Saturday, April 17, 2021

ಮತ್ತೆ ಲಾಕ್’ಡೌನ್ ಬೇಕಿಲ್ಲ; ಏ.11ರಿಂದ 4 ದಿನ ವ್ಯಾಕ್ಸಿನ್ ಉತ್ಸವ- ಮೋದಿ

newsics.com
ನವದೆಹಲಿ: ದೇಶದಲ್ಲಿ‌ ಮತ್ತೆ‌ ಲಾಕ್ ಡೌನ್ ಅಗತ್ಯವಿಲ್ಲ ಎಂದು ಪ್ರಧಾನಿ‌ ಮೋದಿ ಅಭಿಪ್ರಾಯಪಟ್ಟಿದ್ದು, ಎರಡರಿಂದ ಮೂರು ವಾರ ಕಠಿಣ ನಿಯಮಗಳನ್ನು‌ ಪಾಲಿಸುವಂತೆ ಕರೆನೀಡಿದ್ದಾರೆ.

ಗುರುವಾರ (ಏ.8) ಜನತೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ದೇಶದಲ್ಲಿ ಏಪ್ರಿಲ್ 11ರಿಂದ ನಾಲ್ಕು ದಿನಗಳ‌ ಕಾಲ ವ್ಯಾಕ್ಸಿನ್ ಉತ್ಸವ ನಡೆಸಬೇಕೆಂದು ಹೇಳಿದ್ದಾರೆ. ಕೊರೋನಾ ತಪಾಸಣೆ ಹಾಗೂ ಲಸಿಕೆ ನೀಡಿಕೆಯನ್ನು ತಕ್ಷಣದಿಂದಲೇ ಹೆಚ್ಚಿಸುವಂತೆ ಅವರು ಕರೆನೀಡಿದ್ದಾರೆ. ನೈಟ್ ಕರ್ಫ್ಯೂ ಎನ್ನುವ ಬದಲು ಕೊರೋನಾ ಕರ್ಫ್ಯೂ ಎಂದು ಕರೆಯುವುದು ಸೂಕ್ತ. ಇದರಿಂದ ಜನರಲ್ಲಿ ಜಾಗೃತಿ‌ ಮೂಡುತ್ತದೆ ಎಂದು ಮೋದಿ ಅಭಿಪ್ರಾಯಪಟ್ಟರು.
ಲಸಿಕೆ ವ್ಯರ್ಥವಾಗುವುದನ್ನು ಸಂಪೂರ್ಣವಾಗಿ ತಡೆಯಬೇಕು. ದೇಶದ ಪ್ರತಿಯೊಬ್ಬರಿಗೂ ಕೊರೋನಾ ಲಸಿಕೆ ನೀಡುವ ಗುರಿಯಿದೆ. ತಕ್ಷಣಕ್ಕೆ 45 ವರ್ಷ ಮೇಲ್ಪಟ್ಟವರಿಗೆ ತುರ್ತಾಗಿ ಲಸಿಕೆ ನೀಡಬೇಕೆಂದು ಸಲಹೆ ಮಾಡಿದರು. ಎಲ್ಲ ರಾಜ್ಯಗಳಲ್ಲಿ ಸರ್ವಪಕ್ಷ ಸಭೆ ಕರೆದು ಕೊರೋನಾ ತಡೆಗೆ ತುರ್ತು ಕ್ರಮ ಜರುಗಿಸಿ ಎಂದರು.

ಮತ್ತಷ್ಟು ಸುದ್ದಿಗಳು

Latest News

ಆಮ್ಲಜನಕ‌ ಕೊರತೆ: ಐಸಿಯುನಲ್ಲಿದ್ದ ಮೂವರು ಕೊರೋನಾ ಸೋಂಕಿತರು ಸಾವು

newsics.com ಲಖನೌ (ಉತ್ತರ ಪ್ರದೇಶ): ಆಮ್ಲಜನಕದ ಕೊರತೆಯಿಂದಾಗಿ ಮೂವರು ಕೋವಿಡ್ ರೋಗಿಗಳು ಶನಿವಾರ ಸಾವನ್ನಪ್ಪಿದ್ದಾರೆ. ಮೃತರು ಗೋಮ್ಟಿನಗರದ ಡಾ. ರಾಮ್ ಮನೋಹರ್ ಲೋಹಿಯಾ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಐಸಿಯುಗೆ...

ಆಸ್ಪತ್ರೆಗೆ ನುಗ್ಗಿ 850 ರೆಮಿಡಿಸಿವರ್ ಇಂಜೆಕ್ಷನ್ ಕಳ್ಳತನ

newsics.com ಭೋಪಾಲ್(ಮಧ್ಯಪ್ರದೇಶ): ಇಲ್ಲಿನ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ನುಗ್ಗಿದ ದುಷ್ಕರ್ಮಿಗಳು 850 ರೆಮಿಡಿಸಿವರ್ ಇಂಜೆಕ್ಷನ್ ಗಳನ್ನು ಕಳ್ಳತನ ಮಾಡಿದ್ದಾರೆ. ದೇಶದಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿರುವ ನಡುವೆ ಕಾಳಸಂತೆಯಲ್ಲಿ ಔಷಧ ಮಾರಾಟದ ಬೇಡಿಕೆ ಕೂಡ ಹೆಚ್ಚಾಗುತ್ತಿದೆ. ಈ...

ಕೇಂದ್ರ ಸಚಿವ ಕಿರೆನ್ ರಿಜಿಜುಗೆ ಕೊರೋನಾ ಸೋಂಕು

newsics.com ನವದೆಹಲಿ: ಕೇಂದ್ರ ಸಚಿವ ಕಿರೆನ್ ರಿಜಿಜು ಅವರಿಗೆ ಶನಿವಾರ ಕೊರೋನಾ ಸೋಂಕು ತಗುಲಿದೆ. ಈ ವಿಷಯವನ್ನು ಸ್ವತಃ ಸಚಿವ ಕಿರೆನ್ ರಿಜಿಜು ಅವರೇ ತಿಳಿಸಿದ್ದಾರೆ. ಟ್ವಿಟರ್ ನಲ್ಲಿ ಈ‌ ಮಾಹಿತಿ ಹಂಚಿಕೊಂಡಿರುವ ರಿಜಿಜು,...
- Advertisement -
error: Content is protected !!