newsics.com
ಮೈಸೂರು: ಇಲ್ಲಿನ ಮಹಾನಗರ ಪಾಲಿಕೆ ಮೇಯರ್ ಹಾಗೂ ಉಪಮೇಯರ್ ಚುನಾವಣೆ ನಡೆಸಲು ಹೈಕೋರ್ಟ್ ಸಮ್ಮತಿಸಿದೆ.
ಮೈಸೂರು ಮಹಾನಗರ ಪಾಲಿಕೆ ಮೇಯರ್ ಮೀಸಲಾತಿ ಪ್ರಶ್ನಿಸಿ ಪಾಲಿಕೆ ಸದಸ್ಯ ಸಮೀವುಲ್ಲಾ ರಿಟ್ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಅರ್ಜಿಯ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್, ಚುನಾವಣೆ ನಡೆಸಲು ಹಸಿರು ನಿಶಾನೆ ನೀಡಿದೆ.
ಈಗಾಗಲೇ ನಿಗದಿಯಾಗಿರುವ ದಿನಾಂಕದಂದೆ ಚುನಾವಣೆ ನಡೆಸಲು ನ್ಯಾಯಾಲಯ ಹಸಿರು ನಿಶಾನೆ ನೀಡಿದೆ. 2018ರಿಂದ ಸತತವಾಗಿ ಮೇಯರ್ ಸ್ಥಾನವನ್ನು ಮಹಿಳೆಗೆ ಮೀಸಲಿರಿಸಲಾಗಿದೆ. 2018ರ ಜ.24ರಿಂದ ನ.17ರವರೆಗೆ ಎಸ್ಸಿ-ಮಹಿಳೆ, ಸಾಮಾನ್ಯ-ಮಹಿಳೆ ಮೀಸಲು ನಿಗದಿಪಡಿಸಲಾಗಿತ್ತು. 2020ರಲ್ಲಿ ಬಿಸಿಎ-ಮಹಿಳೆ ಇತ್ತು.
ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಸ್ಥಾನಕ್ಕೆ ‘ಸಾಮಾನ್ಯ-ಮಹಿಳೆ’ ಮೀಸಲು ನಿಗದಿಪಡಿಸಿ 2021ರ ಫೆ.11ರಂದು ನಗರಾಭಿವೃದ್ಧಿ ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ರಿಟ್ ಅರ್ಜಿಯಲ್ಲಿ ಪ್ರಶ್ನಿಸಲಾಗಿತ್ತು. ಆದರೆ ಹೈಕೋರ್ಟ್ ಚುನಾವಣೆಗೆ ಯಾವುದೇ ತಡೆ ನೀಡಿಲ್ಲ.
ಇದೇ ಬುಧವಾರ (ಫೆ.24) ರಂದು ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಚುನಾವಣೆ ನಡೆಯಲಿದ್ದು, ಸಾಮಾನ್ಯ ಮಹಿಳೆಗೆ ಮೀಸಲಾತಿ ಒಲಿದು ಬಂದಿದೆ. ಈಗಿನ ಮಾಹಿತಿಯಂತೆ, ಮೇಯರ್ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿದೆ.
14 ವರ್ಷದ ಬಾಲಕಿಯನ್ನು ಮದುವೆಯಾದ ಪಾಕ್ ಸಂಸತ್ ಸದಸ್ಯ
ಒಂದೇ ಕಾಲೇಜಿನ ನಾಲ್ವರು ವಿದ್ಯಾರ್ಥಿನಿಯರು ನಾಪತ್ತೆ
ನಟ ಜಗ್ಗೇಶ್ ಮನೆಗೆ ಪೊಲೀಸರ ಭದ್ರತೆ
ಉದುರಿದ ಎಲೆಗಳು ಅಲ್ಲೇ ಇರಲಿ…