ಕಾಲೇಜು ಆರಂಭಕ್ಕೆ ಗಡಿಬಿಡಿಯಿಲ್ಲ, ಸಾಧಕ-ಬಾಧಕ ಚರ್ಚೆಗೆ ಸಭೆ- ಡಿಸಿಎಂ

newsics.com
ಬೆಂಗಳೂರು: ನವೆಂಬರ್​ನಲ್ಲಿ ಕಾಲೇಜು ಆರಂಭಿಸುವ ಗುರಿ ಇದ್ದರೂ ಯಾವುದೇ ಗಡಿಬಿಡಿ ಮಾಡುವುದಿಲ್ಲ. ಪರಿಸ್ಥಿತಿ ಅವಲೋಕಿಸಿ, ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಿ ನಿರ್ಧರಿಸುವುದಾಗಿ ಉಪ ಮುಖ್ಯಮಂತ್ರಿ, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದ್ದಾರೆ.
ಆನ್​ಲೈನ್​ ತರಗತಿಗಳು ಸ್ಥಳೀಯ ವಾತಾವರಣಕ್ಕೆ ಪರಿಣಾಮಕಾರಿಯಾಗಿಲ್ಲ. ಅದರಲ್ಲೂ ವೃತ್ತಿ ಶಿಕ್ಷಣ ಕೋರ್ಸ್​ ವಿದ್ಯಾರ್ಥಿಗಳಿಗೆ ಇದು ಹೆಚ್ಚು ಸಮಸ್ಯೆಯೊಡ್ಡಲಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಕಾಲೇಜು ಆರಂಭಕ್ಕೆ ಪರ್ಯಾಯ ಮಾರ್ಗ ಹುಡುಕುತ್ತಿದೆ ಎಂದು ಅಶ್ವತ್ಥನಾರಾಯಣ ಹೇಳಿದರು.
ಈ ಹಿನ್ನೆಲೆಯಲ್ಲಿ ಶೈಕ್ಷಣಿಕ ಸಾಲಿನ ಪದವಿ ಮತ್ತು ಸ್ನಾತಕೋತ್ತರ ತರಗತಿಯನ್ನು ಯಾವಾಗ ಆರಂಭಿಸಬೇಕು ಎಂಬ ಬಗ್ಗೆ ತೀರ್ಮಾನ ಕೈಗೊಳ್ಳಲು ಉನ್ನತ ಶಿಕ್ಷಣ ಇಲಾಖೆ ಸರಣಿ ಸಭೆಗಳನ್ನು ನಡೆಸಿ ಸಲಹೆ ಪಡೆಯಲು ನಿರ್ಧರಿಸಿದೆ.
ಅ.20ರಂದು ಉನ್ನತ ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಉಪ ಮುಖ್ಯಮಂತ್ರಿ, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಪ್ರಥಮ ಸಭೆ ನಡೆಸಲಿದ್ದು, ಕಾಲೇಜು ಆರಂಭ ಸರಿಯೇ ಅಲ್ಲವೇ ಎಂಬ ಬಗ್ಗೆ ಚರ್ಚೆ ನಡೆಸಲಿದ್ದಾರೆ
ಕೊರೋನಾ ಹರಡುತ್ತಿರುವ ಈ ವೇಳೆಯಲ್ಲಿ ಕಾಲೇಜು ಆರಂಭಿಸುವ ಕುರಿತು ಸರ್ಕಾರದ ನಿಲುವು ಏನಾಗಿರಬೇಕು ಎಂಬ ಬಗ್ಗೆ ತೀರ್ಮಾನ ಕೈಗೊಳ್ಳಲು ಸಾಕಷ್ಟು ಹಂತದ ತಯಾರಿ ಬೇಕಾಗುತ್ತದೆ ಎಂದರು.
ಈ ಹಂತದಲ್ಲಿ ತರಗತಿ ಆರಂಭದ ಬಗ್ಗೆ ಅನಿಶ್ಚಿತತೆ ಇದೆ. ಅಧಿಕಾರಿಗಳು, ತಜ್ಞರ ಜತೆ ಸಭೆ ನಡೆಸಿ ಅಭಿಪ್ರಾಯ ಪಡೆಯಬೇಕಾಗುತ್ತದೆ. ಬಳಿಕ ಮುಖ್ಯಕಾರ್ಯದರ್ಶಿ ಹಂತದಲ್ಲಿ ಸಭೆ ನಡೆಸಬೇಕಾಗುತ್ತದೆ ಎಂದು ಅವರು ಹೇಳಿದರು.

LEAVE A REPLY

Please enter your comment!
Please enter your name here

Read More

ಅನಂತಪದ್ಮನಾಭ ಸ್ವಾಮಿ ಆಡಳಿತ ಮಂಡಳಿ ಸದಸ್ಯರಾಗಿ ಕುಮ್ಮನಂ

ನವದೆಹಲಿ: ಕೇರಳದ ಪ್ರಸಿದ್ದ ಅನಂತ ಪದ್ಮನಾಭ ಸ್ವಾಮಿ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರಾಗಿ ಹಿರಿಯ ಬಿಜೆಪಿ ನಾಯಕ ಕುಮ್ಮನಂ ರಾಜಶೇಖರನ್ ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿದೆ. ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯ ಈ...

ವೆಡ್ಡಿಂಗ್‌ ಫೋಟೋ ಶೂಟ್’ನಲ್ಲಿ ಬ್ಯಾಟ್ ಬೀಸಿದ ಸಂಜಿದಾ..!

newsics.comಢಾಕಾ: ಬಾಂಗ್ಲಾದೇಶ ರಾಷ್ಟ್ರೀಯ ಕ್ರಿಕೆಟ್‌ ತಂಡದ ಆಟಗಾರ್ತಿ ಸಂಜಿದಾ ಇಸ್ಲಾಮ್‌ ವಿಶಿಷ್ಟವಾಗಿ ವೆಡ್ಡಿಂಗ್‌ ಫೋಟೋ ಶೂಟ್ ಮಾಡಿ ಸುದ್ದಿಯಾಗಿದ್ದಾರೆ.ಮದುವೆಯ ಸಾಂಪ್ರದಾಯಕ ಉಡುಗೆಯಲ್ಲೇ ಅಂಗಳಕ್ಕಿಳಿದು, ಬ್ಯಾಟಿಂಗ್‌ ಮಾಡುವ ಶೈಲಿಯಲ್ಲಿ ಫೋಟೋ ತೆಗೆಸಿಕೊಂಡು...

ಫಲದಾಯಿನಿ ಕಾತ್ಯಾಯಿನೀ…

ಜಗನ್ಮಾತೆ ಕಾತ್ಯಾಯಿನಿಯು ಅಮೋಘ ಫಲದಾಯಿನಿಯಾಗಿದ್ದಾಳೆ. ಇವಳ ಬಣ್ಣವು ಬಂಗಾರದಂತೆ ಹೊಳೆಯುತ್ತದೆ. ಅವಳಿಗೆ ನಾಲ್ಕು ಭುಜಗಳಿವೆ. ಅಭಯ, ವರ, ಖಡ್ಗ ಹಾಗೂ ಕಮಲ ಪುಷ್ಪಗಳನ್ನು ಹೊಂದಿದ್ದಾಳೆ. ನವರಾತ್ರಿಯ ದುರ್ಗಾಪೂಜೆಯ ಆರನೇ ದಿನ...

Recent

error: Content is protected !!