newsics.com
ನವದೆಹಲಿ: ದೇಶದೆಲ್ಲೆಡೆ ಕೊರೋನಾ ಅಟ್ಟಹಾಸ ಮೆರೆಯುತ್ತಿದ್ದು, ಸಾವಿರಾರು ಜನ ಸಾವನ್ನಪ್ಪಿದ್ದಾರೆ. ನಿತ್ಯವೂ ಮರಣ ಸರಣಿ ಮುಂದುವರಿದಿದೆ.
ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದ್ದು, ಭಾರತೀಯ ಯೋಧರನ್ನೂ ಬಲಿ ಪಡೆದಿದೆ. ಕೇಂದ್ರ ಅರೆಸೈನಿಕ ಪಡೆಗಳಲ್ಲಿ 25 ಸಾವಿರಕ್ಕೂ ಹೆಚ್ಚು ಸೈನಿಕರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಕೇಂದ್ರ ಭದ್ರತಾ ಪಡೆಗಳ ನೂರಕ್ಕೂ ಹೆಚ್ಚು ಸೈನಿಕರು ಕೊರೋನಾಗೆ ಬಲಿಯಾಗಿದ್ದಾರೆ.
ಸಿಆರ್‌ಪಿಎಫ್ ನ 8270 ಮಂದಿ ಹಾಗೂ ಗಡಿ ಭದ್ರತಾ ಪಡೆಯ 8083 ಸೈನಿಕರಿಗೆ ಕೊರೋನಾ ಸೋಂಕು ತಗುಲಿದೆ.
ನೂರಕ್ಕೂ ಹೆಚ್ಚು ಯೋಧರು ಕೊರೋನಾಗೆ ಬಲಿ, 25 ಸಾವಿರ ಸೈನಿಕರಿಗೆ ಸೋಂಕು
Follow Us