Wednesday, May 25, 2022

ಕೊರೋನಾದಿಂದ ಹೊಸದಾಗಿ ಬಡವರಾದ 16 ಕೋಟಿಗೂ ಹೆಚ್ಚು ಜನ! ಶೇ.99ರಷ್ಟು ಜನರ ಆದಾಯ ಕುಸಿತ

Follow Us

newsics.com

ನವದೆಹಲಿ: ಕೊರೋನಾ ಪರಿಣಾಮವಾಗಿ ಕಳೆದ ಎರಡು ವರ್ಷದ ಅವಧಿಯಲ್ಲಿ ಜಗತ್ತಿನ ಶೇ.99ರಷ್ಟು ಜನರ ಆದಾಯ ಕುಸಿತವಾಗಿದೆ. ಅಷ್ಟೇ ಅಲ್ಲ, 16 ಕೋಟಿಗಿಂತ ಹೆಚ್ಚು ಮಂದಿ ಹೊಸದಾಗಿ ಬಡವರಾಗಿದ್ದಾರೆ‌.
ವಿಚಿತ್ರ ಹಾಗೂ ವಿಪರ್ಯಾಸವೆಂದರೆ, ಈ ಎರಡು ವರ್ಷದ ಅವಧಿಯಲ್ಲಿ ವಿಶ್ವದ ಆಗರ್ಭ ಶ್ರೀಮಂತರ ಆಸ್ತಿ ಡಬಲ್‌ ಆಗಿದೆ ಎಂದು ವರದಿ ಹೇಳಿದೆ.

ದಾವೋಸ್‌ ಶೃಂಗಸಭೆಯ ಮೊದಲ ದಿನ ಆಕ್ಸ್‌ಫಾಮ್‌ ಬಿಡುಗಡೆ ಮಾಡಿರುವ ‘ಅಸಮಾನತೆ ಕೊಲ್ಲುತ್ತದೆ’ ಎಂಬ ವರದಿಯಲ್ಲಿ ಈ ಆಂತಕಕಾರಿ ಅಂಶಗಳು ಬೆಳಕಿಗೆ ಬಂದಿವೆ.

ಸೂಕ್ತ ಆರೋಗ್ಯ ಸೌಕರ್ಯವಿಲ್ಲದೆ ಸಂಭವಿಸುವ ಸಾವು, ಲಿಂಗ ತಾರತಮ್ಯ ಆಧರಿತ ಹಿಂಸಾಚಾರ, ಹಸಿವು, ಹವಾಮಾನ ಬದಲಾವಣೆಯ ವಿಕೋಪಗಳನ್ನು ಆಧರಿಸಿ ಈ ವರದಿ ಸಿದ್ಧಪಡಿಸಲಾಗಿದೆ ಎಂದು ಸಂಸ್ಥೆ ಆಕ್ಸ್‌ಫಾಮ್‌ ಹೇಳಿದೆ.

ಎರಡು ವರ್ಷದ ಅವಧಿಯಲ್ಲಿ ವಿಶ್ವದ ಶೇ.99ರಷ್ಟುಜನರ ಆದಾಯದಲ್ಲಿ ಕುಸಿತವಾಗಿದೆ. ಇದೇ ಅವಧಿಯಲ್ಲಿ ಆಗರ್ಭ ಶ್ರೀಮಂತರ ಆಸ್ತಿಯಲ್ಲಿ ನಿತ್ಯ 9000 ಕೋಟಿ ರೂ.ನಷ್ಟು ಹೆಚ್ಚಳವಾಗಿಧ. ಈ ಮೂಲಕ ಅವರ ಒಟ್ಟಾರೆ ಆಸ್ತಿಯಲ್ಲಿ 111 ಲಕ್ಷ ಕೋಟಿ ರು.ನಷ್ಟು ಏರಿಕೆಯಾಗಿದೆ.

ವಿಶ್ವದ 301 ಕೋಟಿ ಕಡುಬಡವರ ಒಟ್ಟು ಆಸ್ತಿಗಿಂತ 6 ಪಟ್ಟು ಹೆಚ್ಚು ಆಸ್ತಿ ಈ ಟಾಪ್‌ 10 ಶ್ರೀಮಂತರ ಬಳಿ ಇದೆ. ಈ ಅಸಮಾನತೆಯು ಜಗತ್ತಿನಲ್ಲಿ ಪ್ರತಿ ದಿನ 21,000 ಜನರ ಅಂದರೆ ಪ್ರತಿ 4 ಸೆಕೆಂಡ್‌ಗೆ ಒಬ್ಬರ ಸಾವಿಗೆ ಕಾರಣವಾಗುತ್ತಿದೆ.

ಷೇರು ಬೆಲೆ ಏರಿಕೆಯಿಂದಾಗಿ ಶ್ರೀಮಂತರ ಆಸ್ತಿಯನ್ನು ಮತ್ತಷ್ಟು ಹೆಚ್ಚಿಸಲು ನೆರವಾಗಿವೆ. ಸಾಂಕ್ರಾಮಿಕವು ಶ್ರೀಮಂತರ ಪಾಲಿಗೆ ವರದಾನವಾಗಿತ್ತು. 14 ವರ್ಷಗಳಲ್ಲಿ ಕಾಣದ ಸಂಪತ್ತಿನ ಏರಿಕೆ ಕಳೆದ 2 ವರ್ಷದಲ್ಲಿ ಆಗಿದೆ ಎಂದು ವರದಿ ಹೇಳಿದೆ.

ಕೋವಿಡ್‌ ಸಾಂಕ್ರಾಮಿಕ ಆಕ್ರಮಿಸಿಕೊಂಡ 2 ವರ್ಷದಲ್ಲಿ ಭಾರತದಲ್ಲಿ ಬಿಲಿಯನೇರ್‌ಗಳ ಆಸ್ತಿ ಡಬಲ್‌ ಆಗಿದೆ. ಬಿಲಿಯನೇರ್‌ಗಳ ಸಂಖ್ಯೆಯಲ್ಲೂ ಶೇ.39ರಷ್ಟು ಏರಿಕೆಯಾಗಿ 142ಕ್ಕೆ ತಲುಪಿದೆ. ಭಾರತದ ಟಾಪ್‌ 10 ಶ್ರೀಮಂತರ ಆಸ್ತಿಯಲ್ಲೂ ಭಾರೀ ಏರಿಕೆಯಾಗಿದೆ. ಎಷ್ಟು ಏರಿಕೆಯೆಂದರೆ, ಮುಂದಿನ 25 ವರ್ಷ ದೇಶದ ಎಲ್ಲಾ ಪ್ರಾಥಮಿಕ ಹಾಗೂ ಉನ್ನತ ಶಿಕ್ಷಣವನ್ನು ಉಚಿತವಾಗಿ ನೀಡಬಹುದು ಎಂದು ಆಕ್ಸ್‌ಫಾಮ್‌ ವರದಿ ಸ್ಪಷ್ಟಪಡಿಸಿದೆ.

ದೇಶದ 142 ಬಿಲಿಯನೇರ್‌ಗಳು ಒಟ್ಟು 53 ಲಕ್ಷ ಕೋಟಿ ರು. ಆಸ್ತಿ ಹೊಂದಿದ್ದು, ಈ ಪೈಕಿ ಟಾಪ್‌ 98 ಜನರ ಆಸ್ತಿಯು ದೇಶದ 55.5 ಕೋಟಿ ಕಡು ಬಡವರ ಆಸ್ತಿಯಾದ 49 ಲಕ್ಷ ಕೋಟಿ ರೂ.ಗೆ ಸಮ ಎಂದು ವರದಿ ಹೇಳಿದೆ.

ಮತ್ತಷ್ಟು ಸುದ್ದಿಗಳು

Latest News

ಏರಿಕೆ ಕಂಡ ಚಿನ್ನದ ಬೆಲೆ ; ಬೆಳ್ಳಿ ಬೆಲೆಯಲ್ಲಿ 500 ರೂ. ಇಳಿಕೆ

newsics.com ದೆಹಲಿ: ದೇಶದಲ್ಲಿ 2 ದಿನಗಳಿಂದ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡಿದ್ದು, ಇಂದು ಚಿನ್ನದ ಬೆಲೆ 10 ಗ್ರಾಂ.ಗೆ 660 ರೂ. ಏರಿಕೆಯಾಗಿದೆ. ಬೆಳ್ಳಿಯ ಬೆಲೆಯು ಒಂದೇ...

ಜಮ್ಮು & ಕಾಶ್ಮೀರದಲ್ಲಿ ಪೊಲೀಸರ ಮೇಲೆ ಭಯೋತ್ಪಾದಕರಿಂದ ಗ್ರೆನೇಡ್​ ದಾಳಿ

newsics.com ಜಮ್ಮು & ಕಾಶ್ಮೀರದ ಕುಲ್ಗಾಮ್​ನ ಯರಿಪೋರಾ ಪ್ರದೇಶದಲ್ಲಿ ಪೊಲೀಸರು ಹಾಗೂ ಸಿಆರ್​ಪಿಎಫ್​ನ ನಾಕಾ ಪಾರ್ಟಿಯ ಮೇಲೆ ಭಯೋತ್ಪಾದಕರು ಗ್ರೆನೇಡ್​ಗಳನ್ನು ಎಸೆದ ಪರಿಣಾಮ ಮೂವರು ನಾಗರಿಕರು ಗಾಯಗೊಂಡ ಘಟನೆಯು ಮಂಗಳವಾರ ನಡೆದಿದೆ. ಪೊಲೀಸರತ್ತ ಭಯೋತ್ಪಾದಕರು ಎಸೆದ...

ವಿದ್ಯಾರ್ಥಿಯಿಂದ ಗುಂಡಿನ ದಾಳಿ: 18 ಶಾಲಾ ಮಕ್ಕಳು, ಓರ್ವ ಶಿಕ್ಷಕ ಸೇರಿ 21 ಮಂದಿ ಸಾವು, ಬಂದೂಕುಧಾರಿಯ‌ ಹತ್ಯೆ

newsics.com ವಾಷಿಂಗ್ಟನ್: ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಯೊಬ್ಬ ಗುಂಡಿನ ದಾಳಿ ನಡೆಸಿ 18 ಮಕ್ಕಳು, ಓರ್ವ ಶಿಕ್ಷಕ ಸೇರಿ 21 ಮಂದಿಯನ್ನು‌ ಕೊಂದಿದ್ದಾನೆ. ಘಟನೆ ಬಳಿಕ ಗುಂಡಿನ ದಾಳಿ ನಡೆಸಿದ ವಿದ್ಯಾರ್ಥಿಯನ್ನು ಪೊಲೀಸರು ಹತ್ಯೆಗೈದಿದ್ದಾರೆ. ಟೆಕ್ಸಾಸ್‌ನ ಉವಾಲ್ಡೆಯ ಪ್ರಾಥಮಿಕ...
- Advertisement -
error: Content is protected !!