SSLC ಪರೀಕ್ಷೆ ಸಿದ್ಧತೆ; ಅಧಿಕಾರಿಗಳಿಗೆ ಸೂಚನೆ

ಬೆಂಗಳೂರು: ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಸಲು ಅನುವಾಗುವಂತೆ ಎಲ್ಲ ಸಿದ್ದತೆಗಳನ್ನು ಈಗಿನಿಂದಲೇ ಆರಂಭಿಸುವಂತೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ರಾಜ್ಯದ ಎಲ್ಲ ಜಿಲ್ಲೆಗಳ ಶೈಕ್ಷಣಿಕ ಉಪನಿರ್ದೇಶಕರೊಂದಿಗೆ ಸೋಮವಾರ ವಿಡಿಯೋ ಸಂವಾದ ನಡೆಸಿದ ಸಚಿವರು, ಪರೀಕ್ಷಾ ದಿನಾಂಕ ತಿಳಿಯಲು ವಿದ್ಯಾರ್ಥಿಗಳು ಉತ್ಸುಕರಾಗಿದ್ದು ಮತ್ತು ತಮ್ಮ ಪರಿಶ್ರಮದ ಆಧಾರದಲ್ಲಿ ಪರೀಕ್ಷಾ ಫಲಿತಾಂಶವನ್ನು ಪಡೆಯಬೇಕೆಂದು ಬಯಸುತ್ತಿರುವ ಹಿನ್ನೆಲೆಯಲ್ಲಿ ಎಲ್ಲ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಪರೀಕ್ಷೆ ನಿರ್ವಹಿಸುವ ಬಗ್ಗೆ ಕೂಡಲೇ ಗಮನ ಹರಿಸಬೇಕೆಂದು ಸೂಚಿಸಿದರು. ಈಗಾಗಲೇ ಬೇರೆ ಊರುಗಳಿಗೆ ತೆರಳಿರುವ ವಿದ್ಯಾರ್ಥಿಗಳಿಗೆ ಅವರು ಪ್ರಸ್ತುತ ಇರುವ ಸ್ಥಳಗಳಲ್ಲಿಯೇ ಹತ್ತಿರದ ಪರೀಕ್ಷಾ ಕೇಂದ್ರಗಳನ್ನು ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸುವ ಕುರಿತಂತೆ ಕ್ರಿಯಾಯೋಜನೆ ರೂಪಿಸಬೇಕೆಂದು ಸೂಚಿಸಿದರು.
ಮಾಸ್ಕ್ , ಸ್ಯಾನಿಟೈಜರ್, ಜ್ವರ ತಪಾಸಣೆ ಕಡ್ಡಾಯ:
ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರಕ್ಕೆ ಬಂದ ಸಂದರ್ಭದಲ್ಲಿ ಮಾಸ್ಕ್, ಸ್ಯಾನಿಟೈಜರ್ ಗಳನ್ನು ಒದಗಿಸಿ ಥರ್ಮಲ್ ತಪಾಸಣೆಗೆ ಒಳಪಡಿಸಿ ಪರೀಕ್ಷೆಗೆ ಹಾಜರುಪಡಿಸಲು ಕ್ರಮ ಕೈಗೊಳ್ಳಬೇಕು. ಜ್ವರದ ಲಕ್ಷಣಗಳಿರುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿಯನ್ನು ವ್ಯವಸ್ಥೆ ಮಾಡುವಂತೆ ಸೂಚನೆ ನೀಡಿದರು.
ಯಾವುದೇ ವಿದ್ಯಾರ್ಥಿಯೂ ನೆಲದ ಮೇಲಾಗಲೀ, ಬಯಲಿನಲ್ಲಾಗಲೀ ಪರೀಕ್ಷೆ ಬರೆಯದಂತೆ ಎಚ್ಚರ ವಹಿಸಬೇಕೆಂದು ಸೂಚಿಸಿದರು.
ಕಂಟೈನ್ ಮೆಂಟ್ ವಲಯಗಳಲ್ಲಿರುವ ಪರೀಕ್ಷಾ ಕೇಂದ್ರಗಳ್ನು ಸುರಕ್ಷಿತ ವಲಯಗಳಿಗೆ ಸ್ಥಳಾಂತರಿಸುವುದು, ಪರೀಕ್ಷಾ ಕೇಂದ್ರಗಳನ್ನು ಹಾಗೂ ಕೊಠಡಿಗಳನ್ನು ಹೆಚ್ಚಿಸಲು ಸ್ಥಳ ಪರಿಶೀಲನೆ ನಡೆಸಿ ಇಲಾಖಾ ಮುಖ್ಯಸ್ಥರಿಗೆ ಕೂಡಲೇ ವರದಿ ಸಲ್ಲಿಸಬೇಕೆಂದು ಸೂಚಿಸಿದರು.

LEAVE A REPLY

Please enter your comment!
Please enter your name here

Read More

ಕೇಂದ್ರದ ಮಾಜಿ ಸಚಿವ ಶಹನವಾಜ್ ಹುಸೇನ್’ಗೆ ಕೊರೋನಾ

newsics.comಪಾಟ್ನಾ: ಕೇಂದ್ರದ ಮಾಜಿ ಸಚಿವ, ಬಿಜೆಪಿ ಹಿರಿಯ ಮುಖಂಡ ಶಹನವಾಜ್ ಹುಸೇನ್ ಆವರಿಗೆ ಕೊರೋನಾ ಸೋಂಕು ತಗುಲಿದೆ.ಕೋವಿಡ್-19 ಸೋಂಕು ತಗುಲಿರುವ ಕೆಲವು ಜನರು ನನ್ನ ಸಂಪರ್ಕಕ್ಕೆ ಬಂದಿರುವುದು ನನ್ನ ಗಮನಕ್ಕೆ...

ಷೇರು ವಂಚನೆ ಪ್ರಕರಣ; ಕಿರ್ಲೋಸ್ಕರ್ 3 ಸಹೋದರರಿಗೆ ಸೆಬಿ ದಂಡ

newsics.comಮುಂಬೈ: ಷೇರು ವಂಚನೆ ಪ್ರಕರಣಕ್ಕೆ ಸಮಭಂಧಿಸಿದಂತೆ ಮೂವರು ಕಿರ್ಲೋಸ್ಕರ್ ಸಹೋದರರಿಗೆ ಸೆಬಿ ದಂಡ ವಿಧಿಸಿದೆ.ಷೇರು ವ್ಯವಹಾರದಲ್ಲಿ 2010ರಲ್ಲಿ ನಡೆದ ವಂಚನೆ ಹಿನ್ನೆಲೆಯಲ್ಲಿ ಕಿರ್ಲೋಸ್ಕರ್ ಬ್ರದರ್ಸ್ ಲಿಮಿಟೆಡ್ (KBL) ನ ಮೂವರು...

ಮಹಾರಾಷ್ಟ್ರ ಟು ವೈಷ್ಣೋದೇವಿ; ಮಹಿಳೆಯ ಸೈಕಲ್ ಯಾತ್ರೆ

newsics.comಮುಂಬೈ: ಈಕೆ ವೈಷ್ಣೋದೇವಿಯ ಪರಮಭಕ್ತೆ. ಆದ್ದರಿಂದಲೇ ಭಾರೀ ಸಾಹಸವೊಂದಕ್ಕೆ ಮುನ್ನುಡಿ ಬರೆದಿದ್ದಾರೆ.ಮಹಾರಾಷ್ಟ್ರದ ಬುಲ್ಧಾನಾ ಜಿಲ್ಲೆಯ 68 ವರ್ಷ ವಯಸ್ಸಿನ ವೈಷ್ಣೋದೇವಿ ಭಕ್ತೆಯೊಬ್ಬರು ಒಬ್ಬರೇ 2,200 ಕಿಮೀ ಬೈಸಿಕಲ್ ತುಳಿದುಕೊಂಡು ತಮ್ಮ...

Recent

error: Content is protected !!