Thursday, December 7, 2023

ಚೀನಾದಲ್ಲಿ ಹೊಸ ವೈರಸ್: ಪುರುಷರನ್ನು ನಪುಂಸಕರನ್ನಾಗಿ ಮಾಡುತ್ತಿದೆ ಸೂಕ್ಷ್ಮ ಜೀವಿ

Follow Us

newsics.com
ಬೀಜಿಂಗ್:
ವಿಶ್ವಕ್ಕೆ ಕೊರೋನಾ ಮಹಾಮಾರಿಯನ್ನು ಪರಿಚಯಿಸಿದ ಕುಖ್ಯಾತಿಗೆ ಒಳಗಾಗಿರುವ ಚೀನಾದಲ್ಲಿ ಹೊಸ ವೈರಸ್ ಕಂಡು ಬಂದಿದೆ. ಇದು ಅತ್ಯಂತ ಅಪಾಯಕಾರಿಯಾಗಿದೆ. ಚೀನಾದ ಗಾಂಝ್ಸು ಪ್ರಾಂತ್ಯದ ರಾಜಧಾನಿ ಲ್ಯಾಂಝೋ ದಲ್ಲಿ ಈ ವೈರಸ್ ಪತ್ತೆಯಾಗಿದೆ.

ಬ್ರೂಸೆಲೋಸಿಸ್ ಎಂಬ ವೈರಸ್ ಈ ರೋಗ ಹರಡುತ್ತಿದೆ. ಪ್ರಯೋಗಾಲಯದಿಂದ ಸೋರಿಕೆಯಾದ ಕಾರಣ ಈ ವೈರಸ್ ಹಬ್ಬುತ್ತಿದೆ. ಪುರುಷರು ಇದರ ದಾಳಿಗೆ ತುತ್ತಾಗುತ್ತಿದ್ದಾರೆ. ಈ ವೈರಸ್ ದಾಳಿಗೆ ತುತ್ತಾದ ಪುರುಷರಲ್ಲಿ ನಪುಂಸಕತನದ ಲಕ್ಷಣ ಕಂಡುಬಂದಿದೆ. 3245 ಮಂದಿಯಲ್ಲಿ ರೋಗ ದೃಢಪಟ್ಟಿದೆ.

ಕಳೆದ ವರ್ಷ ಬಯೊಫಾರ್ಮಕ್ಯುಟಿಕಲ್ ಕಂಪೆನಿಯಲ್ಲಿ ಉಂಟಾದ ಸೋರಿಕೆಯಿಂದ ಈಶಾನ್ಯ ಚೀನಾದ ಹಲವರಲ್ಲಿ ಬ್ಯಾಕ್ಟೀರಿಯಾ ರೋಗ ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪುರುಷನ ಪ್ರತ್ಯುತ್ಪಾದನಾ ಅಂಗಗಳು ಸೋಂಕಿಗೆ ತುತ್ತಾಗುತ್ತಿವೆ. ಇದರಿಂದ ನಪುಂಸಕತನದ ಲಕ್ಷಣ ಕಂಡುಬರುತ್ತಿದೆ ಎಂದು ಸಂಶೋಧನೆಯಲ್ಲಿ ಸಾಬೀತಾಗಿದೆ. ಈ ರೋಗಕ್ಕೆ ‘ಮಾಲ್ಟಾ ಜ್ವರ’ ಎಂಬ ಹೆಸರು ಕೂಡ ಇದೆ. ಪ್ರಾಣಿಗಳ ಸಂಪರ್ಕದಿಂದಾಗಿ ಈ ವೈರಸ್ ಮನುಷ್ಯನಿಗೆ ಹರಡಿದೆ ಎಂದು ಸಂಶೋಧನೆಯಲ್ಲಿ ತಿಳಿದುಬಂದಿದೆ. ಸಾರ್ವಜನಿಕವಾಗಿಯೂ ಈ ವೈರಸ್​ ಸಾಕಷ್ಟು ತೊಂದರೆ ತರುವ ಸಾಧ್ಯತೆ ಇದೆ ಎಂದು ಯುನೈಟೆಡ್ ಸ್ಟೇಟ್ಸ್ ನ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಶನ್ ಸಂಸ್ಥೆ ಹೇಳಿದೆ. ಇದು ತಲೆನೋವು, ಸ್ನಾಯು ನೋವು, ಜ್ವರ ಮತ್ತು ಆಯಾಸವನ್ನು ಉಂಟುಮಾಡಬಹುದು ಎಂದು ಅದು ಹೇಳಿದೆ. ಜತೆಗೆ, ಸಂಧಿವಾತ ಅಥವಾ ಕೆಲವು ಅಂಗಗಳಲ್ಲಿ ಊತ ಕಾಣಿಸಿಕೊಳ್ಳಲಿದೆ ಎಂದು ಎಂದು ಸಂಶೋಧನೆಯಲ್ಲಿ ತಿಳಿದುಬಂದಿದೆ.

ರೈಲು ಪ್ರಯಾಣಿಕರು ಇನ್ನು ಮಂದೆ ಪಾವತಿಸಬೇಕು ಬಳಕೆದಾರರ ಶುಲ್ಕ

ಈರುಳ್ಳಿ ರಫ್ತಿನ ಮೇಲೆ ಭಾರತ ನಿಷೇಧ: ಬಾಂಗ್ಲಾ ಕಿಡಿ ಕಿಡಿ

ಮತ್ತಷ್ಟು ಸುದ್ದಿಗಳು

vertical

Latest News

ಬಿಜೆಪಿ ಮುಖಂಡ ಮಣಿಕಂಠ ರಾಠೋಡ್‌ ಪೊಲೀಸ್ ವಶಕ್ಕೆ

Newsics.com ಕಲಬುರಗಿ : ಅಪಘಾತವನ್ನು ಕೊಲೆ ಯತ್ನ ಎಂದು ಕಥೆ ಕಟ್ಟಿದ್ದ ಕಲಬುರಗಿ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್​ ರನ್ನ ನಗರ ಠಾಣೆಯ ಪೊಲೀಸರು ಮತ್ತೆ ವಶಕ್ಕೆ...

ನಂದಿನಿ ಹಾಲಿನ ದರ ಮತ್ತೆ ಏರಿಕೆ..!!

Newsics.com ಬೆಂಗಳೂರು :  ರಾಜ್ಯದ ಜನತೆಗೆ ಮತ್ತೊಂದು ದರ ಏರಿಕೆಯ ಬಿಸಿ ಕಾದಿದೆ. ಹೌದು, ನಂದಿನಿ ಹಾಲಿನ ದರ ಪರಿಷ್ಕರಣೆಗೆ ಕರ್ನಾಟಕ ಹಾಲು ಮಾರಾಟ ಮಹಾಮಂಡಳ (KMF) ಚಿಂತನೆ ನಡೆಸಿದೆ. ಈ ಕುರಿತು ಜನವರಿಯಲ್ಲಿ...

ಚಿನ್ನ, ಜಮೀನು, ಬಿಎಂಡಬ್ಲ್ಯೂ ಕಾರಿಗೆ ಬೇಡಿಕೆ : ಕೇರಳದ ವೈದ್ಯೆ ಆತ್ಮಹತ್ಯೆ

Newsics.com ಕೇರಳ : ಕೇರಳದ ತಿರುವನಂತಪುರಂ ಮೆಡಿಕಲ್ ಕಾಲೇಜಿನ ಶಸ್ತ್ರಚಿಕಿತ್ಸಾ ವಿಭಾಗದ ಸ್ನಾತಕೋತ್ತರ ವೈದ್ಯೆ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ನಡೆದಿದೆ. ಆತ್ಮಹತ್ಯೆಗೆ ವರದಕ್ಷಿಣೆಗೆ ಬೇಡಿಕೆ ಇಟ್ಟಿದ್ದೆ ಕಾರಣ ಎಂಬ ಆರೋಪ ಕೇಳಿ ಬಂದಿದೆ. ಮೃತ ವೈದ್ಯಳನ್ನು...
- Advertisement -
error: Content is protected !!