ನ್ಯೂಯಾರ್ಕ್: ಆಲ್ಕೋಹಾಲ್ ಪ್ರಿಯರಿಗೆ ಇಷ್ಟವಾಗುವ ಐಸ್’ಕ್ರೀಮ್ ಈಗ ಅಮೆರಿಕದಲ್ಲಿ ಲಭ್ಯ.
ಹಿಂಕ್ಲಿಯಲ್ಲಿರುವ WDS Dessert Station ಐಸ್ ಕ್ರೀಮ್ ಪಾರ್ಲರ್ನಲ್ಲಿ ನಿಮಗೆ ಆಲ್ಕೋಹಾಲ್ ಹೊಂದಿರುವ ಐಸ್ ಕ್ರೀಮ್ ಸಿಗುತ್ತದೆ. ಕೆಲ ಸಮಯದಲ್ಲಿ ಭಾರತ ಸೇರಿದಂತೆ ಹಲವೆಡೆ ಸಿಗಲಿದೆ ಎಂದು ವರದಿಗಳು ಹೇಳಿವೆ.
ಅಲ್ಕೊಹಾಲ್ ಮಿಶ್ರಿತ ಐಸ್ ಕ್ರೀಮ್ ತಯಾರಿಸುವಲ್ಲಿ ವಿಲ್ ರೋಜರ್ಸ್ ಹಲವು ವರ್ಷಗಳ ನಿರಂತರ ಯತ್ನದ ಬಳಿಕ ಯಶಸ್ವಿಯಾಗಿದ್ದಾರೆ. ಕಡಿಮೆ ಸಾಂದ್ರತೆಯ ಐಸ್ ಕ್ರೀಮ್ ಮೆಷಿನ್ ರೂಪಿಸಿದ್ದರು. ಆ ಬಳಿಕ ಆಲ್ಕೋಹಾಲ್ ಹಾಗೂ ಐಸ್ ಕ್ರೀಮ್ ಮಿಶ್ರಣಕ್ಕೆ ಎನ್ಇಎ ಜೆಲ್ ಸೇರಿಸಿ ಫ್ರೀಜ್ ಮಾಡಿದ್ದು, ಆಲ್ಕೋಹಾಲ್ ಮಿಶ್ರಿತ ಐಸ್’ಕ್ರೀಮ್ ಸಿದ್ಧವಾಗಿದೆ.
ಈ ಯಂತ್ರವು ಕಾಕ್ಟೇಲ್ ಮತ್ತು ಸ್ಪಿರಿಟ್‌ಗಳ ವಿನ್ಯಾಸವನ್ನು ಸ್ವಲ್ಪ ಬದಲಾಯಿಸುತ್ತದೆ ಎಂದು ರೋಜರ್ಸ್ ವಿವರಿಸಿದ್ದಾರೆ. ಐಸ್ ಕ್ರೀಮ್ ಸೇವಿಸಿದ ಫೀಲ್ನೊಂದಿಗೆ ಅಮಲಿನಲ್ಲಿರಬಹುದು ಎಂಬುದು ವಿಲ್ ರೋಜರ್ಸ್ ಅಭಿಪ್ರಾಯ.