ಮುಂಬೈ: ಇಲ್ಲಿನ ರೆಡ್ ಲೈಟ್ ಏರಿಯಾಗೆ ಡ್ರಾಪ್ ಮಾಡಲು ನಿರಾಕರಿಸಿದ ಕ್ಯಾಬ್ ಚಾಲಕನ ಮೇಲೆ ಆರ್ ಪಿಎಫ್ ಪೊಲೀಸ್ ಪೇದೆಯೊಬ್ಬ ಅತ್ಯಾಚಾರ ಎಸಗಿದ್ದಾನೆಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.
ಈ ಆಘಾತಕಾರಿ ಘಟನೆ ಭಾನುವಾರ ರಾತ್ರಿ ನಡೆದಿದೆ. ಆರೋಪಿ ಆರ್ ಪಿಎಫ್ ಪೊಲೀಸ್ ಪೇದೆ ಧಂಕಡ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಛತ್ರಪತಿ ಶಿವಾಜಿ ಮಹಾರಾಜ್ ರೈಲ್ವೆ ನಿಲ್ದಾಣದ ಸಮೀಪದ ಪಿಡಿ ಮೆಲೋ ರಸ್ತೆಯ ಬೆಂಚ್ ಮೇಲೆ ವಿಶ್ರಾಂತಿ ಪಡೆಯುತ್ತಿದ್ದ ಕ್ಯಾಬ್ ಚಾಲಕನ ಮೇಲೆ ಅತ್ಯಾಚಾರ ನಡೆದಿದೆ. ಆರ್ ಪಿಎಫ್ ಪೊಲೀಸ್ ಪೇದೆ ಅಮಿತ್ ಧಂಕಡ್ ಅವರು ಕ್ಯಾಬ್ ಚಾಲಕನ ಬಳಿ ಹೋಗಿ, ತನ್ನನ್ನು ದಕ್ಷಿಣ ಮುಂಬೈನ ಗ್ರಾಂಟ್ ರಸ್ತೆ ಪ್ರದೇಶದಲ್ಲಿ ವೇಶ್ಯಾವಾಟಿಕೆ ನಡೆಯುವ ಸ್ಥಳಕ್ಕೆ ಕರೆದುಕೊಂಡು ಹೋಗುವಂತೆ ಕೇಳಿಕೊಂಡಿದ್ದಾನೆ. ರೆಡ್ ಲೈಟ್ ಏರಿಯಾಗೆ ಹೋಗಲು ಚಾಲಕ ನಿರಾಕರಿಸಿದ್ದಾನೆ. ಇದರಿಂದ ಆಕ್ರೋಶಗೊಂಡ ಪೇದೆ, ಚಾಲಕನ ಮೇಲೆ ಹಲ್ಲೆ ನಡೆಸಿ, ಆತನನ್ನು ರೇಲ್ವೆ ನಿಲ್ದಾಣದ ಮೂಲೆಯೊಂದಕ್ಕೆ ಎಳೆದೊಯ್ದು, ಆತನೊಂದಿಗೆ ಅಸ್ವಾಭಾವಿಕ ಸೆಕ್ಸ್ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಮುಂಬೈ ಕ್ಯಾಬ್ ಚಾಲಕನ ಮೇಲೆ ಪೊಲೀಸ್ ಪೇದೆ ರೇಪ್!
Follow Us