ಪಾಟ್ನಾ: ಈ ಊರಲ್ಲಿ ಮದುವೆ ನಡೆಯಲ್ಲ, ಶ್ರಾದ್ಧವೂ ನಡೆಯಲ್ಲ, ಈ ಊರಿನ ಹೆಣ್ಣುಮಕ್ಕಳನ್ನು ಯಾರೂ ಮದುವೆಯಾಗಲ್ಲ. ಹೀಗಾಗಿ ಊರಿನ ಯುವತಿಯರೆಲ್ಲರೂ ಕನ್ಯೆಯರೇ.
ಬಿಹಾರದಿಂದ 75 ಕಿ.ಮೀ ದೂರದಲ್ಲಿರುವ ಪಾಟ್ನಾದ ಭೋಜ್‌ಪುರ ಹಳ್ಳಿಯ ಕಥೆ ಇದು. ಈ ಊರಿನಲ್ಲಿರುವ ಮಂಗಗಳ ಕಾಟದಿಂದಾಗಿ ಇಲ್ಲಿರುವ ಯಾವುದೇ ಹೆಣ್ಣುಮಕ್ಕಳಿಗೂ ಮದುವೆಯಾಗುತ್ತಿಲ್ಲ.
ರತನ್‌ಪುರ ಎಂಬ ಹಳ್ಳಿಯಲ್ಲಿ ಕೋತಿಗಳು ಉಗ್ರರಂತೆ ಕಾಟ ಕೊಡುತ್ತಿವೆ. ಒಂದೊಮ್ಮೆ ಅಲ್ಲಿ ಮದುವೆ ಕಾರ್ಯ ನಡೆಯಿತು ಎಂತಾದರೆ ಅಲ್ಲಿಗೆ ಬಂದಿದ್ದ ಜನರ ಪರಿಸ್ಥಿತಿಯನ್ನು ಊಹಿಸಲೂ ಸಾಧ್ಯವಿಲ್ಲ. ಮೈಮೇಲೆ ಬಿದ್ದು ಮುಖವನ್ನು ಪರಚಿ, ಅಲ್ಲಿರುವ ವಸ್ತುಗಳನ್ನು ಚೆಲ್ಲಾಪಿಲ್ಲಿಯಾಗಿಸಿ ಮದುವೆ ನಿಲ್ಲಿಸುತ್ತವೆ.
ಒಮ್ಮೆ ಮದುಮಗಳನ್ನು ಕೂರಿಸಿಕೊಂಡು ಮೆರವಣಿಗೆ ಮಾಡಲಾಗುತ್ತಿತ್ತು. ಮೆರವಣಿಗೆಯಲ್ಲಿ ನೂರಾರು ಮಂದಿ ಪಾಲ್ಗೊಂಡಿದ್ದರು. ಅಲ್ಲಿಗೆ ಬಂದ ಕೋತಿಗಳು ಮೆರವಣಿಗೆಯಲ್ಲಿದ್ದ ಹಲವರನ್ನು ಕೊಂದು ಹಾಕಿದ್ದವು. ಕೇವಲ ಮದುವೆ ಮಾತ್ರವಲ್ಲ, ಹುಟ್ಟುಹಬ್ಬ, ಶ್ರಾದ್ಧವನ್ನು ಕೂಡ ಆಚರಣೆ ಮಾಡುವುದಿಲ್ಲ. ಹಲವು ವರ್ಷಗಳಿಂದ ಇದೇ ಪರಿಸ್ಥಿತಿ ಮುಂದುವರೆದಿದೆ.
ಕೋತಿಗಳ ಕಾಟದಿಂದ ಯುವತಿಯರಿಗಿಲ್ಲ ಮದುವೆ ಭಾಗ್ಯ!
Follow Us