ಬೆಂಗಳೂರು: ಬೆಂಗಳೂರಿನ ಐಟಿ ಕಚೇರಿಗೆ ಹಾಜರಾಗುವಂತೆ ರಶ್ಮಿಕಾ ಕುಟುಂಬಕ್ಕೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶನಿವಾರ ಸಮನ್ಸ್ ನೀಡಿದ್ದಾರೆ. 21ರಂದು(ಮಂಗಳವಾರ) ರಶ್ಮಿಕಾ ಸೇರಿದಂತೆ ಕುಟುಂಬಸ್ಥರು ವಿಚಾರಣೆಗೆ ಹಾಜರಾಗಬೇಕಾಗಿದೆ.
ಐಟಿ ಅಧಿಕಾರಿಗಳು ರಶ್ಮಿಕಾ ಮಂದಣ್ಣ, ಅವರ ತಂದೆ ಮದನ್ ಮಂದಣ್ಣ ಹಾಗೂ ತಾಯಿ ಸುಮನ್ ಅವರಿಗೆ ಪ್ರತ್ಯೇಕವಾಗಿ ನೋಟಿಸ್ ಜಾರಿ ಮಾಡಿದ್ದಾರೆ.
ಗುರುವಾರ ರಶ್ಮಿಕಾ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ರಶ್ಮಿಕಾ ಅವರನ್ನು ಸತತ ನಾಲ್ಕು ಗಂಟೆ ಕಾಲ ವಿಚಾರಣೆ ನಡೆಸಿದ್ದರು. ಅದಕ್ಕೂ ಮೊದಲು ರಶ್ಮಿಕಾ ತಂದೆ ಮಂದಣ್ಣ ಅವರನ್ನೂ ವಿಚಾರಣೆಗೊಳಪಡಿಸಿದ್ದರು. ಶುಕ್ರವಾರ ಶೂಟಿಂಗ್ ಇದ್ದ ಕಾರಣ ರಶ್ಮಿಕಾ ವಿಚಾರಣೆ ನಡೆದಿರಲಿಲ್ಲ.