Thursday, May 26, 2022

ಪ್ರಿಯತಮೆಯ ಅಪ್ರಾಪ್ತ ಮಗಳ‌ ಮೇಲೆಯೇ ಅತ್ಯಾಚಾರ, ಮನೆಯಲ್ಲೇ ಹೆರಿಗೆ ಮಾಡಿಸಿದ ಬಾಲಕಿಯ ತಾಯಿ!

Follow Us

newsics.com

ಚೆನ್ಬೈ(ತಮಿಳುನಾಡು): ಮಹಿಳೆಯೊಬ್ಬಳು ತನ್ನ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ ಮಾಡಲು ಪ್ರಿಯಕರನಿಗೆ ಅವಕಾಶ ಮಾಡಿಕೊಟ್ಟಿರುವ ಅಸಹ್ಯ ಹಾಗೂ ಅಮಾನವೀಯ ಘಟನೆ ಚೆನ್ನೈನಲ್ಲಿ ನಡೆದಿದೆ.

ಅಷ್ಟೇ ಅಲ್ಲ, ಸ್ವಂತ ಮಗಳ ಮೇಲೆಯೇ ಅತ್ಯಾಚಾರ ನಡೆಯುವಂತೆ ಮಾಡಿ ಮನೆಯಲ್ಲೇ ಮಗುವಿಗೆ ಜನ್ಮ ನೀಡುವಂತೆ ಮಾಡಿದ್ದಾಳೆ.

ಪತಿಯಿಂದ ಬೇರೆಯಾಗಿ ಚೆನ್ನೈನ ಒಟ್ಟೇರಿ ಪ್ರದೇಶದಲ್ಲಿ ನೆಲೆಸಿರುವ ಸುಮಿತಾ (40) ಅವರಿಗೆ 17 ವರ್ಷದ ಮಗಳಿದ್ದಾಳೆ. ಪುಲಿಯಂತೋಪೆಯ ಮುತ್ತುಕುಮಾರ್ (50) ಎಂಬಾತ ಕಳೆದ ಕೆಲವು ತಿಂಗಳಿಂದ ಇವರ ಜತೆ ಅಕ್ರಮ ಸಂಬಂಧ ಹೊಂದಿದ್ದ.

ಪ್ರಿಯತಮೆಯ ಮಗಳ‌ ಮೇಲೂ ಆಸಕ್ತಿ‌ಬೆಳೆಸಿಕೊಂಡ ಮುತ್ತುಕುಮಾರ್ ತಾಯಿಯ ಸಮ್ಮತಿಯೊಂದಿಗೆ ಕಳೆದ 1 ವರ್ಷದಿಂದ ಬಾಲಕಿಯ ಮೇಲೆ ಅತ್ಯಾಚಾರ ನಡೆಸುತ್ತಿದ್ದ. ಬಾಲಕಿ ಗರ್ಭಿಣಿಯಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋದರೆ ಪೊಲೀಸರಿಗೆ ಸಿಕ್ಕಿಬೀಳುವ ಭಯದಿಂದ ಸುಮಿತಾ ಮನೆಯಲ್ಲೆ ಮಗಳಬ್ನು ಆರೈಕೆ ಮಾಡಿದ್ದು, ಬಾಲಕಿ ಈಗ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ

ಮಗುವಿಗೆ ಚಿಕಿತ್ಸೆ ಕೊಡಿಸಲು ನಮ್ಮಾಳ್ವರಪೇಟೆಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ಆಧಾರ್ ಕಾರ್ಡ್ ಇದ್ದರೆ ಮಾತ್ರ ಚಿಕಿತ್ಸೆ ನೀಡಬಹುದು ಎಂದು ನರ್ಸ್‌ಗಳು ಹೇಳಿದ್ದಾರೆ. ಆಧಾರ್ ಕಾರ್ಡ್ ತೋರಿಸಿದಾಗ ಮಗುವಿನ ತಾಯಿಗೆ 17 ವರ್ಷ ಎಂದು ತಿಳಿದುಬಂದಿದೆ. ನಂತರ ಮಕ್ಕಳ ಕಲ್ಯಾಣ ಸಂಸ್ಥೆಗೆ ಆಸ್ಪತ್ರೆ ಸಿಬ್ಬಂದಿ ದೂರು ನೀಡಿದ್ದಾರೆ. ತಲೆಮರೆಸಿಕೊಂಡಿದ್ದ ಮುತ್ತುಕುಮಾರ್ (50) ಮತ್ತು ಆತನ ತಾಯಿಯನ್ನು ಪೊನ್ನೇರಿಯಲ್ಲಿ ಪೊಲೀಸರು ಬಂಧಿಸಿದ್ದಾರೆ.

ನ್ಯೂಯಾರ್ಕ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಕನ್ನಡ ಚಿತ್ರ

ಎನ್ ಸಿಪಿ ಅಧ್ಯಕ್ಷ ಪವಾರ್ ಕುರಿತು ಅವಹೇಳನಕಾರಿ ಪೋಸ್ಟ್ : ಮರಾಠಿ ನಟಿ ಚಿತಳೆ ಬಂಧನ

ಸಂಸದ ಮಾಣಿಕ್ ಸಹಾ ತ್ರಿಪುರಾದ ನೂತನ ಸಿಎಂ

ಮತ್ತಷ್ಟು ಸುದ್ದಿಗಳು

Latest News

ಉಗ್ರರ ಗುಂಡಿಗೆ ಟಿವಿ‌ ಕಲಾವಿದೆ ಬಲಿ

newsics.com ಶ್ರೀನಗರ: ಉಗ್ರರ ಗುಂಡಿಗೆ ಟಿವಿ ಕಲಾವಿದೆಯೊಬ್ಬರು ಬಲಿಯಾಗಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಬದ್ಗಾಮ್‌ ಜಿಲ್ಲೆಯಲ್ಲಿ ಬುಧವಾರ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತ ಮಹಿಳೆಯನ್ನು...

ಪೆಟ್ರೋಲಿಲ್ಲ, ಎಟಿಎಂನಲ್ಲಿ ಹಣವಿಲ್ಲ: ಪಾಕ್ ಸರ್ಕಾರದ ವಿರುದ್ಧ ಹಫೀಜ್ ವಾಗ್ದಾಳಿ

newsics.com ಇಸ್ಲಾಮಾಬಾದ್: ಪಾಕಿಸ್ತಾನದ ಸ್ಥಿತಿಗತಿಗಳ ಬಗೆಗೆ ಮಾಜಿ ಕ್ರಿಕೆಟಿಗ ಮೊಹಮ್ಮದ್ ಹಫೀಜ್ ಅವರು ಕಿಡಿಕಾರಿದ್ದಾರೆ. ಲಾಹೋರ್ ನಲ್ಲಿ ಜನ ಸಾಮಾನ್ಯರಿಗೆ ಪೆಟ್ರೋಲ್ ಸಿಗುತ್ತಿಲ್ಲ. ಎಟಿಎಂನಲ್ಲಿ ಹಣವಿಲ್ಲ ಎಂದು ಹೇಳಿದ್ದಾರೆ. ಯಾವುದೇ ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್...

ಮಗನ ಪಬ್ ಜಿ ಆಟಕ್ಕೆ ತಾಯಿ ಬಲಿ

newsics.com ಚಿಕ್ಕಮಗಳೂರು: ಮಗನ ಪಬ್ ಜಿ ಆಟಕ್ಕೆ, ತಾಯಿ ಬಲಿಯಾಗಿರುವ ಘಟನೆ ಚಿಕ್ಕಮಗಳೂರಿನ ಗಿರಿಶ್ರೇಣಿಯ ಅಗಲಖಾನ್ ಎಸ್ಟೇಟ್ ನಲ್ಲಿ ನಡೆದಿದೆ. ಇಮ್ತಿಯಾಜ್ ಮತ್ತು ಮೈಮುನ್ನಾ ದಂಪತಿ ಕುಟುಂಬ ಎರಡು ವರ್ಷದಿಂದ ಎಸ್ಟೇಟ್ ನ ಕೂಲಿ ಲೈನ್...
- Advertisement -
error: Content is protected !!