newsics.com
ನವದೆಹಲಿ: ಶಾಲಾ ವಿದ್ಯಾರ್ಥಿಗಳು 2022ರಿಂದ ಹೊಸ ಪಠ್ಯಕ್ರಮವನ್ನು ಅಭ್ಯಾಸ ಮಾಡಲಿದ್ದು, ಅಂಕಪಟ್ಟಿ ಶಿಕ್ಷಣಕ್ಕೆ ತಿಲಾಂಜಲಿ ನೀಡಲಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿ(ಎನ್‍ಇಪಿ)ಗೆ ಅನುಗುಣವಾಗಿ ಹೊಸ ಪಠ್ಯಕ್ರಮವನ್ನು ಶಾಲೆಗಳಲ್ಲಿ ಅಳವಡಿಸಲಾಗುವುದು. ಇದು ಹಿಂದಿನ ಪಠ್ಯಕ್ರಮಕ್ಕಿಂತಲೂ ಸಂಪೂರ್ಣ ಭಿನ್ನವಾಗಿರಲಿದೆ ಎಂದು ಮೋದಿ ಪ್ರಕಟಿಸಿದರು.
ಶಾಲಾ ಶಿಕ್ಷಣ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಪೋಷಕರ ಪ್ರತಿಷ್ಠೆಯ, ವಿದ್ಯಾರ್ಥಿಗಳ ಒತ್ತಡ ಹೆಚ್ಚಿಸುವ ಅಂಕಪಟ್ಟಿಯನ್ನು ಹೊಸ ಶಿಕ್ಷಣ ನೀತಿ ಮತ್ತು ಪಠ್ಯಕ್ರಮ ಪ್ರೋತ್ಸಾಹಿಸುವುದಿಲ್ಲ ಎಂದು ಮೋದಿ ಹೇಳಿದರು.
2022ರ ಶೈಕ್ಷಣಿಕ ವರ್ಷದಲ್ಲಿ ಹೊಸ ಪಠ್ಯಕ್ರಮ ಅನುಷ್ಠಾನಗೊಳಿಸಲಾಗುವುದು. ಇದು ಮನರಂಜನೆ ಆಧಾರದ ವಿಭಿನ್ನ ಪಠ್ಯಕ್ರಮವಾಗಲಿದ್ದು, ಕಲಿಕೆಯ ಸಂಪೂರ್ಣ ಅನುಭವ ನೀಡುತ್ತದೆ ಎಂದರು. ಗಂಭೀರ ಚಿಂತನೆ, ಸೃಜನಾತ್ಮಕತೆ ಮತ್ತು ಪರಿಣಾಮಕಾರಿ ಸಂವಹನ ಸೃಷ್ಟಿಸುವ ಕೌಶಲ್ಯವನ್ನು ವಿದ್ಯಾರ್ಥಿಗಳಿಗೆ ಕಲಿಸುತ್ತದೆಎಂದು ಪ್ರಧಾನಿ ಮೋದಿ ತಿಳಿಸಿದರು.
2022ರಿಂದ ಹೊಸ ಪಠ್ಯಕ್ರಮ, ಅಂಕಪಟ್ಟಿ ಶಿಕ್ಷಣಕ್ಕೆ ತಿಲಾಂಜಲಿ
Follow Us