Wednesday, November 29, 2023

ಮುಂಗಾರು ಅಧಿವೇಶನ ಇಂದಿನಿಂದ; ಹಲವು ಪ್ರಥಮಗಳಿಗೆ ಸಾಕ್ಷಿ

Follow Us

newsics.com
ನವದೆಹಲಿ: ಕೊರೋನಾ ಆತಂಕದ ನಡುವೆಯೇ 18 ದಿನ ನಡೆಯಲಿರುವ ಸಂಸತ್‌ನ ಮುಂಗಾರು ಅಧಿವೇಶನ ಸೋಮವಾರ (ಸೆ.14) ಆರಂಭವಾಗಲಿದ್ದು, ಹಲವು ಪ್ರಥಮಗಳಿಗೆ ಸಾಕ್ಷಿಯಾಗಲಿದೆ.
ಇದೇ ಮೊದಲ ಬಾರಿ ಲೋಕಸಭೆ ಹಾಗೂ ರಾಜ್ಯಸಭೆ ಅಧಿವೇಶನ ಯಾವುದೇ ಬಿಡುವಿಲ್ಲದೆ ಸೆಪ್ಟೆಂಬರ್ 14ರಿಂದ ಅಕ್ಟೋಬರ್ 1ರವರೆಗೆ ನಡೆಯಲಿದೆ. ಕೋವಿಡ್-19 ನೆಗೆಟಿವ್ ಪರೀಕ್ಷಾ ವರದಿಯಿರುವ ಸಂಸದರಿಗೆ ಹಾಗೂ ಸಿಬ್ಬಂದಿಗೆ ಮಾತ್ರವೇ ಸಂಸತ್ ಭವನ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ. ಮಾಸ್ಕ್ ಧಾರಣೆಯನ್ನು ಕಡ್ಡಾಯಗೊಳಿಸಲಾಗಿದೆ.
ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳುವ ಉದ್ದೇಶದಿಂದ ಉಭಯ ಸದನಗಳಲ್ಲಿಯೂ ಸಂಸದರ ಆಸನ ವ್ಯವಸ್ಥೆಯಲ್ಲಿ ವಿಶೇಷ ಮಾರ್ಪಾಡು ಮಾಡಲಾಗಿದೆ. ಪ್ರಶ್ನೋತ್ತರ ಕಲಾಪವನ್ನು ರದ್ದುಪಡಿಸಲಾಗಿದೆ. ಸಂಸತ್‌ನ ಮುಂಗಾರು ಅಧಿವೇಶನಕ್ಕೆ ಮುನ್ನ ಸರ್ವಪಕ್ಷ ಸಭೆಯನ್ನು ಈ ಬಾರಿ ನಡೆಸಲಾಗಿಲ್ಲ.

ಭಾರತದಲ್ಲಿ ಕೊರೋನಾ ತಡೆಗೆ ಮೋದಿ ಪ್ರೇರಣೆ- ಕೇಂಬ್ರಿಜ್ ವಿವಿ ಅಭಿಪ್ರಾಯ

ಮೋದಿ ಸರ್ಕಾರ ಈ ಬಾರಿಯ ಮುಂಗಾರು ಅಧಿವೇಶನದಲ್ಲಿ ಮಂಡಿಸಲು ಹೊರಟಿರುವ 11 ಮಸೂದೆಗಳ ಪೈಕಿ ನಾಲ್ಕನ್ನು ಬಲವಾಗಿ ವಿರೋಧಿಸಲು ಕಾಂಗ್ರೆಸ್ ನಿರ್ಧರಿಸಿದೆ. ಕೃಷಿಗೆ ಸಂಬಂಧಿಸಿದ ಅವಶ್ಯಕ ಸಾಮಗ್ರಿಗಳ ತಿದ್ದುಪಡಿ ಕಾಯ್ದೆ, ರೈತರ (ಸಶಕ್ತೀಕರಣ ಹಾಗೂ ರಕ್ಷಣೆ) ಉತ್ಪನ್ನಗಳ ಬೆಲೆ ಖಾತರಿ ಒಪ್ಪಂದ ಹಾಗೂ ಕೃಷಿ ಸೇವೆಗಳ ಅಧ್ಯಾದೇಶ, ಬ್ಯಾಂಕಿಂಗ್ ನಿಯಂತ್ರಣ ತಿದ್ದುಪಡಿ ಮಸೂದೆಯನ್ನು ಕಾಂಗ್ರೆಸ್ ಬಲವಾಗಿ ವಿರೋಧಿಸಲಿದೆ.
ಈ ಮಧ್ಯೆ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಅವರ ಪುತ್ರ ರಾಹುಲ್‌ ಗಾಂಧಿ ಸೇರಿ ಹಲವು ಸಂಸದರು ಮುಂಗಾರು ಅಧಿವೇಶನಕ್ಕೆ ಗೈರು ಹಾಜರಾಗಲಿದ್ದಾರೆ.

ತಮಿಳುನಾಡಿಗೆ NEET ಬೇಡ- ಡಿಎಂಕೆ

ದೇಶದೆಲ್ಲೆಡೆ‌ ಕಂಗನಾ ಹವಾ; ಝಾನ್ಸಿ ರಾಣಿ ಸಪೋರ್ಟ್’ಗೆ ಬಂತು ಸೀರೆ…!

ದೆಹಲಿ ಸಿಎಎ ಗಲಭೆ; ಉಮರ್ ಖಾಲಿದ್ ಬಂಧನ

ಸ್ವಪ್ನಾ ಸುರೇಶ್ ಗೆ ಎದೆನೋವು, ಆಸ್ಪತ್ರೆಗೆ ದಾಖಲು

ಮತ್ತಷ್ಟು ಸುದ್ದಿಗಳು

vertical

Latest News

ಮೈಸೂರು ವಿವಿ ಪ್ರೊಫೆಸರ್ ವಿರುದ್ಧ ಪಿಎಚ್ಡಿ ವಿದ್ಯಾರ್ಥಿನಿಯಿಂದ ಪೊಲೀಸರಿಗೆ ದೂರು: FIR ದಾಖಲು

newsics.com ಮೈಸೂರು: ಮೈಸೂರು ವಿಶ್ವವಿದ್ಯಾಲಯದ ಪ್ರೊಫೆಸರ್ ಶುಭ ಗೋಪಾಲ್ ವಿರುದ್ಧ ಪಿಎಚ್.ಡಿ. ವಿದ್ಯಾರ್ಥಿನಿಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ. ಮೈಸೂರು ವಿವಿಯ ಮೈಕ್ರೋ ಬಯಾಲಜಿ ವಿಭಾಗದ ಪ್ರೊ.ಶುಭ ಗೋಪಾಲ್ ವಿರುದ್ಧ...

ಮುಂದಿನ ವರ್ಷದಿಂದ 500 ರಿಂದ 600 ಕರ್ನಾಟಕ ಪಬ್ಲಿಕ್ ಸ್ಕೂಲ್ ಆರಂಭ: ಮಧು ಬಂಗಾರಪ್ಪ

newsics.com ಹಾಸನ: ಮುಂದಿನ ಶೈಕ್ಷಣಿಕ ವರ್ಷದಲ್ಲಿ 500 ರಿಂದ 600 ಪಬ್ಲಿಕ್ ಶಾಲೆಗಳನ್ನು ಸ್ಥಾಪನೆ ಮಾಡಲಾಗುವುದು. ಚುನಾವಣೆ ಸಂದರ್ಭದಲ್ಲಿ ನೀಡಿದ 5 ಗ್ಯಾರಂಟಿಗಳನ್ನು ಈಡೇರಿಸಿದ್ದು, ಶಾಲೆಗಳ ಅಭಿವೃದ್ಧಿಗೂ ಹಾಗೂ ಗ್ಯಾರಂಟಿಗೂ ಯಾವ ಸಂಬಂಧವಿಲ್ಲ ಎಂದು...

2024ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿ ಬಿಡುಗಡೆ

newsics.com ಬೆಂಗಳೂರು: 2024ಕ್ಕೆ ಮುಂಜೂರಾದ ಸಾರ್ವತ್ರಿಕ ರಜೆಗಳ ಪಟ್ಟಿಯನ್ನು ಕರ್ನಾಟಕ ಸರ್ಕಾರವು ಬಿಡುಗಡೆ ಮಾಡಿದೆ. ಎಲ್ಲಾ ಎರಡನೇ ಶನಿವಾರ, ನಾಲ್ಕನೇ ಶನಿವಾರ ಮತ್ತು ಭಾನುವಾರಗಳು ಸೇರಿದಂತೆ ಸಾರ್ವತ್ರಿಕ ರಜಾ ದಿನಗಳ ಪಟ್ಟಿ ಹೀಗಿದೆ. ಜನವರಿ 15,...
- Advertisement -
error: Content is protected !!