♦ ಏನನ್ನೂ ಹೇಳದಂತೆ ರಾಜ್ಯ ಸರ್ಕಾರಕ್ಕೆ ಕೇಂದ್ರದಿಂದ ಸೂಚನೆ
newsics.com
ಬೆಂಗಳೂರು: ಬ್ರಿಟನ್’ನಿಂದ ರಾಜ್ಯಕ್ಕೆ ಆಗಮಿಸಿದ 1638 ಜನರ ಪೈಕಿ ಕೋರೋಣ ಪಾಸಿಟಿವ್ ಇರುವ 14 ಮಂದಿಯ ವರದಿಯನ್ನು ನಿಮ್ಹಾನ್ಸ್ ಗೆ ಕಳುಹಿಸಲಾಗಿದೆ. ನಾಳೆ(ಡಿ.27) ನಿಮ್ಹಾನ್ಸ್ ವರದಿ ನೀಡಿದ ಬಳಿಕ ಹೊಸ ಮಾದರಿಯ ಕೊರೋನಾ ಸೋಂಕು ರಾಜ್ಯ ಪ್ರವೇಶಿಸಿದೆಯೇ ಇಲ್ಲವೇ ಎಂಬುದು ಖಚಿತವಾಗಲಿದೆ.
ಆದರೆ ಈ ಬಗ್ಗೆ ಸಾರ್ವಜನಿಕರಿಗೆ ಯಾವುದೇ ಮಾಹಿತಿ ನೀಡದಂತೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಹೀಗಾಗಿ ಕೇಂದ್ರ ಸರ್ಕಾರವೇ ಈ ಬಗ್ಗೆ ಮಾಹಿತಿ ನೀಡಲಿದೆ ಎಂದು ರಾಜ್ಯ ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಹೇಳಿದ್ದಾರೆ.
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬ್ರಿಟನ್ ನಿಂದ ಬಂದವರಲ್ಲಿ 14 ಜನರಿಗೆ ಪಾಸಿಟಿವ್ ಬಂದಿರುವುದರಿಂದ ಹೆಚ್ಚಿನ ಮಾಹಿತಿಗಾಗಿ ನಿಮ್ಹಾನ್ಸ್ ನಲ್ಲಿರುವ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದ್ದೇವೆ. ಬ್ರಿಟನ್ನಲ್ಲಿ ಕಾಣಿಸಿಕೊಂಡಿರುವ ರೂಪಾಂತರ ಮಾದರಿಯ ವೈರಸ್ ಎಂಬ ಬಗ್ಗೆ ಖಚಿತವಾಗಿಲ್ಲ. 17 ರೀತಿಯ ಮೂಟೇಷನ್ ಆಗಿರುವ ವೈರಾಣು ಇದಾಗಿರುವುದರಿಂದ ವರದಿಗೆ 48 ಗಂಟೆ ಬೇಕಾಗುತ್ತದೆ ಎಂದು ಸುಧಾಕರ್ ತಿಳಿಸಿದರು.
ಐಸಿಎಂಆರ್ಗೆ ಕಳುಹಿಸಿಕೊಡಿ ಎಂದು ಪ್ರಧಾನಿಗಳ ಕಚೇರಿ ಸೂಚನೆ ನೀಡಿರುವುದರಿಂದ ಇದರ ಬಗ್ಗೆ ಅವರೇ ಮಾಹಿತಿ ನೀಡುತ್ತಾರೆ. ನಾವು ಯಾವುದೇ ಕಾರಣಕ್ಕೂ ಮಾಹಿತಿಯನ್ನು ಮಾಧ್ಯಮಗಳಿಗೆ ನೀಡಬಾರದು ಎಂದು ಸೂಚನೆ ಕೊಟ್ಟಿದೆ. ಹೀಗಾಗಿ ಕೇಂದ್ರ ಸರ್ಕಾರವೇ ಬಿಡುಗಡೆ ಮಾಡುತ್ತದೆ ಎಂದರು.
ಶಾಲಾ ಕಾಲೇಜಗಳನ್ನು ಪುನರಾರಂಭಿಸುವ ಬಗ್ಗೆ ಶಿಕ್ಷಣ ಸಚಿವ ಸುರೇಶ್ಕುಮಾರ್ ಅವರೇ ನಿರ್ಧಾರ ಕೈಗೊಳ್ಳುತ್ತಾರೆ. ಒಂದೆರಡು ದಿನಗಳಲ್ಲಿ ಶಾಲಾ ಕಾಲೇಜು ಆರಂಭದ ಬಗ್ಗೆ ತೀರ್ಮಾನವಾಗಲಿದೆ ಎಂದು ಸುಧಾಕರ್ ಹೇಳಿದರು.
ಯುಕೆಯಿಂದ ಬಂದ 151ಪ್ರಯಾಣಿಕರು ನಾಪತ್ತೆ: ಸೋಂಕು ಹರಡುವ ಆತಂಕ ಹೆಚ್ಚಳ
ಯುಕೆಯಿಂದ ಬಂದ 14 ಮಂದಿಗೆ ಕೊರೋನಾ ಸೋಂಕು: ರಾಜ್ಯದಲ್ಲಿ ಕಟ್ಟೆಚ್ಚರ
ಮಧ್ಯಪ್ರದೇಶದಲ್ಲಿ ಲವ್ ಜಿಹಾದ್ ನಿಷೇಧ ಕಾನೂನಿಗೆ ಅನುಮೋದನೆ