Saturday, November 27, 2021

ಸಾಮಾಜಿಕ ಅಂತರ ಕಾಪಾಡಲು ಚೀನಾ ಶಾಲೆಗಳಲ್ಲಿ ಹೊಸ ಐಡಿಯಾ

Follow Us

ಬೀಜಿಂಗ್: ಕೊರೋನಾ ಸಂಕಷ್ಟದಿಂದ ಚೀನಾ ತುಸು ಚೇತರಿಸಿಕೊಂಡಿದ್ದು, ನಿನ್ನೆಯಿಂದ (ಸೋಮವಾರ) ಶಾಲೆಗಳು ಪುನಾರಂಭಗೊಂಡಿವೆ.
ಆದರೆ ಮಕ್ಕಳು ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಜತೆಗೆ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಅನಿವಾರ್ಯವಾಗಿದೆ. ಹೀಗಾಗಿ ಅಲ್ಲಿನ ಶಾಲೆಗಳು ಹಾಗೂ ಸರ್ಕಾರ ವಿಶೇಷ ಯೋಜನೆ ರೂಪಿಸಿವೆ.
ಶಾಲೆಗಳಲ್ಲಿ ಮಕ್ಕಳ ತಲೆಯ ಮೇಲೆ ಒಂದು ಟೋಪಿ ಹಾಕಲಾಗಿದೆ. ಟೋಪಿಗೆ ಉದ್ದದ ರೆಕ್ಕೆಗಳನ್ನು ಜೋಡಿಸಲಾಗಿದೆ. ಇದರಿಂದ ಮಕ್ಕಳು ಒಬ್ಬರ ಹತ್ತಿರ ಮತ್ತೊಬ್ಬರು ಹೋಗಲು ಸಾಧ್ಯವಾಗುವುದಿಲ್ಲ. ಆಕಸ್ಮಿಕವಾಗಿಯೂ ಮಕ್ಕಳು ಹತ್ತಿರ ಬರುವುದನ್ನು ಇದು ತಪ್ಪಿಸುತ್ತದೆ. ಈ ಮೂಲಕ ಶಾಲೆಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗುತ್ತಿದೆ. ಶಾಲೆಗೆ ಬರುವ ಮಕ್ಕಳಿಗೆ ಈ ವಿಶೇಷ ಟೋಪಿ ಹಾಗೂ ಮಾಸ್ಕ್ ಕಡ್ಡಾಯವಾಗಿದೆ.
ಚೀನಾದಲ್ಲಿ ಸಾಂಗ್ ರಾಜವಂಶದ ಆಳ್ವಿಕೆಯಲ್ಲಿ ಅಧಿಕಾರಿಗಳು ನ್ಯಾಯಾಲಯದಲ್ಲಿ ಪರಸ್ಪರ ಪಿಸುಗುಟ್ಟುವುದನ್ನು ತಡೆಯಲು ಈ ರೀತಿಯ ಟೋಪಿಗಳನ್ನು ಧರಿಸಲಾಗುತ್ತಿತ್ತಂತೆ. ನಮ್ಮ ಶಾಲೆಗಳಲ್ಲೂ ಪುಟ್ಟ ಮಕ್ಕಳಿಗೆ ಇಂತಹುದೇ ಟೋಪಿ, ಮಾಸ್ಕ್ ಹಾಕಿ ಪಾಠ ಮಾಡಬಹುದೇನೋ.

ಮತ್ತಷ್ಟು ಸುದ್ದಿಗಳು

Latest News

ವಿವಾಹಿತೆಯ ಜತೆ ಅಕ್ರಮ ಸಂಬಂಧ ಹೊಂದಿದ್ದ ಪೊಲೀಸ್ ಎಸ್ಐ ಅಮಾನತು

newsics.com ವಾರಂಗಲ್(ಆಂಧ್ರಪ್ರದೇಶ): ವಿವಾಹಿತೆಯ ಜತೆ ಅಕ್ರಮ ಸಂಬಂಧ ಹೊಂದಿರುವ ಆರೋಪದ ಮೇಲೆ ಪೊಲೀಸ್ ಎಸ್ಐ ಒಬ್ಬರನ್ನು ಅಮಾನತುಗೊಳಿಸಲಾಗಿದೆ. ವಾರಂಗಲ್‌ನ ‍ವನಪರ್ತಿ ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ಶೇಕ್ ಶಾಪಿ...

ಗುದದ್ವಾರಕ್ಕೆ ಏರ್ ಪಂಪ್: ಸ್ನೇಹಿತ ಸಾವು

newsics.com ಬೆಂಗಳೂರು: ತಮಾಷೆಗೆ ಸ್ನೇಹಿತನ ಗುದದ್ವಾರಕ್ಕೆ ಏರ್ ಪಂಪ್ ಮಾಡಿದ್ದು, ಆತ ಮೃತಪಟ್ಟ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಗಿರಣಿಯಲ್ಲಿ ಕೆಲಸ ಮಾಡುತ್ತಿದ್ದ ರೆಹಮತ್ ಅಲಿ ಮೃತಪಟ್ಟ ವ್ಯಕ್ತಿ. ನವೆಂಬರ್ 16ರಂದು ಕೋಲ್ಕತ್ತಾದ ಗಿರಣಿಯಲ್ಲಿ ರಾತ್ರಿ...

ಲಾಲೂ ಪ್ರಸಾದ್ ಯಾದವ್ ಅಸ್ವಸ್ಥ: ಏಮ್ಸ್‌ಗೆ ದಾಖಲು

newsics.com ನವದೆಹಲಿ: ಆರ್‌ಜೆಡಿ ಮುಖ್ಯಸ್ಥ ಹಾಗೂ ಬಿಹಾರದ ಮಾಜಿ ಸಿಎಂ ಲಾಲೂ ಪ್ರಸಾದ್ ಯಾದವ್ ಅಸ್ವಸ್ಥರಾಗಿದ್ದು, ಅವರನ್ನು ದೆಹಲಿಯ ಏಮ್ಸ್‌ನ ತುರ್ತು ನಿಗಾ ಘಟಕಕ್ಕೆ ದಾಖಲಿಸಲಾಗಿದೆ. 73 ವರ್ಷದ ಲಾಲೂ ಅವರು ಜ್ವರ, ದಣಿವಿನಿಂದ ಬಳಲಿದ್ದು,...
- Advertisement -
error: Content is protected !!