Thursday, December 7, 2023

ಅಮಿತ್​ ಷಾ ಹತ್ಯೆ ಹೇಳಿಕೆ; ನೆಲ್ಲೈ ಕಣ್ಣನ್ ಬಂಧನ

Follow Us

ಚೆನ್ನೈ: ತಮಿಳು ವಿದ್ವಾಂಸ ನೆಲ್ಲೈ ಕಣ್ಣನ್ ಅವರನ್ನು ಪೆರಂಬಲೂರ್​ನಲ್ಲಿ ಪೊಲೀಸರು ಬಂಧಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್​ ಷಾ ಅವರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದನ್ನು ಖಂಡಿಸಿ ಬಿಜೆಪಿ ಮುಖಂಡರೊಬ್ಬರು ಪೊಲೀಸರಿಗೆ ದೂರು ನೀಡಿದ್ದರು. ನಲ್ಲೈ ಬಂಧನಕ್ಕೆ ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಮರೀನಾ ಬೀಚ್​ನ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದ್ದರು.
ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಸೋಷಿಯಲ್​ ಡೆಮಾಕ್ರಟಿಕ್​ ಪಾರ್ಟಿ ಆಫ್​ ಇಂಡಿಯಾ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಕಣ್ಣನ್​, ಅಮಿತ್​ ಷಾ ಅವರು ಪ್ರಧಾನಿ ಮೋದಿಯವರ ಮಿದುಳು ಇದ್ದಂತೆ. ಅಮಿತ್​ ಷಾ ಕತೆ ಮುಗಿದರೆ ಮೋದಿಯವರ ಕತೆ ಮುಗಿದಂತೆ. ಇಷ್ಟಾದರೂ ಯಾವ ಮುಸ್ಲಿಮರೂ ಇನ್ನು ಅವರಿಬ್ಬರನ್ನು ಹತ್ಯೆ ಮಾಡಲು ಮುಂದಾಗುತ್ತಿಲ್ಲ. ಇದು ನನಗೆ ಅಚ್ಚರಿ ತಂದಿದೆ ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದರು.
ತಮಿಳುನಾಡು ಮುಖ್ಯಮಂತ್ರಿ ಕೆ.ಪಳಿನಿಸ್ವಾಮಿ ಮತ್ತು ಡಿಸಿಎಂ ಒ.ಪನ್ನೀರಸೆಲ್ವಂ ಅವರನ್ನೂ ಕಣ್ಣನ್​ ಕಟುವಾಗಿ ಟೀಕಿಸಿದ್ದರು.

ಮತ್ತಷ್ಟು ಸುದ್ದಿಗಳು

vertical

Latest News

ಚಿನ್ನ, ಜಮೀನು, ಬಿಎಂಡಬ್ಲ್ಯೂ ಕಾರಿಗೆ ಬೇಡಿಕೆ : ಕೇರಳದ ವೈದ್ಯೆ ಆತ್ಮಹತ್ಯೆ

Newsics.com ಕೇರಳ : ಕೇರಳದ ತಿರುವನಂತಪುರಂ ಮೆಡಿಕಲ್ ಕಾಲೇಜಿನ ಶಸ್ತ್ರಚಿಕಿತ್ಸಾ ವಿಭಾಗದ ಸ್ನಾತಕೋತ್ತರ ವೈದ್ಯೆ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ನಡೆದಿದೆ. ಆತ್ಮಹತ್ಯೆಗೆ ವರದಕ್ಷಿಣೆಗೆ ಬೇಡಿಕೆ ಇಟ್ಟಿದ್ದೆ ಕಾರಣ...

ಊಟ ಕೇಳಿದ್ದಕ್ಕೆ ವಿದ್ಯಾರ್ಥಿಗಳಿಗೆ ಬಿತ್ತು ಚಾಟಿ ಏಟು

newsics.com ಹಾವೇರಿ : ಊಟ ಕೇಳಿದ ವಿಧ್ಯಾರ್ಥಿಗಳಿಗೆ ವಾರ್ಡನ್ ಚಾಟಿ ಏಟು ಕೊಟ್ಟಿರುವಂತಹ ಅಮಾನವೀಯ ಘಟನೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತವರು ಜಿಲ್ಲೆಯಾದ ಹಾವೇರಿಯಲ್ಲಿ ನಡೆದಿದೆ. ರಾಣೇಬೆನ್ನೂರು ನಗರದ ಅಂಬೇಡ್ಕರ್ ವಸತಿ...

ಹೊತ್ತಿ ಉರಿದ ಕಾರು – ಟಿಪ್ಪರ್ : ಇಬ್ಬರು ಸಜೀವ ದಹನ

Newsics.com ಬೆಳಗಾವಿ : ಕಾರು ಮತ್ತು ಟಿಪ್ಪರ್ ನಡುವೆ ಭೀಕರ ಅಪಘಾತ ಸಂಭವಿಸಿ, ಬಾಲಕಿ ಸೇರಿ ಇಬ್ಬರು ಸಜೀವ ದಹನವಾದರೆ ಮತ್ತಿಬ್ಬರಿಗೆ ಗಂಭೀರ ಗಾಯವಾಗಿರುವಂತಹ ಘಟನೆ ಬೆಳಗಾವಿ ತಾಲೂಕಿನ ದೇವಗಿರಿ ಬಂಬರಗಾ ಕ್ರಾಸ್ ಬಳಿ...
- Advertisement -
error: Content is protected !!