ಬೆಂಗಳೂರು: ಪ್ರತಿಭಟನಾನಿರತ ರೈತರೊಂದಿಗೆ ಸಿಎಂ ಬಿಎಸ್ವೈ ನಡೆಸಿದ್ದ ಸಂಧಾನ ಸಭೆ ವಿಫಲಗೊಂಡಿದ್ದು, ರೈತ ಸಂಘಟನೆಗಳು ಸೋಮವಾರ ಸೆ.28 ರಂದು ಕರ್ನಾಟಕ ಬಂದ್ ಗೆ ಕರೆ ನೀಡಿದೆ.
ಸರ್ಕಾರದ ಭೂ ಸುಧಾರಣಾ ಕಾಯಿದೆಯಲ್ಲಿ ತಿದ್ದುಪಡಿ ತರುವ ರೈತರ ಬೇಡಿಕೆಗೆ ಸಿಎಂ ಒಪ್ಪಲಿಲ್ಲ. ಆದರೆ ಜಮೀನು ಖರೀದಿ ಮೇಲೆ ಮಿತಿ ಹೇರುವ ನಿರ್ಣಯಮಾಡುವುದಾಗಿ ರೈತರಿಗೆ ಸಿಎಂ ಭರವಸೆ ನೀಡಿದರು.
ಆದರೆ ಇದಕ್ಕೆ ರೈತರು ಒಪ್ಪಲಿಲ್ಲ. ಹೀಗಾಗಿ ಸಭೆ ವಿಫಲಗೊಂಡಿದ್ದು, ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ರೈತರು ಹಾಗೂ ವಿವಿಧ ಸಂಘಟನೆಗಳು ಸೋಮವಾರ ಕರ್ನಾಟಕ ಬಂದ್ಗೆ ಕರೆ ನೀಡಿದೆ.
ಸಿಎಂ ಜೊತೆ ನಡೆದ ಸಭೆ ಬಳಿ ಮಾತನಾಡಿದ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್, ಯಡಿಯೂರಪ್ಪನವರು ಭೂಸುಧಾರಣಾ ಕಾಯಿದೆ ವಾಪಸ್ ಪಡೆಯುವ ನಮ್ಮ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಲಿಲ್ಲ. ಅವರು ಪ್ರಧಾನಿಯವರ ಮಾತು ಮೀರಲು ಸಿದ್ಧರಿಲ್ಲ. ಹೀಗಾಗಿ ನಾವು ಪ್ರತಿಭಟನೆಗೆ ಮುಂದಾಗಿದ್ದೇವೆ. ರೈತ ಬೆಳೆಯುವ ಬೆಳೆಯನ್ನು ತಿನ್ನುವ ಎಲ್ಲರೂ ನಮ್ಮ ಹೋರಾಟ ಬೆಂಬಲಿಸಬೇಕೆಂದು ಮನವಿ ಮಾಡುತ್ತೇವೆ ಎಂದಿದ್ದಾರೆ.
ರೈತರೊಂದಿಗೆ ಸಿಎಂ ಸಂಧಾನಸಭೆ ವಿಫಲ ಸೆ.28 ರಂದು ಕರ್ನಾಟಕ ಬಂದ್
Follow Us