯವರ ಸಾರ್ವಜನಿಕವಾಗಿ ನೀಡಿದ ಭರವಸೆದಾಯಕವಾದ ಭಾಷಣಗಳು, ವ್ಯಾಪಕವಾದ ಮಾಧ್ಯಮ ಪ್ರಚಾರಗಳು ಹಾಗೂ ಸಾರ್ವಜನಿಕ ಸುರಕ್ಷಿತ ವಲಯಗಳಲ್ಲಿ ಸಾಮೂಹಿಕ ಪರಿಣಾಮ ಬೀರಿತೆಂದು ಅಧ್ಯಯನದಲ್ಲಿ ಭಾಗಿಯಾಗಿದ್ದ ಮತ್ತೋರ್ವ ತಜ್ಞ ರಾಮಿತ್ ದೇಬ್‌ನಾಥ್ ಹೇಳಿದ್ದಾರೆ.
ಅಂತಾರಾಷ್ಟ್ರೀಯ ಕುಸ್ತಿಪಟುವಿಗೆ ಗಲ್ಲು
ಮೈಸೂರು ಮೃಗಾಲಯದಲ್ಲಿ ಚಿರತೆ ದತ್ತು ಸ್ವೀಕರಿಸಿದ ಕ್ರಿಕೆಟ್ ತಾರೆ
‘ಕುದಿಯುವ ಕಪ್ಪೆಯ ಸಿಂಡ್ರೋಮ್’ನಿಂದ ಹೊರಬನ್ನಿ