ಮುಂಬೈ(ಮಹಾರಾಷ್ಟ್ರ): ಕೋವಿಡ್ ಮೂರನೇ ಅಲೆಯ ಆತಂಕದ ನಡುವೆಯೇ ಮುಂಬೈನಲ್ಲಿ ಡೆಲ್ಟಾ ಪ್ಲಸ್ ಕೊರೋನಾ ರೂಪಾಂತರಿ ಸೋಂಕಿಗೆ ಮಹಿಳೆಯೊಬ್ಬರು ಮೃತಪಟ್ಟಿದ್ದು, ಇದು ದೇಶದಲ್ಲೇ ಮೊದಲ ಸಾವು ಎಂದು ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೋರೇಷನ್ ಹೇಳಿದೆ.
ಕಳೆದ ಜುಲೈ 27ರಂದು 63 ವರ್ಷದ ಮಹಿಳೆ ಡೆಲ್ಟಾ ಪ್ಲಸ್’ನಿಂದ ಸಾವಿಗೀಡಾಗಿದ್ದಾರೆ. ಅವರು ಜುಲೈ 21ರಂದು ಕೋವಿಡ್ ಸೋಂಕಿಗೆ ಒಳಗಾಗಿದ್ದರು ಎಂದು
ಬಿಎಂಸಿ ತಿಳಿಸಿದೆ.
ಮೃತಪಟ್ಟ ಮಹಿಳೆಗೆ ಕೋವಿಡ್ ಸೋಂಕಿನ ಲಸಿಕೆಯ ಎರಡೂ ಡೋಸ್ ಗಳನ್ನು ನೀಡಲಾಗಿತ್ತು. ಯಾವುದೇ ಟ್ರಾವೆಲಿಂಗ್ ಹಿಸ್ಟರಿ ಕೂಡ ಇಲ್ಲ. ಮಹಿಳೆ ಕೆಲವು ವರ್ಷಗಳಿಂದ ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ಬಿಎಂಸಿ ಅಧಿಕಾರಿಗಳು ತಿಳಿಸಿದ್ದಾರೆ.
ಮೃತ ಮಹಿಳೆಯ ಜೀನೋಮ್ ಸೀಕ್ವೆನ್ಸಿಂಗ್ ವರದಿಯನ್ನು ಇತ್ತೀಚೆಗೆ ಪಡೆಯಲಾಗಿತ್ತು, ಮೃತ ಮಹಿಳೆ ಡೆಲ್ಟಾ ಪ್ಲಸ್ ಕೋವಿಡ್ ರೂಪಾಂತರಿ ಸೋಂಕಿಗೆ ಒಳಗಾಗಿದ್ದರು ಎಂದು ವರದಿ ತಿಳಿಸಿದೆ ಎಂದು ಬಿಎಂಸಿ ಹೇಳಿದೆ.
ಮೃತ ಮಹಿಳೆಯ ಕುಟುಂಬದ ಆರು ಮಂದಿ ಕೂಡ ಕೋವಿಡ್ ಸೋಂಕಿಗೆ ಒಳಗಾಗಿದ್ದರು. ಆ ಪೈಕಿ ಇನ್ನೊಬ್ಬರು ಕೂಡ ಡೆಲ್ಟಾ ಪ್ಲಸ್ ಸೋಂಕಿಗೆ ಒಳಗಾಗಿದ್ದಾರೆ. ಇನ್ನುಳಿದ ನಾಲ್ವರ ಜೀನೋಮ್ ಸೀಕ್ವೆನ್ಸಿಂಗ್ ಇನ್ನಷ್ಟೇ ಬರಬೇಕಿದೆ ಎಂದು ಬಿಎಂಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಒಂದೇ ದಿನ 40,120 ಜನರಿಗೆ ಕೊರೋನಾ ಸೋಂಕು 42,295 ಮಂದಿ ಗುಣಮುಖ, 585 ಜನರ ಸಾವು
ಬೆಂಗಳೂರಿನಲ್ಲಿ 543 ಮಕ್ಕಳಿಗೆ ಕೊರೋನಾ ಸೋಂಕು: ಬಿಬಿಎಂಪಿ ಅಧಿಕೃತ ಮಾಹಿತಿ
‘ಕರ್ನಾಟಕದ ನೆಲ್ಸನ್ ಮಂಡೇಲಾ’ ಖ್ಯಾತಿಯ ಡಿಯಾಗೋ ಬಸ್ತ್ಯಾವ್ ಇನ್ನಿಲ್ಲ
https://newsics.com/news/latest/now-available-alcoholic-ice-cream/80808/