newsics.com
ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು ಮತ್ತೊಮ್ಮೆ ಯುಜಿಸಿ ನೆಟ್ ಪರೀಕ್ಷೆಯನ್ನು ಮುಂದೂಡುವ ಮೂಲಕ ಪರೀಕ್ಷಾರ್ಥಿಗಳಿಗೆ ಶಾಕ್ ನೀಡಿದೆ.
ಸೆಪ್ಟೆಂಬರ್ 16 ಮತ್ತು 23 ರ ನಡುವೆ ಯುಜಿಸಿ ನೆಟ್ ಪರೀಕ್ಷೆ ನಡೆಯಬೇಕಿತ್ತು. ಆದರೇ ಇದೀಗ ಪರೀಕ್ಷಾ ಸಂಸ್ಥೆ ಈ ಪರೀಕ್ಷೆಯನ್ನು ಸೆಪ್ಟೆಂಬರ್ 24 ಕ್ಕೆ ಮುಂದೂಡಿಕೆ ಮಾಡಿದೆ.
ಜೂನ್ ನಲ್ಲಿ ನಡೆಯಬೇಕಿದ್ದ ಈ ಪರೀಕ್ಷೆ ಕೊರೋನಾ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 16ಕ್ಕೆ ಮುಂದೂಡಿಕೆಯಾಗಿತ್ತು. ಆದರೆ ಎನ್ ಟಿಎ ಮತ್ತೊಮ್ಮೆ ಸುತ್ತೋಲೆ ಹೊರಡಿಸಿದ್ದು, ದಿನಾಂಕ ಮುಂದೂಡಿರುವುದನ್ನು ಖಚಿತಪಡಿಸಿದೆ.
ಯುಜಿಸಿ ಮಾನ್ಯತೆ ಪಡೆದ ವಿವಿಧ ವಿಶ್ವವಿದ್ಯಾಲಯ, ಕಾಲೇಜು ಹಾಗೂ ಸಂಶೋಧನಾ ಕೇಂದ್ರದಲ್ಲಿ ಪ್ರಾಧ್ಯಾಪಕ, ಸಹ ಪ್ರಾಧ್ಯಾಪಕ, ಸಂಶೋಧನಾ ಫೆಲೋಶಿಪ್ ಸೇರಿದಂತೆ ವಿವಿಧ ಹುದ್ದೆಗಳಿಗಾಗಿ ಈ ನೆಟ್ ಪರೀಕ್ಷೆ ನಡೆಸಲಾಗುತ್ತದೆ.
ಸೆಪ್ಟೆಂಬರ್ 24 ಕ್ಕೆ ಪರೀಕ್ಷೆ ನಿಗದಿಯಾಗಿದ್ದು ಅದಕ್ಕೂ ಮುನ್ನ ವೆನ್ ಸೈಟ್ ನಲ್ಲಿ ಎನ್ ಟಿ ಎ ಅರ್ಹತಾ ಪತ್ರ, ಪರೀಕ್ಷಾ ಕೇಂದ್ರ ಸೇರಿ ಎಲ್ಲ ವಿವರ ಪ್ರಕಟಿಸುತ್ತದೆ.
NET ಎಕ್ಸಾಂ ಮತ್ತೊಮ್ಮೆ ಮುಂದೂಡಿಕೆ
Follow Us